ಅರೆ! ಎನಿದು ಆಶ್ಚರ್ಯ. ಈ ಒಂದೇ ಹೊಟೇಲ್ ನಲ್ಲಿ 2 ದೇಶ

0
1499

 

ಈ ಹೊಟೇಲ್ ನ ಅರ್ಧ ಭಾಗ ಫ್ರಾನ್ಸ್ ಗೆ ಸೇರಿದರೆ ಇನ್ನರ್ಧ ಭಾಗ ಸ್ವಿಜರ್ಲೆಂಡ್ ಗೆ ಸೇರುತ್ತದೆ. … ಹಾಗೆಯೇ ಒಂದೇ ಹೊಟೆಲ್ ನಲ್ಲಿ ಎರಡೂ ದೇಶಗಳ ಸಂಸ್ಕೃತಿಯನ್ನು ನಾವು ಕಾಣಬಹುದು.

ನೀವು ದೇಶ, ವಿದೇಶದಲ್ಲಿ ಹೊಸ ವಿನ್ಯಾಸದ ಐಶಾರಾಮಿ ಹೊಟೇಲ್ ಗಳನ್ನು ನೋಡಿರಬಹುದು. ಅಂತಹ ಹೊಟೇಲ್ ಗಳಲ್ಲಿ ಎಂದಾದರೂ ನಿಮಗೆ “ನೀವು ಯಾವ ದೇಶದಲ್ಲಿ ಮಲಗಲು ಬಯಸುತ್ತೀರಿ” ಎಂದು ಕೇಳಲಾಗಿದೆಯಾ..?

ಫ್ರಾನ್ಸ್ ಮತ್ತು ಸ್ವಿಜರ್ಲೆಂಡ್ ನ ಗಡಿಯಲ್ಲಿ ಇರುವ ಅರ್ಬೆಜ್ ಫ್ರಾನ್ಸ್ಕೋ ಸೂಸಿ ಹೊಟೇಲ್ ಸಿಬ್ಬಂದಿಗಳು ತಮ್ಮ ಗ್ರಾಹಕರ ಬಳಿ ನೀವು ಯಾವ ದೇಶದಲ್ಲಿ ಮಲಗುತ್ತೀರಿ ಎಂದು ಕೇಳುತ್ತಾರೆ. ಎರಡು ದೇಶದ ನಡುವಲ್ಲಿ ಇರುವ ಈ ಹೊಟೇಲ್ ತುಂಬ ವಿಭಿನ್ನವಾಗಿದೆ. ಈ ಹೊಟೇಲ್ ನ ಅರ್ಧ ಭಾಗ ಫ್ರಾನ್ಸ್ ಗೆ ಸೇರಿದರೆ ಇನ್ನರ್ಧ ಭಾಗ ಸ್ವಿಜರ್ಲೆಂಡ್ ಗೆ ಸೇರುತ್ತದೆ. ಹಾಗಾಗಿ ಇಲ್ಲಿ, ನೀವು ಯಾವ ದೇಶದಲ್ಲಿ ಮಲಗುತ್ತೀರಿ ಎಂದು ಕೇಳಲಾಗುತ್ತದೆ.

ಈ ಹೊಟೇಲ್ ನ ಕೋಣೆ, ಊಟದ ಹಾಲ್ ಎಲ್ಲವೂ ಎರಡು ಭಾಗವಾಗಿ ವಿಂಗಡಣೆಯಾಗುತ್ತದೆ. ಕೆಲವು ಬೆಡ್ ರೂಮ್ ಗಳಲ್ಲಿ ಮಲಗಿದಾಗ ತಲೆ ಫ್ರಾನ್ಸ್ ನಲ್ಲಿದ್ದರೆ, ಕಾಲು ಸ್ವಿಸ್ ನಲ್ಲಿರುತ್ತದೆ. ಮಲಗುವ ಕೋಣೆ ಫ್ರಾನ್ಸ್ ನಲ್ಲಿದ್ದರೆ ವಾಶ್ ರೂಮ್ ಸ್ವಿಸ್ ನಲ್ಲಿರುತ್ತದೆ. ಹಾಗೆಯೇ ಒಂದೇ ಹೊಟೆಲ್ ನಲ್ಲಿ ಎರಡೂ ದೇಶಗಳ ಸಂಸ್ಕೃತಿಯನ್ನು ನಾವು ಕಾಣಬಹುದು.

1862 ರಲ್ಲಿ ಫ್ರಾನ್ಸ್ ಮತ್ತು ಸ್ವಿಸ್ ನಡುವಿನ ಗಡಿವಿವಾದ ಕೊನೆಗೊಂಡಿತು. ನಂತರ 1921 ರಲ್ಲಿ ಪ್ಯಾಂಥಸ್ ಎನ್ನುವ ವ್ಯಕ್ತಿ ಇಲ್ಲಿಯ ಜಮೀನನ್ನು ಖರೀದಿಸಿ ಗಡಿಯಲ್ಲಿ ಹೊಟೇಲ್ ಕಟ್ಟಿಸಿದ.