ಅತಿಯಾಸೆ ಮತ್ತು ಜೋತಿಷ್ಯರ ಮಾತು ವ್ಯಕ್ತಿಯನ್ನು ಎಲ್ಲಿಗೆ ತರುತ್ತದೆ, ಎನ್ನುವುದಕ್ಕೆ ಶರವಣ ಭವನದ ದೋಸೆ ರಾಜನಿಗೆ ಬಂದ ಪರಿಸ್ಥಿತಿ ನೋಡಿದರೆ ತಿಳಿಯುತ್ತೆ..

0
1095

ಬಡತನದಿಂದ ಕಷ್ಟಪಟ್ಟು ಮೇಲೆ ಬರಲು ಸಾಕಷ್ಟ ಪರಿಶ್ರಮ ಬೇಕಾಗುತ್ತೆ, ಅದರ ಜೊತೆಗೆ ಅದೃಷ್ಟವೂ ಇರಬೇಕಾಗುತ್ತೆ, ಒಂದು ವೇಳೆ ಇವೆಲ್ಲವೂ ದೊರಕಿ ವ್ಯಕ್ತಿ ಶ್ರೀಮಂತನಾಗುವ ಲಕ್ಷಣಗಳು ಕಂಡು ಬಂದರೆ. ತಕ್ಷಣವೇ ಅತಿಯಾಸೆಗೆ ಬಿಳ್ಳುವುದು ಸಾಮಾನ್ಯ, ಈ ಅತಿಯಾಸೆ ಗೆ ಛೂ.. ಬಿಡುವ ಜ್ಯೋತಿಷಿಗಳ ಮಾತು ಸರಳ ವ್ಯಕ್ತಿಯನ್ನು ನಾಯಿ ಪಾಡಿಗೆ ತಳ್ಳುತ್ತೆ, ಇಂತಹ ಪ್ರಕರಣಕ್ಕೆ ಉದಾಹರಣೆಯಾದ ತಮಿಳುನಾಡಿನ ಶರವಣ ಹೋಟೆಲ್ ಮಾಲೀಕ ರಾಜಗೋಪಾಲ್ ದೇಶವನ್ನೇ ಆಳುವ, ಕೋಟಿ ಕೋಟಿ ಹಣದ ಮೇಲೆ ಮಲಗುವ ಆಸೆಗೆ ಬಿದ್ದು ಜ್ಯೋತಿಷಿಯ ಸಲಹೆಯಂತೆ ಏನಾದ ನೋಡಿ.

ಹೌದು ದೇಶದಲ್ಲೇ ದೋಸೆಗೆ ಪೇಮಸ್ ಆಗಿ ಲಂಡನ್‌, ಸಿಂಗಾಪುರ, ಸಿಡ್ನಿ, ಸ್ಟಾಕ್‌ಹೋಮ್‌ ಸೇರಿದಂತೆ ವಿದೇಶಗಳಲ್ಲೂ ಕೂಡ ಹಲವು ಬ್ರಾಂಚ್-ಗಳನ್ನು ಹೊಂದಿದ ಶರವಣ ಭವನದ ದೋಸೆ ರಾಜ, ಒಂದು ರೀತಿಯ ಜನರಿಗೆ ಎಚ್ಚರಿಕೆ ಪೀಸ್ ಆಗಿದ್ದಾರೆ. ಏಕೆಂದರೆ ಪ್ರಿನ್ಸ್ ಶಾಂತಕುಮಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸರವಣ ಭವನ ಹೋಟೆಲ್‌ಗಳ ಸ್ಥಾಪಕ ಪಿ. ರಾಜಗೋಪಾಲ್‌ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇವರ ಶಿಕ್ಷೆಯ ಹಿಂದೆ ಒಬ್ಬ ಜ್ಯೋತಿಷಿ ಇದ್ದ ಎನ್ನುವುದು ತಿಳಿದಿದೆ. ಹಾಗಾದ್ರೆ ದೋಸೆ ರಾಜನಾಗಿ ಮೆರೆದು ಕೊನೆಗೆ ಹೇಗೆ ಸತ್ತ ಎನ್ನುವುದಕ್ಕೆ ಒಂದು ಕತೆ ಇದೆ ನೋಡಿ.

ಏನಿದು ದೋಸೆ ರಾಜನ ಕತೆ?

ಹೆಸರಿನಲ್ಲೇ ಬ್ರಾಂಡ್ ಇರುವ ರಾಜಗೋಪಾಲ್ ತಮಿಳುನಾಡಿನಲ್ಲಿ ಬಡವನಾಗಿ ಈರುಳ್ಳಿ ಮಾರಿಕೊಂಡಿದ್ದ, ಒಂದು ದಿನ ಜ್ಯೋತಿಷಿಯೊಬ್ಬ ಬಂದು ನೀನು ಹೋಟೆಲ್‌ ಆರಂಭಿಸಿದರೆ ಮೇಲೆ ಬರುತ್ತೀಯಾ ಎಂದು ಭವಿಷ್ಯ ಹೇಳಿದ್ದ. ಅದೇ ಸಮಯಕ್ಕೆ ಕಾಮಾಕ್ಷಿ ಭವನ ಎಂಬ ಚಿಕ್ಕ ಹೋಟೆಲ್ಲನ್ನು ಅದರ ಯಜಮಾನ ನಷ್ಟದಿಂದ ಮುಚ್ಚಲು ಹೊರಟಿದ್ದ. ರಾಜಗೋಪಾಲ್‌ ತನ್ನ ಸ್ನೇಹಿತನ ಜೊತೆ ಸೇರಿ ಅದನ್ನು ಕೊಂಡುಕೊಂಡು, ‘ಸರವಣ ಭವನ’ ಎಂದು ಹೆಸರಿಟ್ಟರು. ಉದ್ಯಮ ಬೆಳೆಸಲು. ಅಡುಗೆಗೆ ಶುದ್ಧ ತೆಂಗಿನ ಎಣ್ಣೆ, ಗುಣಮಟ್ಟದ ತರಕಾರಿ ಬಳಸಿದರು. ಸಿಬ್ಬಂದಿಗೆ ಉತ್ತಮ ಸಂಬಳ ನೀಡಿದರು. ಇಡಿ ದೇಶದಲ್ಲೇ ಮಿಂಚಿದ. ನಂತರ ಚೆನ್ನೈನಲ್ಲಿ ಇವರ ಹೋಟೆಲ್‌ ಮನೆಮಾತಾಯಿತು ಅಲ್ಲಿಂದ ರಾಜಗೋಪಾಲ… ಹಿಂತಿರುಗಿ ನೋಡಲೇ ಇಲ್ಲ. ಹಾಗೆಯೇ ಇವರಿಗೆ ‘ದೋಸೆ ಕಿಂಗ್‌’ ಎಂಬ ಖ್ಯಾತಿ ಬಂತು.

ಹೀಗೆ ಇಡಿ ಚನ್ನೈಗೆ ಶ್ರೀಮಂತ ಪಟ್ಟಿಯಲ್ಲಿ ಸೇರುವ ಹಂತಕ್ಕೆ ಬಂದು ಭಾರತದಲ್ಲಿ 30 ರೆಸ್ಟೋರೆಂಟ್‌ಗಳು, ಅಮೆರಿಕ, ಗಲ್ಪ್ ರಾಷ್ಟ್ರಗಳು, ಯುರೋಪ್‌ ಮತ್ತು ಆಸ್ಪ್ರೇಲಿಯಾಗಳಲ್ಲಿ 70ಕ್ಕೂ ಹೆಚ್ಚು ಸರವಣ ಭವನಗಳನ್ನು ತೆರೆದ. ದೋಸೆ ರಾಜನಿಗೆ, ಏಳಿಗೆಗೆ ಕಾರಣರಾಗಿದ್ದ ಜ್ಯೋತಿಷಿ ಮತ್ತೆ 2000ನೇ ಇಸ್ವಿಯಲ್ಲಿ ಎದುರಾಗಿ ಇನಷ್ಟು ಶ್ರೀ ಮಂತನಾಗಲು ಸಹಲೆಯೊಂದನ್ನು ನೀಡಿದ, ಆ ಸಲಹೆ ಏನೆಂದರೆ? ಇನ್ನೂ ಇಪತ್ತು ದಾಟದ, ಎಡಗೆನ್ನೆಯ ಮೇಲೆ ಮಚ್ಚೆಯಿರುವ ಹುಡುಗಿಯೊಬ್ಬಳಿದ್ದಾಳೆ. ಆಕೆಯ ಮದುವೆಯಾಗಿ ನೋಡು ಕೋಟಿಗಳಲ್ಲಿ ಹೊರಳಾಡುತ್ತೀಯ’ ಎಂದು ಭವಿಷ್ಯ ನುಡಿದಿದ್ದರು. ರಾಜಗೋಪಾಲ್‌ ಈ ಲಕ್ಷಣದ ಹುಡುಗಿಯ ಹುಡುಕಾಟದಲ್ಲಿರುವಾಗ ಸರವಣ ಭವನದ ಚೆನ್ನೈ ಬ್ರಾಂಚ್‌ನ ಅಸಿಸ್ಟೆಂಟ್‌ ಮ್ಯಾನೇಜರ್‌ನ ಮಗಳು ಜೀವಜ್ಯೋತಿಗೆ ಕೆನ್ನೆಯ ಮೇಲೆ ಬೇಳೆ ಕಾಳಿನ ಗಾತ್ರದ ಮಚ್ಚೆಯಿದೆ ಎಂಬ ವಿಷಯ ತಿಳಿಯಿತು. ಆಕೆ ನೋಡುವುದಕ್ಕೂ ಚೆನ್ನಾಗಿದ್ದಳು. ಅಲ್ಲಿಂದ ಜೀವಜ್ಯೋತಿ ಮೇಲೆ ರಾಜಗೋಪಾಲ್‌ ಕಣ್ಣು ಬಿತ್ತು.

ರಾಜಗೋಪಾಲ್‌ಗೆ ಮೊದಲೇ ಇಬ್ಬರು ಹೆಂಡಿರಿದ್ದರು. ನಿರೀಕ್ಷೆಯಂತೆ ಜೀವಜ್ಯೋತಿ ಇವರ ಪ್ರಸ್ತಾಪವನ್ನು ತಿರಸ್ಕರಿಸಿ, ಶಾಂತಕುಮಾರ್ ಎನ್ನುವರನ್ನು ಮದುವೆಯಾದರು. ಆದರೆ ಯಾರಿಂದಲೂ ‘ನೋ’ ಎಂಬ ಉತ್ತರ ಕೇಳಿದ ದೊಸೆರಾಜ ಹುಡುಗಿಯ ಕುಟುಂಬವನ್ನು ಹೊಡೆದು, ಬಡಿದು ‘ದಾರಿಗೆ ತರುವ’ ಪ್ರಯತ್ನ ಮಾಡಿದರು. ಆಗ ದಂಪತಿಗಳಿಬ್ಬರೂ ರಾಜಗೋಪಾಲ್‌ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿದ್ದರು. ಅದಾದ ನಂತರ 2001ರಲ್ಲಿ ಶಾಂತಕುಮಾರ್‌-ನನ್ನು ಕೊಲೆ ಮಾಡಿಸಿದ. ಇದಕ್ಕೆ ಸರಿಯಾದ ಸಾಕ್ಷಿಯಿಂದ ರಾಜಗೋಪಾಲನಿಗೆ ಶಿಕ್ಷೆಯಾಯಿತು, 2003ರಲ್ಲಿ ಜಾಮೀನು ಪಡೆದು ಹೊರಬಂದ್ದು, ಮತ್ತೆ ಹುಡುಗಿಯ ಕುಟುಂಬದವರನ್ನು ಕೊಲೆ ಮಾಡಲು ಯತ್ನಿಸಿ ಮತ್ತೆ ಜೈಲು ಸೇರಿದ.
ಕೊಲೆ ಆಪಾದನೆ ಮೇಲೆ ಸ್ಥಳೀಯ ನ್ಯಾಯಾಲಯ ರಾಜಗೋಪಾಲ್‌ಗೆ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಶಿಕ್ಷೆ ಕಡಿಮೆಯಾಯಿತು ಎಂದು ಅದರ ವಿರುದ್ಧ ಜೀವಜ್ಯೋತಿ ಮದ್ರಾಸ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಸ್ಪಷ್ಟಉದ್ದೇಶದಿಂದಲೇ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2009ರಲ್ಲಿ ಮದ್ರಾಸ್‌ ಹೈಕೋರ್ಟ್‌ ರಾಜಗೋಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಹೀಗೆ 2004 ರಲ್ಲೇ ಶಿಕ್ಷೆಗೆ ಗುರಿಯಾಗಿದ್ದ 74 ವಯಸ್ಸಿನ ದೋಸೆ ರಾಜ ಗುರುವಾರದಂದು ಅನಾರೋಗ್ಯದಿಂದ ಒಂದು ಮೃತಪಟ್ಟ. ಅದಕ್ಕೆ ಅನೋದು ಹೆಣ್ಣು, ಹೊನ್ನು, ಮಣ್ಣು ಒಲಿದಾಗ ಮಾತ್ರ ಮುಟ್ಟಬೇಕು ಇಲ್ಲದಿದ್ದರೆ ದೋಸೆ ರಾಜನ ಕತೆ ಎಲ್ಲರಿಗೂ ಬರಬಹುದು.