ದೇಶದ ಮೊದಲ ನೀರಿನ ಮೇಲೆ ತೇಲುವ ಹೊಟೇಲ್

0
641

ಮುಂಬೈನಲ್ಲಿ ದೇಶದ ಪ್ರಥಮ ನೀರಿನ ಮೇಲೆ ತೇಲುವ ಹೊಟೇಲ್ ವೊಂದು ಲೋಕಾರ್ಪಣೆಗೊಂಡಿತು. ಇದರ ಹೆಸರು ಎಸಿ ಸೆಲೆಸ್ಟಿಯಲ್, ಇದು ವಿಲಾಸಿ ಹೊಟೇಲ್ ಆಗಿದ್ದು, ಬಾಂದ್ರಾದಲ್ಲಿ ಬಾಂದ್ರಾ-ವಾರ್ಲಿ ಸಮುದ್ರ ಸೇತುವೆಯ ಕೆಳಗಡೆ ಈ ಹೊಟೇಲ್ ನ ಮರಿಟೈಮ್ ಮಂಡಳಿಯ ಜಟ್ಟಿಯಲ್ಲಿ ನಿಂತಿರುವುದು. ಮಹಾರಾಷ್ಟ್ರ ಪ್ರವಾಸ ಅಭಿವೃದ್ಧಿ ನಿಗದಿ ಡಬ್ಲ್ಯೂಬಿ ಇಂಟರ್ ನ್ಯಾಶನಲ್ ಕನ್ಸಲ್ ಟೆನ್ಸಿ ಮತ್ತು ಎಬಿ ಹಾಸ್ಪಿಟಾಲಿಟಿ ಪಾಲುಗಾರಿಕೆಯಲ್ಲಿ ಈ ಹೊಟೇಲ್ ನ್ನು ಪ್ರಾರಂಭಿಸಲಾಗಿದೆ.

ಇದರ ವಿಶೇಷತೆಯೇನೆಂದರೆ, ಈ ಹೊಟೇಲ್ ಅರಬ್ಬಿ ಸಮುದ್ರ, ಮುಂಬೈ ಮಹಾನಗರ ಮತ್ತು ಸಮುದ್ರ ಸೇತುವೆ ವಿಹಾಂಗಮ ನೋಟವನ್ನು ಪ್ರವಾಸಿಗರಿಗೆ ತೋರಿಸಿಕೊಡಲಿದೆ. ಈ ಅತ್ಯಾಧುನಿಕ ತೇಲುವ ಹೊಟೇಲ್ ನಲ್ಲಿ ಸುಮಾರು 660 ಪ್ರವಾಸಿಗರು ಇರಬಹುದಾಗಿದೆ. ಹಾಗೂ ಬಹು ಖಾದ್ಯ ರೆಸ್ಟೋರೆಂಟ್ ಗಳು ಇಲ್ಲಿ ಕಾಣಬಹುದು. ಒಟ್ಟು 4 ಅಂತಸ್ತುಗಳಲ್ಲಿ 3 ಅಂತಸ್ತಿನ ವಿಲಾಸಿ ಡೈನಿಂಗ್ ಗಳಿವೆ. ಕ್ಲಬ್ ಲಾಂಜ್ ಸೌಲಭ್ಯ ಗಳನ್ನೊಳಗೊಂಡಿದೆ.