ನಿಮ್ಮ ಮೊಬೈಲ್-ನಲ್ಲಿ ಈ ಆ್ಯಪ್‌-ಗಳು ಇದ್ದರೆ ಈಗಲೇ ಡಿಲೀಟ್ ಮಾಡಿ, ಇಲ್ಲಾಂದ್ರೆ ಖದೀಮರು ಈ ಆ್ಯಪ್‌-ಗಳ ಮೂಲಕ ನಿಮ್ಮ ಖಾತೆಯ ಹಣ ಕದಿಯಬಹುದು!!

0
438

ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವ್ಯಹಾರಗಳು ಮೊಬೈಲ್-ನಲ್ಲೆ ನಡೆಯುತ್ತಿದ್ದು, ಫೋನ್ ಫೆ, ಗೂಗಲ್ ಫೆ, Paytm ಸೇರಿದಂತೆ ಹಲವು app ಬಳಸಿ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿ ನಗದು ರಹಿತ ವ್ಯವ್ಯಹಾರ ನಡೆಸುತ್ತಿರುವುದು, ಸಮಯ ಉಳಿಕೆಗೆ ಮತ್ತು ಹಣ ಕಳ್ಳತನದಿಂದ ತಪ್ಪಿಸಲು ಅನುಕೂಲಕರವಾಗಿದೆ. ಆದರೆ ಇದರಲ್ಲಿ ಸೈಬರ್ ವಂಚನೆಗಳು ಕೂಡ ಹೆಚ್ಚಾಗಿ ಕಂಡು ಬರುತ್ತಿದ್ದು, ಈಗಾಗಲೇ ಹಲವರು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಇವೆಲ್ಲವೂ ಮೊಬೈಲ್ ಬಳಕೆಯಲ್ಲಿನ ಪ್ರಕರಣಗಳಾಗಿದ್ದು, ವಂಚಕರು ನಿಮ್ಮ ಮೊಬೈಲ್-ನಲ್ಲಿರುವ app ಮೂಲಕ ವಂಚನೆ ಮಾಡುತ್ತಾರೆ. ಅದಕ್ಕಾಗಿ ನಾವು ಹೇಳುವ ಈ app-ಗಳು ನಿಮ್ಮ ಫೋನ್-ಅಥವಾ ಕಂಪ್ಯೂಟರ್-ಗಳಲ್ಲಿ ಇದ್ದರೆ ಡಿಲೀಟ್ ಮಾಡಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು, ಇತ್ತೀಚಿಗೆ ಸೈಬಲ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿತ್ತು, ಅದನ್ನು ನಿರ್ವಹಿಸುವ ಠಾಣೆಗಳೂ ಸಹ ಕಡಿಮೆ ಇದೆ. ಇನ್ನು ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಸಮಸ್ಯೆಗಳು ಎದುರಾಗುತ್ತಿದ್ದರಿಂದ ಸೈಬರ್ ಕ್ರೈಂಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿಯೇ ಎಷ್ಟೋ ದೂರುಗಳು ಸ್ವೀಕೃತವಾಗದೆಯೇ ಉಳಿದಿದ್ದರೆ, ಸೈಬರ್ ಕ್ರೈಂ ಬಲೆಗೆ ಬಿದ್ದ ಕೆಲವರು ಪೊಲೀಸರಿಗೆ ದೂರು ನೀಡುವುದೇ ಹೆಚ್ಚು ಕಿರಿಕಿರಿ ಎಂದು ಸುಮ್ಮನಾಗಿಬಿಡುತ್ತಾರೆ. ಇವೆಲ್ಲ ಯಾಕೆ ಹೆಚ್ಚುತ್ತಿವೆ ಅಂದರೆ ಬ್ಯಾಂಕಿಂಗ್ ಸೇವೆಗಳು, ಆನ್‌ಲೈನ್ ಶಾಪಿಂಗ್, ಯಾವುದೇ ಟಿಕೆಟ್ ಬುಕ್ಕಿಂಗ್ ಹೀಗೆ ನಾನಾ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು.

ಆದರೆ ಸೌಲಭ್ಯಗಳು ಹೆಚ್ಚಾದಂತೆ ಸೈಬರ್ ವಂಚನೆಯು ಹೆಚ್ಚಾಗುತ್ತಿದೆ. ಸೈಬರ್ ಕಳ್ಳರು ಕೂತಲ್ಲಿಯೇ ಯಾರದ್ದೋ ಮೊಬೈಲ್‌ಗೆ ಲಗ್ಗೆ ಇಟ್ಟು ಜನರಿಗೆ ಟೋಪಿ ಹಾಕುತ್ತಿದ್ದಾರೆ. ಅದರಲ್ಲೂ ರಿಮೋಟ್ ಕಂಟ್ರೋಲ್ ಮೂಲಕವೇ ಎಲ್ಲಾ ಖಾಸಗಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಇದರಿಂದ ಜನರು ಬ್ಯಾಂಕ್-ಗಳಲ್ಲಿನ ಹಣಕ್ಕೆ ಸುರಕ್ಷತೆ ಇಲ್ಲ ಎಂದು ಹೇಳುತ್ತಿದ್ದಾರೆ. ಏಕೆಂದರೆ ಒಂದು ಸಣ್ಣ ಸುಳಿವು ಸಿಕ್ಕರು ನಿಮಿಷದಲ್ಲಿ ಹಣ ವಂಚನೆ ಮಾಡುತ್ತಾರೆ. ಅದು ಹೇಗೆ ಎನ್ನುವುದು ನೋಡಿ.

1. ಆ್ಯಪ್ ಮೂಲಕವೇ ಲಿಂಕ್ ಮಾಡಿಕೊಳ್ಳಬಹುದು;

ಹೊಸದಾಗಿ ಬಂದ ತಂತ್ರಜ್ಞಾನದ ಮೂಲಕ ಮಿರರ್ ಶೇರಿಂಗ್, ಎನಿಡೆಸ್ಕ್‌ ಆ್ಯಪ್‌ಗಳ ಮೂಲಕ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟನ್ ಅನ್ನು ಇನ್ನೊಂದು ಮೊಬೈಲ್ ಅಥವಾ ಕಂಪ್ಯೂಟರ್‌ಗೆ ಲಿಂಕ್ ಮಾಡಿಕೊಳ್ಳಬಹುದು. ಈ ರೀತಿಯಾದ ಹಲವು ಆ್ಯಪ್‌ಗಳು ಈಗ ಸೈಬರ್ ವಂಚನೆಗೆ ಬಳಕೆಯಾಗುತ್ತಿವೆ. ಇವುಗಳು ನಿಮ್ಮ ಮೊಬೈಲ್-ನಲ್ಲಿ ಇದ್ದರೆ ಮೊದಲು ಡಿಲಿಟ್ ಮಾಡಿ.

2. ರಿಮೋಟ್ ಕಂಟ್ರೋಲ್ ಬಳಸಿ ವಂಚನೆ;

ದಿನಕ್ಕೊಂದು ಟೆಕ್ನಾಲಜಿ ಬೆಳೆದಂತೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಬರ್ ಖದೀಮರು ಜನರ ಹಣ ಲೂಟಿ ಮಾಡಲು ರಿಮೋಟ್ ಕಂಟ್ರೋಲ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಈ ಆ್ಯಪ್‌ಗಳನ್ನು ನೀವು ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡ್ರೆ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಮೊಬೈಲ್‌ನಲ್ಲಿರುವ ಮಾಹಿತಿಗಳನ್ನು ಕಳವು ಮಾಡುತ್ತಾರೆ. ಯಾರ ಕೈಯಲ್ಲೇ ಮೊಬೈಲ್ ಕೊಡುವ ಮುನ್ನ ಎಚ್ಚರ.

3. ಮೊಬೈಲ್ ರಿಪೇರಿಗೆ ಹೋಗುವಾಗ ಎಚ್ಚರ;

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀವು ಬಳಸುವ ಮೊಬೈಲ್-ಗಳು ರಿಪೇರಿ ಅಥವಾ ಕವರ್ ಹಾಕಿಸಲು ಹೋದಾಗ ವಂಚನೆಗಳು ನಡೆಯುವ ಸಂಭವವಿರುತ್ತದೆ. ಇದರಲ್ಲಿ ವಯಕ್ತಿಕವಾಗಿ ಬಳಸುವ ಕಂಪ್ಯೂಟರ್ ಕೂಡ ಒಳಗೊಂಡಿರಬಹುದು. ಅದರಂತೆ ಸೈಬರ್ ಕಳ್ಳರು ಇಂತಹ ಅವಕಾಶಕ್ಕಾಗಿಯೇ ಎದುರು ನೋಡುತ್ತಿರುತ್ತಾರೆ. ಆ್ಯಪ್‌ಗಳನ್ನು ಹರಿಬಿಟ್ಟು, ನಿಮ್ಮ ಅಕೌಂಟ್‌ಗೆ ಕನ್ನ ಹಾಕಬಹುದು. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಇಟ್ಟಿರುವ ಮಾಹಿತಿಗಳು ಖದೀಮರ ಕೈ ತಲುಪುತ್ತದೆ.

4. ಪರಿಚವಿಲ್ಲದ ಕಾಲ್, ಬೇದರಿಕೆಗಳಿಂದ ವಂಚನೆ,

ಹೊಸ ನಂಬರ್-ಗಳಿಂದ ಫೋನ್ ಬಂದು ನಾವು ಬ್ಯಾಂಕ್ ಅಧಿಕಾರಿಗಳು ಅಂತ ಹೇಳಿ OTP ಸೇರಿದಂತೆ ಮಾಹಿತಿಗಳಲ್ಲ ಕೇಳುತ್ತಾರೆ. ಇದರಲ್ಲಿ ಮೊಬೈಲ್ ಕಂಪನಿ ಅಥವಾ ಸಿಮ್ ಕಾರ್ಡ್ ಹೆಸರಿನಲ್ಲಿ ಕೂಡ ಕರೆ ಬಂದು ಮೊಬೈಲ್ , ಸಿಮ್‌ನಲ್ಲಿ ಸಮಸ್ಯೆಯಿದೆ ಹೀಗಾಗಿ ಈ ಆ್ಯಪ್ ಹಾಕಿಕೊಳ್ಳಿ. ನಾವು ಇಲ್ಲಿಂದಲೇ ಅಪ್‌ಡೇಟ್ ಮಾಡುತ್ತೇವೆ ಎಂದು ಹೇಳಿದರೆ ಮೋಸ ಹೋಗದಿರಿ. ಹಾಗೇನಾದ್ರೂ ಆ್ಯಪ್ ಡೌನ್‌ಲೋಡ್ ಮಾಡಿದ್ರೆ ನಿಮ್ಮ ಮಾಹಿತಿಗಳು ಸೋರಿಕೆಯಾಗಲಿವೆ. ಇದೇ ರೀತಿ ನಿಮ್ಮ ಮೊಬೈಲ್‌ಗೆ ಲಿಂಕ್‌ಗಳು ಬರಬಹುದು. ಇದನ್ನು ನೀವು ಕ್ಲಿಕ್ ಮಾಡಿದರೆ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವಂತೆ ಮಾಡಲಾಗಿರುತ್ತದೆ. ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ನಿಮ್ಮ ಮೊಬೈಲ್ ಆಪರೇಟ್‌ ಮಾಡಿ ನಿಮ್ಮ ಮಾಹಿತಿಗೆ ಕನ್ನ ಹಾಕುತ್ತಾರೆ.

5. ವಂಚನೆಗೆ ಕಾರಣವಾಗುವ ಆ್ಯಪ್‌-ಗಳು?

ಸದ್ಯ ಸೈಬರ್ ಜಗತ್ತಿನಲ್ಲಿ ಸ್ವಲ್ಪ ರಿಸ್ಕ್ ಆಗಿರುವ ಆ್ಯಪ್ ಸಾಫ್ಟ್‌ವೇರ್‌ಗಳೆಂದರೆ ಎನಿ ಡೆಸ್ಕ್‌, ಟೀಮ್ ವೀವರ್, ರಿಮೋಟ್ ಪಿಸಿ, ಕ್ರೋಂ ರಿಮೋಟ್, ಏರ್ ಮಿರರ್ , ರೆಮೋಡ್ರಾಡ್, ಸ್ಕ್ರೀನ್ ಶೇರ್ ಆಗಿವೆ.

6. ವಂಚನೆಯಿಂದ ತಪ್ಪಿಸಿಕೊಳ್ಳಲು ಸುರಕ್ಷತಾ ಕ್ರಮಗಳೇನು?

  • ಬ್ಯಾಂಕ್ ವಿಷಯಕ್ಕೆ ಸಂಬಂಧಿಸಿದಂತೆ ಯಾರಿಗೂ ಮಾಹಿತಿ ನೀಡಲೇಬೇಡಿ.
  • ಯಾವುದೇ ಹೊಸ ನಂಬರ್-ನಿಂದ ಬರುವ ಲಿಂಕ್‌ಗಳ ಮೇಲೆ ಒತ್ತದಿರಿ.
  • ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಅಧಿಕೃತ ವೆಬ್‌ಸೈಟ್ ಮೂಲಕ ಪರೀಕ್ಷಿಸಿಕೊಳ್ಳಿ
  • ಅಪರಿಚಿತರಿಗೆ ನಿಮ್ಮ ಫೋನ್ ಕೊಡದಿರಿ
  • ಪಾಸ್‌ವರ್ಡ್ ಮೂಲಕ ನಿಮ್ಮ ಮೊಬೈಲ್ ಸುರಕ್ಷಿತವಾಗಿಟ್ಟುಕೊಳ್ಳಿ.
  • ಅಪಾಯಕಾರಿ ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ದರೆ ಕೂಡಲೇ ಡಿಲೀಟ್ ಮಾಡಿ.
  • ಕಡಿಮೆ ಬೆಲೆಗೆ ನೀಡುವ ಆಫರ್ ಲಿಂಕ್-ಗಳನ್ನ ಶೇರ್ ಅಥವಾ ಓಪನ್ ಮಾಡಬೇಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬ್ಯಾಂಕ್-ಗಳಿಗೆ ನೀಡಿದ ಮೊಬೈಲ್​ ನಂಬರ್ ಚೇಂಜ್ ಮಾಡುವ ಮುನ್ನ ಎಚ್ಚರ; ಯಾಕೆ ಅಂತ ಈ ಮಾಹಿತಿ ನೋಡಿ..