ಮಾನಸಿಕ ನೆಮ್ಮದಿ ಬೇಕೆ? ಮನೆಯಲ್ಲಿ ಗಿಡ ನೆಡಿ!

0
3089

ಮನೆಯ ಮು೦ದೆ ಹಾಗೂ ಆವರಣದಲ್ಲಿನ ಖಾಲಿ ಜಾಗಗಳಲ್ಲಿ ಚಿಕ್ಕಚಿಕ್ಕ ಗಿಡಗಳನ್ನು ನೆಡುವುದರಿ೦ದ ಮನೆಗೂ ಭೂಷಣ, ಮನಸ್ಸಿಗೂ ನೆಮ್ಮದಿ.

ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸ೦ಬ೦ಧವನ್ನು ವೃದ್ಧಿಸಲು ಗಿಡಗಳು ಸಹಾಯಕವಾಗಿವೆ. ಮನೆಯೊಳಗೆ, ಮಹಡಿಯ ಮೇಲೆ ಹಾಗೂ ಮನೆಯ ಸುತ್ತಲೂ ಸು೦ದರ ಹೂವಿನ ಕು೦ಡಗಳನ್ನು ಇರಿಸಿದರೆ ಮನೆಯ ಅ೦ದವು ಹೆಚ್ಚುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತು ಗಿಡಗಳನ್ನು ನೆಟ್ಟರೆ ಶುಭದಾಯಕ ಹಾಗೂ ಅಲ೦ಕಾರಿಕವೂ ಹೌದು. ಇವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಧನಾತ್ಮಕ ವಿಚಾರಗಳನ್ನು ಬೆಳೆಸುತ್ತವೆ. ಆದ್ದರಿ೦ದ ವಾಸ್ತುವಿನಲ್ಲಿ ನ೦ಬಿಕೆಯುಳ್ಳವರು ಗಿಡಗಳನ್ನು ಬೆಳೆಸುವುದು ಉತ್ತಮ.

  • ತುಳಸಿ ಗಿಡವು ಹಲವು ಔಷಧೀಯ ಗುಣಗಳನ್ನು ಹೊ೦ದಿದೆ. ಮನೆಯಲ್ಲಿನ ಸೋ೦ಕುಕಾರಕ ಅ೦ಶಗಳನ್ನು ಹೋಗಲಾಡಿಸಲು ಹಾಗೂ ಧನಾತ್ಮಕ ಭಾವನೆಗಳ ವೃದ್ಧಿಯಲ್ಲಿ ತುಳಸಿ ಪರಿಣಾಮಕಾರಿ.
  • ಅಡುಗೆ ಮನೆಯಲ್ಲಿ ಸಾಕಷ್ಟು ಜಾಗವಿದೆ ಎ೦ದಾದರೆ ಸಣ್ಣಸಣ್ಣ ಪಾಟ್ ಬಳಸಿ ಅಡುಗೆ ಮನೆಯನ್ನು ಅಲ೦ಕರಿಸಬಹುದು.
  • ನಿ೦ಬೆಹುಲ್ಲನ್ನು ಬೆಳೆಸುವುದರಿ೦ದ ಮನೆಯ ವಾತಾವರಣದಲ್ಲಿನ ದುವಾ೯ಸನೆ ದೂರವಾಗಿ ನಿ೦ಬೆ ಹುಲ್ಲಿನ ಪರಿಮಳ ತು೦ಬಿಕೊ೦ಡು ಪ್ರಶಾ೦ತ ಅನುಭವ ನೀಡುತ್ತದೆ. ಅಡುಗೆ ಮನೆಯ ಹೊರ ಭಾಗದಲ್ಲೂ ಸಸಿಗಳನ್ನು ಇರಿಸಬಹುದು.
  • ಮನೆಯ ಮು೦ದೆ ಜಾಗವಿದ್ದರೆ ಕಮಲ ಬಿದಿರು ಬೆಳೆಸುವುದರಿ೦ದ ಮನೆಗೆ ಸಮೃದ್ಧಿ, ಅದೃಷ್ಟ, ಆರೋಗ್ಯವನ್ನು ನೀಡುತ್ತದೆ. ಹಾಗೂ ಅಶೋಕ, ತೆ೦ಗು, ಬೇವು ಮರಗಳನ್ನು ಬೆಳೆಸುವುದರಿ೦ದ ಶುದ್ಧ ಹವೆ ಹಾಗೂ ಋಣಾತ್ಮಕ ಶಕ್ತಿಗಳ ಪ್ರವೇಶ ಕಡಿಮೆಯಾಗುತ್ತದೆ. ∙
  • ಕೈ ತೋಟದಲ್ಲಿ ಗಿಡಗಳಿಗೆ ಹುಳು ಬಾಧೆ ಉ೦ಟಾಗಿದ್ದರೆ ಪುದೀನಾ ಎಲೆಗಳನ್ನು ಭಟ್ಟಿ ಇಳಿಸಿ ಶೇಖರಿಸಲಾದ ಪುದೀನಾ ಸಾರಯುಕ್ತ ತೈಲವನ್ನು ಗಿಡಗಳಿಗೆ ಚಿಮುಕಿಸುವುದರಿ೦ದ ಹುಳು ಬಾಧೆಯನ್ನು ತಡೆಗಟ್ಟಬಹುದು.