ಇದನ್ನು ಓದಿದ ಮೇಲೆ ಅಸಿಡಿಟಿಗೆ, ಅಜೀರ್ಣಕ್ಕೆ ಮಾತ್ರೆ ಬಿಟ್ಟು ಜೇರಿಗೆ ತಿನ್ನೋಕ್ಕೆ ಶುರು ಮಾಡ್ತೀರ!!

0
1724

Kannada News | Health tips in kannada

ನಮ್ಮ ದಿನನಿತ್ಯದ ಆಹಾರದಲ್ಲಿ ಜೀರಿಗೆಯನ್ನು ಹೆಚ್ಚಾಗಿ ಬಳಸುತ್ತೇವೆ. ಜೀರಿಗೆಯು ಜೀರ್ಣಕಾರಕ. ಜೀರಿಗೆ ಅರಿಯದ ಜನರಿಲ್ಲ. ಇದಿಲ್ಲದೆ ರುಚಿರುಚಿಯಾದ ಅಡುಗೆಯೇ ಇಲ್ಲ. ಕೇವಲ ಊಟಕ್ಕಲ್ಲ, ಆರೋಗ್ಯದ ವಿಷಯದಲ್ಲೂ ಇದು ಮಹತ್ವದ್ದು.

1. ಪಿತ್ತವಿಕಾರದಿಂದ ಉಂಟಾಗುವ ಹೊಟ್ಟೆ ತೊಳಸುವಿಕೆ, ತಲೆ ಸುತ್ತುವಿಕೆ ನಿವಾರಣೆಗೆ ಜೀರಿಗೆ, ಹಳೆ ಬೆಲ್ಲ, ಹುಣಸೆ ಹಣ್ಣು ಇವು ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕುಟ್ಟಿ ಬಾಯಲ್ಲಿ ಇಟ್ಟು ರಸ ನುಂಗುತ್ತಿದ್ದಲ್ಲಿ ಈ ದೋಷಗಳು ಗುಣವಾಗುವುದು.

2. ಅಜೀರ್ಣ, ಹೊಟ್ಟೆ ಉಬ್ಬರ, ಅತಿಸಾರ ದಿಂದ ಬಳಲುತ್ತಿದ್ದರೆ ಜೀರಿಗೆ ಕುದಿಸಿದ ನೀರಿಗೆ ೧ ಚಮಚ ಕೊತ್ತಂಬರಿ ಸೊಪ್ಪಿನ ರಸ ಮತ್ತು ಒಂದು ಚಿಟಿಕೆ ಅಡುಗೆ ಉಪ್ಪು ಸೇರಿಸಿ ಊಟದ ನಂತರ ದಿನಕ್ಕೆರಡು ಬಾರಿ ಸೇವಿಸಬೇಕು.

3. ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಕುಡಿಯುವುದರಿಂದ ಪಿತ್ತ ಶಾಂತಿಯಾಗುವುದು.

4. ಹೊಟ್ಟೆ ತೊಳಸುವಿಕೆ, ವಾಂತಿಯಾಗುತ್ತಿದ್ದರೆ ಅರ್ಧ ಬಟ್ಟಲು ತಣ್ಣೀರಿಗೆ ಒಂದು ಹೋಳು ನಿಂಬೆ ಹಣ್ಣಿನ ರಸವನ್ನು ಹಿಂಡಿ, ಅದಕ್ಕೆ ನುಣ್ಣಗೆ ಪುಡಿಮಾಡಿದ ೧ ಟಿ ಚಮಚ ಜೀರಿಗೆ ಮತ್ತು ೪ ಏಲಕ್ಕಿ ಯನ್ನು ಬೆರೆಸಿ ಸೇವಿಸಿದ್ದಲ್ಲಿ ಸಂಪೂರ್ಣ ನಿಲ್ಲುವುದು.

5. ಹೊಟ್ಟೆ ನೋವು ಕಾಣಿಸಿಕೊಂಡರೆ ಜೀರಿಗೆ, ಸಕ್ಕರೆ, ಒಣ ಶುಂಠಿ ಮತ್ತು ಅಡಿಗೆ ಉಪ್ಪನ್ನು ಒಂದೊಂದು ಟೀ ಚಮಚದಷ್ಟು ತೆಗೆದುಕೊಂಡು ಪುಡಿ ಮಾಡಿ ಅರ್ಧ ಬಟ್ಟಲು ಬಿಸಿ ನೀರಿಗೆ ಹಾಕಿ ನಿಂಬೆಹಣ್ಣಿನ ರಸವನ್ನು ಅದಕ್ಕೆ ಹಿಂಡಿ ಕುಡಿದ್ದಲ್ಲಿ ತತ್ತಕ್ಷಣ ಪರಿಹಾರ ಲಭಿಸುವುದು.

6. ಪಿತ್ತ ದೋಷಗಳು ನಿವಾರಣೆಯಾಗಬೇಕಾದರೆ ಒಂದು ಬಟ್ಟಲು ಜೀರಿಗೆ ಕಷಾಯಕ್ಕೆ ಒಂದು ಟೀ ಚಮಚ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದು ಒಳ್ಳೆಯದು.

7. ಹಸಿವು ಹೆಚ್ಚಾಗುವುದಕ್ಕೆ ಊಟಕ್ಕೆ ಮುಂಚೆ ಜೀರಿಗೆಯನ್ನು ಅಗಿದು ತಿನ್ನಬೇಕು.

8. ಜೀರಿಗೆಯನ್ನು ನಿಯಮಿತವಾಗಿ ಸೇವಿಸಿದ್ದಲ್ಲಿ ಮಲಬದ್ಧತೆಯುಂಟಾಗುವುದಿಲ್ಲ.

Also Read: ಧನಿಯಾದಲ್ಲಿರೋ ಆರೋಗ್ಯಕಾರಿ ಗುಣ ಗೊತ್ತಾದ್ರೆ ದಿನಸಿ ಲಿಸ್ಟ್ ನಲ್ಲಿ ಧನಿಯಾ ಹೆಸರು ಫಸ್ಟ್ ಬರೀತೀರಾ..!!

Watch: