ಐ.ಪಿ.ಎಸ್ . ಅಧಿಕಾರಿ ಎಂದು ಕೋಟ್ಯಂತರ ರೂಪಾಯಿ ವಂಚನೆ ಮಾಡಿರೋ ಇವರ ಕಥೆ ಯಾವ ಸಿನೆಮಾ ಕಥೆಗಿಂತ ಕಮ್ಮಿಯಿಲ್ಲ!!

0
156

ಕೆಲವು ದಿನಗಳ ಹಿಂದೆ ಕೇರಳದಲ್ಲಿ ಐಪಿಎಸ್ ಅಧಿಕಾರಿ ಎಂದು ಬ್ಯಾಂಕುಗಳಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಸುದ್ದಿ ವೈರಲ್ ಆಗಿತ್ತು, ಈ ಪ್ರಕರಣದಲ್ಲಿ ತಾಯಿ-ಮಗನನ್ನು ಬಂಧಿಸಲಾಗಿದ್ದು, ಐಪಿಎಸ್ ಅಧಿಕಾರಿ ಎಂದು ಬರೋಬರಿ ಮೂರು ವರ್ಷದಿಂದ ಸಿನಿಮಯ ರೀತಿಯಲ್ಲಿ ನಟನೆ ಮಾಡಿ ವಂಚನೆ ಮಾಡಿಕೊಂಡು ಬರುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಐಪಿಎಸ್ ಅಧಿಕಾರಿಯಾದ ಪ್ರೇಮಾನಂದ್ ಅವರು ಮಾಹಿತಿ ನೀಡಿದ್ದಾರೆ.

Also read: ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ‘ಸುಪ್ರೀಂಕೋರ್ಟ್​’ ಮರುಪರಿಶೀಲನಾ ಅರ್ಜಿ ತಿರಸ್ಕಾರ ಮೋದಿ ಸರ್ಕಾರಕ್ಕೆ ನಿರಾಳ.!

ಹೌದು ಈ ಪ್ರಕರಣದಲ್ಲಿ ತಾಯಿ ಮಗ ಇಬ್ಬರು ಸೇರಿ ಕಾರು ಸಾಲ ಪಡೆದು, ನಂತರ ಆ ಕಾರುಗಳನ್ನು ಮಾರಾಟ ಮಾಡಿ ಬ್ಯಾಂಕುಗಳಿಗೆ ವಂಚಿಸಿರುವ ಹಗರಣ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಭೇದಿಸಿರುವ ಕೇರಳ ಪೊಲೀಸರು ತಾಯಿಯನ್ನು ಮಗನನ್ನು ಬಂಧಿಸಿದ್ದಾರೆ. ಈ ಪ್ರಕರಣ ಹೊರಗೆ ಬರಲು ಚಿಕ್ಕ ಪರಿಚಯ ಕಾರಣವಾಯಿತು ಎಂದು ಗುರುವಾಯೂರ್‌ ಐಪಿಎಸ್ ಅಧಿಕಾರಿ ಪ್ರೇಮಾನಂದ ಹೇಳಿದ್ದು, ವಂಚನೆ ಪ್ರಕರಣ ಸಿಕ್ಕಿಬಿದ್ದ ಸ್ನೇಹಿತನಿಗೆ ಸಹಾಯ ಮಾಡಲು ಬಂದು ವಿಪಿನ್ ನಾನು ಜೆ & ಕೆ ಕೇಡರ್ನಿಂದ ಐಪಿಎಸ್ ಅಧಿಕಾರಿಯಾಗಿ ತಮ್ಮನ್ನು ಪರಿಚಯಿಸಿಕೊಂಡರು. ಆಗ ಪ್ರೇಮಾನಂದ ಅವರಿಗೆ ಅನುಮಾನ ಮೂಡಿ.

ಸ್ನೇಹಿತರನ್ನು ವಿಚಾರಿಸಿದರು “ಈ ವ್ಯಕ್ತಿ ತನ್ನ ಬ್ಯಾಚ್‌ಗೆ ಸೇರಿದವನು ಎಂದು ಯಾರಿಗೂ ತಿಳಿದಿರಲಿಲ್ಲ, ನಂತರ ಬೇರೆ ಎರಡು ಮೂರು ಬ್ಯಾಚ್ ಅಧಿಕಾರಿಗಳನ್ನು ಕೇಳಿದ್ದಾಗ ಅವರಿಗೂ ಮಾಹಿತಿ ಇರಲಿಲ್ಲ ನಂತರ ಎಲ್ಲ ಐಪಿಎಸ್ ಅಧಿಕಾರಿಗಳ ಲಿಸ್ಟ್ ತೆಗೆದು ನೋಡಿದಾಗ ವಿಪಿನ್ ಎನ್ನುವ ವ್ಯಕ್ತಿ ಇರಲಿಲ್ಲ ಎಂದು ತಿಳಿದು ಪ್ರಕರಣ ಬೆಳಕಿಗೆ ಬರಲು ಕಾರಣವಾಯಿತು ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

58 ವರ್ಷ ವಯಸ್ಸಿನ ಶ್ಯಾಮಲಾ ವೇಣುಗೋಪಾಲ್ ಹಾಗೂ ಆಕೆಯ ಪುತ್ರ 29 ವರ್ಷ ವಯಸ್ಸಿನ ವಿಪಿನ್ ಕಾರ್ತಿಕ್ ಅವರು ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ವಿಪಿನ್ ಕಾರ್ತಿಕ್ ತನ್ನನ್ನು ಕಾಶ್ಮೀರ ಮೂಲದ ಐಪಿಎಸ್ ಅಧಿಕಾರಿಯೆಂದು ನಕಲಿ ದಾಖಲೆಗಳನ್ನು ಸಲ್ಲಿಸಿ, ಸಾಲ ಪಡೆದಿದ್ದಾನೆ. ಆತನ ತಾಯಿ ಶ್ಯಾಮಲಾ ತನ್ನ ಮಗನ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಂತೆ ನಟಿಸಿದ್ದಾರೆ. ತಾಯಿ ಮಗ ಇಬ್ಬರೂ ಸೇರಿ ನಕಲಿ ದಾಖಲೆಗಳನ್ನು ಸಲ್ಲಿಸಿ, ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು 28 ಕಾರುಗಳನ್ನು ಖರೀದಿಸಿದ್ದಾರೆ. ನಂತರ ಆ ಕಾರುಗಳನ್ನು ಉಪಯೋಗಿಸಿದ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಆದರೆ ಬ್ಯಾಂಕುಗಳಿಗೆ ವಂಚಿಸಿ, ಸಾಲಗಳ ಮೂಲಕ ಖರೀದಿಸಿದ ಆ ಕಾರುಗಳು ಈಗ ಎಲ್ಲಿವೆ ಎಂಬ ಬಗ್ಗೆ ತಾಯಿ ಮಗ ಇಬ್ಬರಿಗೂ ತಿಳಿದಿಲ್ಲ.

ಕೇರಳ ಪೊಲೀಸರ ಪ್ರಕಾರ ಈ ಇಬ್ಬರೂ ಗುರುವಾಯೂರ್‍‍ನಲ್ಲಿರುವ ಬ್ಯಾಂಕುಗಳಿಂದ ಸಾಲ ಪಡೆದು ಒಟ್ಟು 12 ಕಾರುಗಳನ್ನು ಖರೀದಿಸಿದ್ದರೆ, ನಾದಪುರಂ, ತಲಷೇರಿ, ಕೊಟ್ಟಾಯಂ, ತಿರುವನಂತಪುರಂ, ಕಲಮಶೇರಿ, ಎರ್ನಾಕುಲಂ, ಕೊಯಿಲಾಂಡಿ ಹಾಗೂ ವಡಕರಾಗಳಲ್ಲಿರುವ ಬ್ಯಾಂಕುಗಳಿಂದ ಸಾಲ ಪಡೆದು 16 ಕಾರುಗಳನ್ನು ಖರೀದಿಸಿದ್ದಾರೆ. ವಿಪಿನ್ ತಾಯಿ ಶ್ಯಾಮಲಾ ಮೂಲತಃ ಮನಲುಟ್ಟಂನ ಕುನಿಯಿಲ್‍‍ಗೆ ಸೇರಿದವರು. ಪೊಲೀಸರು ಪರಾರಿಯಾಗಿರುವ ವಿಪಿನ್‍‍ಗಾಗಿ ಶೋಧ ನಡೆಸುತ್ತಿದ್ದಾರೆ. ಮೊದಲಿಗೆ ಬಿಲಾತಿಕುಲಂ ಅಪಾರ್ಟ್‍‍ಮೆಂಟ್‍‍ನ ವಿಳಾಸ ಹೊಂದಿದ್ದ ಆಧಾರ್ ಕಾರ್ಡ್ ನೀಡಿ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದಾರೆ.

ಇದಾದ ನಂತರ ನಕಲಿ ಸ್ಯಾಲರಿ ಸರ್ಟಿಫಿಕೇಟ್ ಹಾಗೂ ವಿಪಿನ್ ಐ‍‍ಪಿ‍ಎಸ್ ಅಧಿಕಾರಿಯ ಯೂನಿಫಾರಂ ತೊಟ್ಟಿದ್ದ ಫೋಟೊ ನೀಡಿದ್ದಾರೆ. ಸಾಲ ಪಡೆಯಲು ಬ್ಯಾಂಕುಗಳಲ್ಲಿ ಭಾರೀ ಮೊತ್ತದ ಹಣವಿರುವ ನಕಲಿ ಬ್ಯಾಂಕ್ ಸ್ಟೇಟ್‍‍ಮೆಂಟ್‍‍ಗಳನ್ನು ನೀಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಬ್ಯಾಂಕುಗಳೂ ಸಹ ಈ ಇಬ್ಬರ ವಂಚನೆಯ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ. ಹಿಂದೆ ಮುಂದೆ ನೀಡದೇ ಸಾಲ ಮಂಜೂರು ಮಾಡಿದ್ದಾರೆ. ವಿಪಿನ್ ನಕಲಿ ಯೂನಿಫಾರಂನಲ್ಲಿ ಗುರುವಾಯೂರಿನ ಶ್ರೀ ಕೃಷ್ಣ ದೇವಸ್ಥಾನ ಹಾಗೂ ಬೇರೆ ಪೊಲೀಸ್ ಠಾಣೆಗಳಲ್ಲಿರುವ ಫೋಟೊಗಳನ್ನು ಬ್ಯಾಂಕುಗಳಿಗೆ ನೀಡಿದ್ದಾನೆ.

ಓವರ್‍‍ಸೀಸ್ ಬ್ಯಾಂಕಿಗೆ ರೂ.25 ಲಕ್ಷ ಹಾಗೂ 95 ಸವರನ್ ಚಿನ್ನವನ್ನು ವಂಚಿಸಿರುವ ಬಗ್ಗೆ ಆ ಬ್ಯಾಂಕಿನ ಮ್ಯಾನೇಜರ್ ದೂರು ನೀಡಿದ್ದಾರೆ. ಶ್ಯಾಮಲಾರವರು ತಮ್ಮ ವಿಪಿನ್ ಕ್ಯಾನ್ಸರ್ ಪೇಷಂಟ್ ಎಂದು ಬ್ಯಾಂಕಿಗೆ ನಂಬಿಸಿ, ಚಿನ್ನ ಹಾಗೂ ಹಣ ಪಡೆದಿದ್ದಾರೆ. ಹೀಗೆ ಮೂರು ವರ್ಷದಿಂದ ವಂಚನೆ ಮಾಡುತ್ತಿದ್ದು ಈಗ ತಾಯಿ-ಮಗ ಜೈಲು ಸೇರಿದ್ದಾರೆ.

Also read: ಶಬರಿಮಲೆ ಮಹಿಳೆಯರ ಪ್ರವೇಶ ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದ ಸುಪ್ರೀಂಕೋರ್ಟ್; ಹಿಂದೂಗಳಿಗೆ ಸೀಮಿತವಲ್ಲ ಎಲ್ಲ ಧರ್ಮಗಳಿಗೂ ಅನ್ವಯ.!