ಗ್ರಾಹಕರೆ ಜಾಗೃತರಾಗಿರಿ, ಹಣ್ಣು ಕೋಳ್ಳುವ ಮುನ್ನ ಒಮ್ಮೆ ಯೋಚಿಸಿ!

0
2293

ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ, ಪೌಷ್ಟೀಕಾಂಶಗಳು ಹಾಗು ಜೀವಸತ್ವಗಳ ಅಗರವಾಗಿರುವ ಹಣ್ಣುಗಳನ್ನು ಋತುಮಾನಕ್ಕನುಗುಣವಾಗಿ ತಿನ್ನಲು ಏಲ್ಲಾರಿಗೂ ಇಷ್ಟ, ನೀವು ಹಣ್ಣುಗಳನ್ನು ತಿನ್ನುವಾಗ ಓಮ್ಮೆಯಾದರೂ ಯೊಚಿಸಿದ್ದಿರಾ ನಾವು ತಿನ್ನುತ್ತಿರುವ ಮಾವು, ಬಾಳೇ, ಪಪ್ಪಾಯ, ದ್ರಾಕ್ಷಿ , ಸೇಬುಹಣ್ಣು ಹಾಗೂ ಟೋಮೇಟೋ ಏಷ್ಟು ಸುರಕ್ಷಿತ ಎಂದು? ಇದೇನು ಹೀಗೆ ಕೇಳುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿರಬಹುದು. ನ್ಯೆಸರ್ಗಿಕವಾಗಿ ಮಾಗಿದ ಮೇಲಿನ ಹಣ್ಣುಗಳು ನಿಮಗೆ ಸಿಗುವುದು ದುರ್ಲಬ, ಬೇಗ ಮಾಗಿದರೆ, ಬೇಗ ಮಾರಬಹುದು ಹೆಚ್ಚು ಹಣ ಸಂಪಾದಿಸಬಹುದು ಎಂಬ ವ್ಯಾಪಾರಿ ಮನೋಭಾವ ಗ್ರಾಹಕರ ಅರೋಗ್ಯಕ್ಕೆ ಕುತ್ತುತರುತ್ತಿದೆ.

ಕೃತಕವಾಗಿ ಮಾಗಿಸಲು ಬಳಸುವ ರಾಸಾಯನಿಕಗಳಾವುವು?

ಕ್ಯಾಲ್ಸಿಯಂ ಕಾಬ್ರ್ಯೆಡ್, ಅಸಿಟಲೀನ್,ಇಥಿಲಿನ್,ಪ್ರೋಪಿಲಿನ್ ಗ್ಲೈಕಾಲ್ ಹಾಗೂ ಇಥೆನಾಲ್ ಗಳನ್ನು ಬಳಸುತ್ತಾರಾದರೂ ಹೆಚ್ಚಾಗಿ ಬಳಕೆಯಾಗುವುದು ಕ್ಯಾಲ್ಸಿಯಂ ಕಾಬ್ರ್ಯೆಡ್,ಈ ರಾಸಾಯನಿಕವನ್ನು ಹಲವಾರು ದೇಶಗಳು ನಿಷೇದಿಸಿದೆಯಾದರೂ ಭಾರತ, ಪಾಕಿಸ್ತಾನ್, ನೇಪಾಳ್ ಹಾಗು ಬಾಂಗ್ಲಾದೇಶಗಳಲ್ಲಿ ಮುಕ್ತವಾಗಿ ಉಪಯೋಗಿಸಲಾಗುತ್ತದೆ, ಹಣ್ಣುಗಳನ್ನು ಬೇಗ ಮಾಗಿಸುವುದರಲ್ಲಿ ಕ್ಯಾಲ್ಸಿಯಂ ಕಾಬ್ರ್ಯೆಡ್ ಎತ್ತಿದಕ್ಯೆ, ನ್ಯೆಸರ್ಗಿಕವಾಗಿ ಹಣ್ಣಾಗಲು ಸಾಮಾನ್ಯವಾಗಿ ಹತ್ತರಿಂದ ಹನ್ನೆರಡು ದಿನ ಬೇಕು, ಅದರೆ ಈ ರಾಸಾಯನಿಕ 6-8 ದಿನದಲ್ಲಿ ಹಣ್ಣನ್ನು ಮಾಗಿಸುತ್ತದೆ, ಬಲಿತ ಹಸುರಾಗಿರುವ ಹಣ್ಣುಗಳನ್ನು ಕಿತ್ತಿ ಅದಕ್ಕೆ ಕ್ಯಾಲ್ಸಿಯಂ ಕಾಬ್ರ್ಯೆಡ್ ಉದುರಿಸಿ ಹಣ್ಣಾಗಿಸುತ್ತಾರೆ, ರಾಸಾಯನಿಕ ಕೃತಕವಾಗಿ ಹೇಗೆ ಹಣ್ನನ್ನು ಮಾಗಿಸುತ್ತದೆ? ಹಣ್ಣು ನ್ಯೆಸರ್ಗಿಕವಾಗಿ ಮಾಗುವಾಗ ಅದರಲ್ಲಿರುವ ಪಿಷ್ಟ ಸಕ್ಕರೆಯಾಗಿಪರಿವರ್ತನೆಯಾಗುತ್ತದೆ, ಈ ಕ್ರಿಯೆ ನೆಡೆಯುವಾಗ ಮಾವಿನಹಣ್ಣು ಬಾಳೆಹಣ್ಣಿನ ಸಿಪ್ಪೆ ಹಳದಿಗೆ ತಿರುಗಿದರೆ, ಟೋಮೇಟೊ ಮತ್ತು ಸೇಬಿನಲ್ಲಿ ಕೆಂಪುಬಣ್ಣಕ್ಕೆ ತಿರುಗುತ್ತದೆ, ಈ ಕ್ರಿಯೆಗೆ ಹಣ್ಣುಗಳಲ್ಲಿ ನ್ಯೆಸರ್ಗಿಕವಾಗಿರುವ ಇಥೆಲಿನ್ ಸಹಾಯಮಾಡುತ್ತದೆ, ಈ ನ್ಯೆಸರ್ಗಿಕ ಕ್ರಿಯೆ 10-15 ದಿನ ತೆಗೆದುಕೊಳ್ಳುತ್ತದೆ,ಈ ಇಥೆಲಿನ್‍ನನ್ನು ಕೃತಕವಾಗಿ ಹಣ್ಣುಗಳಮೇಲೆ ಹಾಕಿದರೆ? ಅದನ್ನೇ ಈಗ ವ್ಯಾಪಾರಿಗಳು ಮಾಡುತ್ತಿರುವುದು. ಬಲಿತ ಕಾಯಿಗಳನ್ನು ಕಿತ್ತು ಮರದ ಪೆಟ್ಟಿಗೆಗಳಲ್ಲಿ ಹುಲ್ಲನ್ನು ಹಾಕಿ ಅದನ್ನು ಒಂದರಮೇಲೊಂದರಂತೆ ಇಟ್ಟು ಕೆಳಗೆ ಕೃತಕ ಇಥೆಲಿನ್ ಅಥವಾ ಅಸಿಟಲಿನ ಅನಿಲವನ್ನು ಹಾಯಿಸುತ್ತಾರೆ, ಇಲ್ಲದ್ದಿದ್ದರೆ ಅದರ ಮೇಲೆ ಕ್ಯಾಲ್ಸಿಯಂ ಕಾಬ್ರ್ಯೆಡ್ ಪುಡಿಯನ್ನು ಉದುರಿಸುತಾರೆ, ಇದು ಕಾಯಿಯಲ್ಲಿರುವ ತೇವಾಂಶದೊಂದಿಗೆ ವರ್ತಿಸಿದಾಗ ಅಸಿಟಲಿನ್ ಅಗಿಪರಿವರ್ತನೆಯಾಗುತ್ತದೆ ಹಣ್ಣನ್ನು ಬೇಗ ಮಾಗುವಂತೆ ಪ್ರೇರೆಪಿಸುತ್ತದೆ.

ಕೃತಕವಾಗಿ ಮಾಗಿದ ಹಣ್ಣುಗಳಿಂದಾಗುವ ದುಷ್ಪರಿಣಾಮಗಳು:

 • ಸ್ವಲ್ಪ ಪ್ರಾಮಾಣದಲ್ಲಿ ಕ್ಯಾಲ್ಸಿಯಂ ಕಾಬ್ರ್ಯೇಡ್ ನಲ್ಲಿರುವ ರಂಜಕ ಹಾಗೂ ಅರ್ಸೆನಿಕ್ ಅಂಶದಿಂದ ಮೊದಲನೆಯದಾಗಿ ವಾಂತಿ, ಬೇದಿ, ಕೆಲವೊಮ್ಮೆ ರಕ್ತ ಮಿಶ್ರಿತ ಅಮಶಂಕೆ, ಹೊಟ್ಟೆ ಹಾಗೂ ಎದೆಯ ಭಾಗದಲ್ಲಿ ಉರಿ, ಅತಿಯಾದ ಬಾಯಾರಿಕೆ, ಸುಸ್ತು, ಅಹಾರ ಸೇವಿಸಲು ಕಷ್ಟವಾಗುವುದು, ಕಣ್ಣುರಿಯಲ್ಲದೇ ಕಣ್ಣಿಗೆ ಖಾಯಂ ತೊಂದರೆಯಾಗಬಹುದು.
 • ಗಂಟಲು ನೋವು ಕೆಮ್ಮು ಉಸಿರಾಟಕ್ಕೂ ತೊಂದರೆಯಾಗುತ್ತದೆ.
 • ಈ ಕೃತಕ ಮಾಗಿದ ಹಣ್ಣುಗಳನ್ನು ತಿನ್ನುತ್ತಿದ್ದರೆ ಈ ರಾಸಾಯನಿಕಗಳು ನಿಮ್ಮ ದೇಹದಲ್ಲಿ ಹೆಚ್ಚಾಗಿ ಶೇಕರಣೆಯಾದರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ.
 • ಈ ರಾಸಾಯನಿಕ ಕ್ಷಾರಗುಣವಾಗಿರುವುದರಿಂದ ಕರುಳಿನ ಸ್ನಾಯುಗಳಿಗೆ ಹಾನಿಯುಂಟುಮಾಡಿ ಕರುಳಿನ ಹುಣ್ಣಿಗೆ ಕಾರಣವಾಗುತ್ತದೆ, ತಲೆನೋವು, ತಲೆಸುತ್ತು, ಯಾವುದೇ ಕೆಲಸದ ಮೇಲೆ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯವಾಗದೆ ಇರುವುದು, ಗಲಿಬಿಲಿಯಗುವುದು ಹಾಗೂ ನಡುಕವನ್ನು ತರಿಸುತ್ತದೆ.
 • ನಿರಂತರವಾಗಿ ಈ ರಾಸಾಯನಿಕಗಳು ದೇಹವನ್ನು ಸೇರುತ್ತಿದ್ದರೆ ಇದು ಕ್ಯಾನ್ಸರ ಕಾರಕವಾಗಬಹುದು ಎಂದು ಸಾಬೀತಾಗಿದೆ.
 • ಈ ರಾಸಾಯನಿಕಗಳು ನಿರಂತರವಾಗಿ ಗರ್ಭಿಣಿಯರ ದೇಹವನ್ನು ಸೇರಿದರೆ ಗರ್ಭಪಾತವಾಗುವ ಸಂಭವ ಇರುತ್ತದೆ. ಮತ್ತು ಹುಟ್ಟುವ ಮಗುವಿನ ನರಮಂಡಲದ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಕೃತಕ ಮಾಗಿದ ಹಣ್ಣನ್ನು ಕಂಡುಹಿಡಿಯುವುದು ಹೇಗೆ?

 1. ಕೃತಕ ಮಾಗಿದ ಹಣ್ಣುಗಳ ಬಣ್ಣ ಒಂದೆಸಮನಾಗಿ ಇರುವುದಿಲ್ಲಾ, ಉದಾಹರಣೆಗೆ ಮಾವಿನ ಹಣ್ಣನ್ನೆ ತೆಗೆದುಕೊಳ್ಳಿ, ಹಳದಿ ಹಸಿರು ಮಿಶ್ರಿತ ಇದ್ದರೆ ಅದು ಕೃತಕವಾಗಿ ಮಾಗಿದ್ದು, ರಾಸಾಯನಿಕ ಪೂರ್ತಿ ಹಣ್ಣನ್ನು ಅವರಿಸದಿದ್ದಾಗ ಅಂತಹ ಜಾಗದಲ್ಲಿ ಹಸಿರಾಗಿರುತ್ತದೆ.
 2. ಎರಡನೆಯದಾಗಿ ಅದಕ್ಕೆ ನ್ಯೆಸರ್ಗಿಕ ಸಿಹಿ ಮಿಶ್ರಿತ ವಾಸನೆ ಸಹ ಬರುವುದಿಲ್ಲಾ! ಹಣ್ಣು ಹುಳಿಮಿಶ್ರಿತ ಸಿಹಿಯಿಂದ ಕೂಡಿರುತ್ತದೆ.
 3. ನೀರಿನ ಬಕೆಟ್‍ನಲ್ಲಿ ಹಾಕಿದಾಗ ನೈಸರ್ಗಿಕವಾಗಿ ಮಾಗಿದ ಹಣ್ಣು ಮುಳುಗುತ್ತದೆ, ಕೃತಕ ಮಾಗಿದ ಹಣ್ಣು ತೆಲುತ್ತದೆ, ಅಲ್ಲದೇ ತೇವಾಂಶ ಇರದ ಕಾರಣ ಹಣ್ಣಿನಲ್ಲಿ ರಸ ಹೆಚ್ಚಾಗಿರುವುದಿಲ್ಲಾ.
 4. ಬಾಳೆಹಣ್ಣು ತೊಟ್ಟು ಹಸಿರು ಬಣ್ಣದಲ್ಲಿದ್ದು ಹಣ್ಣು ಹಳದಿ ಬಣ್ಣದಲ್ಲಿ ಇದ್ದರೆ ಅವನ್ನು ಕೃತಕವಾಗಿ ಮಾಗಿಸಲಾಗಿದೆ ಎಂದು ತಿಳಿದುಕೊಳ್ಳಬೇಕು. ಸಹಜಸಿದ್ಧವಾಗಿ ಮಾಗಿದ ಹಣ್ಣಾದರೆ ತೊಟ್ಟು ಸಹ ಹಳದಿ ಬಣ್ಣದಲ್ಲಿರುತ್ತದೆ.
 5. ಸೀಸನ್ ಆರಂಭವಾಗುವುದಕ್ಕೂ ಮೊದಲೇ ಮಾರುಕಟ್ಟೆಗೆ ಬರುವ ಹಣ್ಣುಗಳನ್ನು ಕೊಳ್ಳಬಾರದು. ಅವುಗಳನ್ನು ಕೃತಕವಾಗಿ ಹಣ್ಣಾಗಿಸಿರುತ್ತಾರೆ.

ಈ ರಾಸಾಯನಿಕಗಳನ್ನು ಪಪ್ಪಾಯಿಯಲ್ಲದೆ ಟಮೇಟೋವನ್ನು ಮಾಗಿಸುವುದಕ್ಕೂ ಉಪಯೋಗಿಸುತ್ತಾರೆ, ಹಾಗಾಗಿ ಮನೆಗೆ ತಂದ ಹಣ್ಣು ತರಕಾರಿಗಳನ್ನು ಕನಿಷ್ಟಪಕ್ಷ 2-3 ನಿಮಿಷಗಳಾದರು ನಲ್ಲಿನೀರಿನಲ್ಲಿ ತೊಳೆಯಬೇಕು. ಹಣ್ಣು ಖರೀದಿ ಮಾಡಲು ಹೋದಾಗ ಹೆಚ್ಚು ವಾಸನೆಯುಕ್ತ ಹಣ್ಣನ್ನೆ ಖರೀದಿ ಮಾಡಿ, ಪೂರ್ತಿಯಾಗಿ ಒಂದೇ ಬಣ್ಣವಿರುವ ಹಣ್ಣನ್ನು ಖರೀದಿಸಿ.

ಈ ರೀತಿ ಕೃತಕವಾಗಿ ಹಣ್ಣುಗಳನ್ನು ಮಾಗಿಸುವುದನ್ನು ಅನೇಕ ದೇಶಗಳು ನಿಷೇಧಿಸಿವೆ. ನಮ್ಮ ದೇಶದಲ್ಲೂ ಈ ರೀತಿ ಮಾಡುವುದರ ಬಗ್ಗೆ ನಿಷೇಧವಿದೆ. ಆದರೂ ಕೆಲವು ವ್ಯಾಪಾರಿಗಳು ಲಾಭಾಪೇಕ್ಷೆಯಿಂದ ಆ ರೀತಿ ಹಣ್ಣುಗಳನ್ನು ಪಕ್ವವಾಗಿಸಿ ಜನರ ಆರೋಗ್ಯದೊಂದಿಗೆ ಚಲ್ಲಾಟ ಆಡುತ್ತಿದ್ದಾರೆ. ಈ ರಾಸಾಯನಿಕಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಏಂದು ಗೊತ್ತಿದ್ದರೂ ಸರ್ಕಾರ ಇವರೆ ಮೇಲೆ ಕ್ರಮ ಕ್ಯೆಗೊಳ್ಳುವುದಿಲ್ಲಾ.

ಯಾವುದಕ್ಕೂ ಗ್ರಾಹಕರೆ ಜಾಗೃತರಾಗಬೇಕು, ಹಣ್ಣು ಕೋಳ್ಳುವ ಮುನ್ನ ಒಮ್ಮೆ ಯೋಚಿಸಿ!