ಬಿಹಾರದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಲಿಚಿ ಹಣ್ಣು ಕಾರಣವಂತೆ; ಚೀನಾ ಮೂಲದ ಲಿಚಿ ಹಣ್ಣಲ್ಲಿ ಇರುವ ವಿಷಕಾರಿ ವೈರಸ್ ಯಾವುದು ಗೊತ್ತಾ??

0
565

ಬಿಹಾರದಲ್ಲಿ ಮೆದುಳಿನ ಜ್ವರಕ್ಕೆ ಮೂರು ವಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು ಇಡಿ ದೇಶದಲ್ಲಿ ಆಘಾತ ಮೂಡಿಸಿದೆ. ಇಷ್ಟೊಂದು ಅಪಾಯಕಾರಿ ವೈರಸ್ ಎನ್ಸೆಫಾಲಿಟಿಸ್-ಗೆ ಕಾರಣವೇನು ಎನುವುದು ಒಂದು ದೊಡ್ಡ ಸವಾಲಾಗಿತ್ತು, ಇದಕ್ಕೆ ಸಂಶೋಧಕರು ಸರಿಯಾದ ಕಾರಣವನ್ನು ಪತ್ತೆ ಹಚ್ಚಿದ್ದು, ಮಕ್ಕಳ ಸಾವಿಗೆ ಲಿಚಿ ಹಣ್ಣು ತಿಂದಿರುವುದು ಕಾರಣ ಇರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾ ಮೂಲದ ಹಣ್ಣಾದ ಲಿಚಿಯಲ್ಲಿ ಕೆಲವು ಅಪಾಯಕಾರಿ ಜೀವಾಣುಗಳು ಇರುವುದು ಪತ್ತೆಯಾಗಿದೆ. ಅದರಿಂದಲೇ 200 ಮಕ್ಕಳಲ್ಲಿ ಎನ್ಸೆಫಾಲಿಟಿಸ್ – ಮೆದುಳಿನ ಉರಿಯೂತ ಕಾರಣವಾಗಿದೆ ಎಂದು ನಂಬಲಾಗಿದೆ.

Also read: ಹುಷಾರ್ ನೀವು ಖಾಲಿ ಹೊಟ್ಟೆಯಲ್ಲಿ ಲಿಚ್ಚಿ ಹಣ್ಣು ಸೇವಿಸಿದರೆ ನಿಮ್ಮ ಸಾವಿಗೆ ನೀವೇ ಮುನ್ನುಡಿ ಬರೆದಂತೆ..!

ಹೌದು ಬಿಹಾರದಲ್ಲಿ ಬೇಸಿಗೆಯ ಸಮಯದಲ್ಲಿ ಪ್ರತಿವರ್ಷ ಎನ್ಸೆಫಾಲಿಟಿಸ್ ಕಂಡು ಬರುತ್ತದೆ. ಏಕೆಂದರೆ ಸಮಯದಲ್ಲಿ ಲಿಚಿ ಹಣ್ಣುಗಳನ್ನು ಬೆಳಸಲಾಗುತ್ತೆ, ಆದರೆ ಈ ವರ್ಷ ಇದರಿಂದ ಆಗಿರುವ ಸಾವು ಜನರಲ್ಲಿ ಭೀತಿ ಹುಟ್ಟಿಸಿದೆ. ಅದರಂತೆ ಲಿಚಿ ಬೀಜವು ಅಸಾಮಾನ್ಯ ಅಮೈನೊ ಆಮ್ಲವನ್ನು ಹೊಂದಿದೆ. ಇದನ್ನು ಹೈಪೊಗ್ಲಿಸಿನ್-ಎ ಅಥವಾ ಮೀಥಿಲೀನ್ ಸೈಕ್ಲೋಪ್ರೊಪಿಲ್ ಗ್ಲೈಸಿನ್ (ಎಂಸಿಪಿಜಿ) ಎಂದು ಕರೆಯಲಾಗುತ್ತದೆ ಇದು ನೈಸರ್ಗಿಕವಾಗಿ ಕಂಡುಬರುವ ಹಣ್ಣು ಆಧಾರಿತ ಜೀವಾಣು ಎಂದು ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಮೆಡಿಕಲ್ ಜನರಲ್ 2017 ರ ಅಧ್ಯಯನದಲ್ಲಿ ಪ್ರಕಟಗೊಳಿಸಿದಂತೆ, ಮುಜಾಫರ್ಪುರದಲ್ಲಿ ತೀವ್ರವಾದ ವಿಷಕಾರಿ ಎನ್ಸೆಫಲೋಪತಿಯ ಇರುವುದು ತಿಳಿಸಿತ್ತು, ಇದು ಹೈಪೊಗ್ಲಿಸಿನ್ ಎ ಅಥವಾ ಎಂಸಿಪಿಜಿ ಚಯಾಪಚಯ ಕ್ರಿಯೆಯ ವಿವಿಧ ಪ್ರಕ್ರಿಯೆಗಳು ಮತ್ತು ದೇಹದಲ್ಲಿನ ಗ್ಲೂಕೋಸ್ನ ಸ್ಥಗಿತದ ಮೇಲೆ ಪರಿಣಾಮ ಬೀರುತ್ತದೆ, ಇದು ಹೈಪೊಗ್ಲಿಸಿಮಿಯಾಕ್ಕೆ ಕಾರಣವಾಗಬಹುದು, ಈ ಸ್ಥಿತಿಯು ನಿಮ್ಮ ರಕ್ತದಲ್ಲಿನ ಸಕ್ಕರೆ ತೀವ್ರವಾಗಿ ಇಳಿಯುತ್ತದೆ ಎಂದು ತಿಳಿಸಿದೆ.

ಲಿಚಿ ಹಣ್ಣಿನಿಂದ ಅಪಾಯ ಹೇಗೆ?

Also read: ತರಕಾರಿ ಮತ್ತು ಹಣ್ಣುಗಳನ್ನ ಚೆನ್ನಾಗಿ ತೊಳಿಯದೆ ತಿಂದ್ರೆ ಸಂತಾನೋತ್ಪತ್ತಿ ಸಮಸ್ಯೆ ಕಾಡೋದಂತೂ ನಿಜ…ಹೇಗೆ ಅಂತೀರಾ ಈ ಆರ್ಟಿಕಲ್ ಓದಿ ನಿಮಗೆ ಗೊತ್ತಾಗುತ್ತೆ..

ಈಗಾಗಲೇ ಈ ಕಾಯಿಲೆಗೆ ಲಿಚಿ ಹಣ್ಣೂ ಕಾರಣ ಎನ್ನಲಾಗುತ್ತಿದ್ದು, ಬಿಹಾರ ಸರ್ಕಾರವು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಲಿಚಿ ಹಣ್ಣಗಳನ್ನು ಪ್ರಯೋಗಾಲಯಕ್ಕೆ ಕಳಿಸಿ, ಪ್ರಯೋಗಕ್ಕೊಳಪಡಿಸುವಂತೆ ಆದೇಶಿಸಿದೆ. ಈ ಹಣ್ಣಿನ ಸೇವನೆಯಿಂದ ಆರಂಭವಾದ ಕಾಯಿಲೆ ನಂತರ ಒಬ್ಬರಿಂದ ಒಬ್ಬರಿಗೆ ಸೋಂಕಾಗಿ ಹರಡಿರಬಹುದು ಎನ್ನಲಾಗಿದೆ. ಅದರಂತೆ ಸುಮಾರು 150 ಮಕ್ಕಳ ಸಾವಿಗೆ ಲಿಚಿ ಹಣ್ಣು ತಿಂದಿರುವುದು ಕಾರಣ ಇರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಿಚಿ ಹಣ್ಣಿನಲ್ಲಿರುವ ಸಣ್ಣ ಪ್ರಮಾಣದ ವಿಷಕಾರಿ ಅಂಶ ಹಾಗೂ ರಕ್ತದಲ್ಲಿ ಗ್ಲೂಕೋಸ್‌ ಅನ್ನು ಅತಿ ಕಡಿಮೆ ಸಮಯದಲ್ಲಿ ಹೀರಿಬಿಡುವ ಇದರ ಗುಣವು ಮೊದಲೇ ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿದ್ದ ಮಕ್ಕಳನ್ನು ತೀವ್ರ ಅನಾರೋಗ್ಯಕ್ಕೆ ದೂಡಿ ಸಾವಿನ ದವಡೆಗೆ ದೂಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಲಕ್ಷಣವೇನು?

Also read: ಉತ್ತಮ ಆರೋಗ್ಯಕ್ಕೆ ಯಾವ ಹಣ್ಣು ಸೇವಿಸುವುದು ಒಳ್ಳೆಯದು; ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭಗಳಿವೆ ನೋಡಿ..

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತಿದ್ದು, 15 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ. ಬೇಸಿಗೆಯ ಸಮಯದಲ್ಲಿ ಮುಜಾಫರ್ಪುರದಲ್ಲಿ ಹೈಪೋಗ್ಲೆಸಿಮಿಯಾ ಕಾಯಿಲೆ ಆಗಾಗ ಕಂಡುಬರುತ್ತಿತ್ತು. ಆದರೆ AES ಸಮಸ್ಯೆ ಕಂಡುಬಂದಿರಲಿಲ್ಲ. ಈ ಬಾರಿ ಮುಜಾಫರ್ಪುರದಲ್ಲಿಯೇ ಅತೀ ಹೆಚ್ಚು ಮಕ್ಕಳು ಮೃತಪಟ್ಟಿದ್ದು, ಅತಿಯಾದ ಜ್ವರ, ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ, ಕೋಮಾ ಸ್ಥಿತಿಗೆ ತಲುಪುವ ಪರಿಸ್ಥಿತಿ ಉಂಟಾಗುವುದು ಈ ರೋಗದ ಲಕ್ಷಣ. ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಈ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಮತ್ತೆ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ.