ಎಷ್ಟೇ ಕೊರೆಯಿವ ಚಳಿ ಇದ್ದರು ಈ ಮನೆಮದ್ದು ಪಾಲಿಸಿ; ಚರ್ಮದ ಬಿರುಕು ಯಾತನೆಯಿಂದ ನಿಮ್ಮ ಚರ್ಮವನ್ನು ರಕ್ಷಿಸಿ..

0
1231

ಚಳಿಯಲ್ಲಿ ನಿಮ್ಮ ಚರ್ಮದ ಬಿರುಕು ಯಾತನೆಗೆ ಈ ಮನೆ ಮದ್ದು ಪಾಲಿಸುವುದು ಮರೆಯಲೆಬೇಡಿ..

ಅಂತು ಇಂತೂ ನವಂಬರ್ ಡಿಸೆಂಬರ್ ಹತ್ತಿರ ಬಂತು ಅಪ್ಪ ಮೈ ಕೊರೆಯಿವ ಚಳಿ ಈಗಾಗಲೇ ಶುರುವಾಗಿದೆ ಮೈ ಕೈಯಲ್ಲ ಬಿರಿಕು ಬಿಡಲು ಸ್ಟಾರ್ಟ್ ಆಗಿವೆ ಅದರಲ್ಲಿ
ಮಾರ್ನಿಂಗ್ ಮಾರ್ನಿಂಗ್ ಎದ್ದು ಕೆಲಸಕ್ಕೆ ಹೋಗಬೇಕು ಅಂದ್ರೆ ಈ ಚಳಿಯಲ್ಲಿ ಮುಖವೆಲ್ಲ ಬತ್ತಿ ಹೋಗುತ್ತೆ. ದೂಳು ತುಂಬಿದ ಗಾಳಿಯಿಂದ ಚರ್ಮದಲ್ಲಿ ಉರಿಯುತ್ತ ಸ್ವಲ್ಪ ಉಜ್ಜಿಕೊಂಡರು ರಕ್ತ ಬರುತ್ತೆ ಇದಕ್ಕೆ ಎಷ್ಟೇ ಹಣ ಕೊಟ್ಟು ಕ್ರೀಮ್, ಆಯಿಲ್ ತಂದರು ಕೂಡ ಸ್ವಲ್ಪವು ಸುಧಾರಣೆ ಕಾಣದೆ ಯಾವಾಗಾದ್ರು ಈ ಚಳಿಗಾಲ ಹೋಗುತ್ತೆ ಅನ್ಸುತೆ. ಈ ಚರ್ಮದ ಬಿರುಕು ಯಾತನೆಗಾಗಿ ಈಗಿದಲ್ಲೇ ಕಾಳಜಿವಹಿಸುವುದು ಉತ್ತಮ; ಹಾಗಂತ ಬಹಳಷ್ಟು ಹಣ ಕೊಟ್ಟು ಕ್ರೀಮ್. ಆಯಿಲ್ ತರುವುದು ಬೇಡ ನಾವು ಹೇಳುವ ಮನೆಮದ್ದುಗಳನ್ನು ಪಾಲಿಸಿದರೆ ಸಾಕು.


Also read: ನಿಮ್ಮ ಮನೆ ಮತ್ತು ಬೆಡ್ ರೂಮ್-ಗಳಲ್ಲಿ ಬಳಸುವ ಈ ವಸ್ತುಗಳಿಂದ ಕ್ಯಾನ್ಸರ್ ರೋಗ ಬರುತ್ತಿದೆ; ಇಂತಹ ವಸ್ತುಗಳಿಂದ ದೂರವಿರಿ..

ತೆಂಗಿನಎಣ್ಣೆ ಹಚ್ಚುವುದು:

ತೆಂಗಿನೆಣ್ಣೆಯನ್ನು ಹಚ್ಚುವುದು. ಎಣ್ಣೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿಕೊಂಡರೆ ದೇಹ ತೇವವನ್ನು ಹೀರಿಕೊಂಡು ನುಣುಪಾಗಿರುತ್ತದೆ. ಅಥವಾ ನೀರಿಗೆ ಒಂದು ಚಮಚ ಎಣ್ಣೆಯನ್ನು ಹಾಕಿಯೂ ಸ್ನಾನ ಮಾಡಿಕೊಂಡರೆ ದೇಹ ದಿನವಿಡೀ ಫ್ರೆಶ್ ಆಗಿರುತ್ತದೆ.

ದ್ರಾಕ್ಷಿ ಹಣ್ಣು:

ದ್ರಾಕ್ಷಿ ಹಣ್ಣು ದ್ರಾಕ್ಷಿಯಲ್ಲಿರುವ ಅಮೇನೋ ಆಸಿಡ್ ಅಂಶವು ಚರ್ಮವನ್ನು ಹೆಚ್ಚು ಮೃದು ಮತ್ತು ಕಾಂತಿಯುತವಾಗಿಸುತ್ತದೆ. ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ರಾಡಿಕಲ್ ಹಾನಿಯನ್ನು ತಡೆಯುತ್ತದೆ. ಇದರಲ್ಲಿರುವ ಲೆಕೊಪೇನ್ ಎಂಬ ಅಂಶ ಚರ್ಮವನ್ನು ಹೊಳೆಯುವಂತೆ ಕಾಪಾಡುತ್ತದೆ. ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುವುದರ ಜೊತೆಗೆ ಸೂರ್ಯನ ವಿಕಿರಣದಿಂದ ತಡೆಯುವ ಶಕ್ತಿಯನ್ನು ಹೊಂದಿದೆ.

Also read: ದೀರ್ಘಕಾಲದ ಯಕೃತ್ತಿನ ರೋಗ ಲಕ್ಷಣಗಳು ಮತ್ತು ಪರಿಣಾಮಗಳಿಗೆ ಸರಳವಾದ ಮನೆಮದ್ದು; ಆಹಾರ ಕ್ರಮಗಳು ಇಲ್ಲಿದೆ ನೋಡಿ..

ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣತ್ವಚೆಯಾಗಿದ್ದರೆ ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿ ಹಾಲಿನ ಕೆನೆಯೊಂದಿಗೆ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ನುಣುಪಾಗುತ್ತದೆ. ಮೊಟ್ಟೆಯ ಬಿಳಿಲೋಳೆಯನ್ನು ಮುಖಕ್ಕೆ ಹಚ್ಚಿ ಗಂಟೆ ಬಿಟ್ಟು ತೊಳೆದರೆ ಮುಖಕ್ಕೆ ಫ್ರೆಶ್ ಲುಕ್ ಕೊಡುವುದಲ್ಲದೆ ಚರ್ಮದಲ್ಲಿರುವ ರಂಧ್ರಗಳ ಮೇಲೆಯೂ ಪ್ರಭಾವ ಬೀರುತ್ತದೆ.

ಕ್ಯಾರೆಟ್:

ಕೊರೆಯುವ ಚಳಿಯಲ್ಲೂ ಕೂಡ ಆರೋಗ್ಯಯುತ, ಹೊಳೆಯುವ ಚರ್ಮ ನಿಮ್ಮದಾಗಿಸುವಲ್ಲಿ ವಿಟಮಿನ್ ಎ ಅಂಶ ಹೆಚ್ಚಿರುವ ಕ್ಯಾರೆಟ್ ಉಪಯುಕ್ತ. ಕ್ಯಾರೆಟ್ ಬಳಸುವುದರಿಂದ ಸುಕ್ಕು ಮತ್ತು ಚರ್ಮ ಒಣಗುವುದನ್ನು ತಡೆಯಬಹುದು. ಕ್ಯಾರೆಟ್ ನಲ್ಲಿರುವ ಬೀಟ ಕ್ಯಾರೋಟಿನ್ ಮತ್ತು ಲೈಕೊಪಿನ್ ಅಂಶ ಸೂರ್ಯನ ವಿಕಿರಣಕ್ಕೆ ಒಡ್ಡಿ ಚರ್ಮ ಹಾನಿಗೊಳಗಾಗುವುದನ್ನು ತಡೆಯುತ್ತದೆ.


Also read: ಅರೆ ತಲೆನೋವು ಅನುಭವಿಸುವರು ಇದನ್ನು ನೋಡಿ ಜೀವನ ಪೂರ್ತಿ ತಲೆನೋವಿನಿಂದ ಮುಕ್ತಿ ಹೊಂದಿ.

ಬಾದಾಮಿ:

ರಾತ್ರಿ ಮಲಗುವ ಮೊದಲು ಬಾದಾಮಿಯನ್ನು ನೆನೆಸಿಡಿ. ಮಾರನೆಯ ದಿನ ಸಿಪ್ಪೆ ಸುಲಿದು ರುಬ್ಬಿಕೊಳ್ಳಿ. ಹಾಲು ಅಥವಾ ಮೊಸರಿನ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ.ವಾರದಲ್ಲಿ ಒಂದೆರಡು ಬಾರಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಅಧಿಕವಾಗುತ್ತದೆ.

ಜೇನಿನ ಮಾಸ್ಕ್/ ಪಪ್ಪಾಯಿ ಫೇಸ್ ಪ್ಯಾಕ್:

ಜೇನು ಹೊಟ್ಟೆಗೂ ಉತ್ತಮ, ಚರ್ಮಕ್ಕೂ ಆರೋಗ್ಯಕರ. ಒಂದೆರಡು ಚಮಚ ಜೇನಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ಪಪ್ಪಾಯಿ ಹಣ್ಣನ್ನು ಹಿಸುಕಿ ಪೇಸ್ಟ್ ಮಾಡಿ ಮುಖ, ಕುತ್ತಿಗೆಗೆ ಹಚ್ಚಿದರೆ ಚರ್ಮ ನುಣುಪಾಗಿ ಹೊಳೆಯುತ್ತದೆ.
ಹೀಗೆ ನಿಮ್ಮ ಮನೆಯಲ್ಲಿಯೇ ಔಷಧಿಯನ್ನು ರೆಡಿ ಮಾಡಿ ಬಳಸಿ ನಿಮ್ಮ ಚರ್ಮದ ಬಗ್ಗೆ ಕಳಜಿವಹಿಸುವುದು ಮರೆಯಲೆಬೇಡಿ.