ಈ ಹೋಟೆಲ್-ನ ದೋಸೆಗೆ ಎಷ್ಟು ಬೇಡಿಕೆ ಇರುತ್ತೆ ಅಂದ್ರೆ, ಘಂಟೆಗಟ್ಟಲೆ ಕಾದ್ರೂನು ಸಿಗೋದು ಕೇವಲ Half-ದೋಸೆ!!

0
1587

ಜನರಿಗೆ ಇಷ್ಟವಾಗುವ ಆಹಾರಕ್ಕಾಗಿ ಎಷ್ಟೋ ದೂರದವರೆಗೆ ಲೈನ್ ಹಚ್ಚಿ ತಿನ್ನುವ ಹಲವಾರು ಹೋಟೆಲ್ ಗಳ ವಿಶೇಷತೆ ನೋಡಿದ್ದಿರ ಮತ್ತು ಅಂತಹ ಫೇಮಸ್ ಹೋಟೆಲ್-ನಲ್ಲಿ ಜನರು ಬಿರಿಯಾನಿ, ಚಿಕನ್ ರುಚಿಗೆ, ಇಲ್ಲ ಮಟನ್ ರುಚಿಗೆ ಮಾರು ಹೋಗಿ ಹೆಚ್ಚಿನ ರುಚಿ ಕೊಡುವ ಹೋಟೆಲ್ ಮುಂದೆ ಎಷ್ಟೋ ಹೊತ್ತು ಕಾದು ಮಿತಿಯಲ್ಲಿ ಆಹಾರ ಪಡೆಯುವುದು ಪ್ರತಿಯೊಂದು ನಗರದಲ್ಲಿ ವಿಶೇಷ ವಿರುತ್ತದೆ. ಅದು ಸ್ವಲ್ಪ ದೊಡ್ಡ ಹೋಟೆಲ್-ಗಳ ಹವಾ ಅಂತಾನೆ ಕರಿತ್ತಾರೆ. ಆದ್ರೆ ಬರಿ ಅರ್ಧ ದೋಸೆಗೆ ಘಂಟೆಗಂಟಲೆ ಕಾದು ಒಬ್ಬರಿಗೆ ಅರ್ಧ ದೋಸೆ ಮಾತ್ರ ಸಿಗುವ ಬೆಂಗಳೂರಿನಲ್ಲಿರುವ ಚಿಕ್ಕ ಹೋಟೆಲ್- ಗೆ ನೂರಾರು ಜನ ಲೈನ್ ನಲ್ಲಿ ನಿಲ್ಲುವ ವಿಶೇಷತೆ ಕೇಳಿದ್ರೆ ದಂಗಾಗಿ ಹೋಗ್ತಿರ.


Also read: ಇಲ್ಲಿವೆ 3 ಸಾವಿರ ವರ್ಷಗಳ ಹಿಂದಿನ ಹುಣಸೆ ಮರಗಳು; ಬೇಡಿಕೊಂಡ ವರವನ್ನು ಪಾಲಿಸುವ ಕಲ್ಪವೃಕ್ಷದ ಹಣ್ಣನ್ನು ಸೇವಿಸಿದರೆ ಗುಪ್ತರೋಗಗಳು ಮಾಯವಾಗುತ್ತೆ..

ಹೌದು ಬೆಂಗಳೂರು ದೋಸೆಗೆ ಕ್ಯಾಪಿಟಲ್ ಸಿಟಿ ಎಂದು ಹೆಸರು ಪಡೆದಿದೆ ಇಂತಹ ಹೆಸರು ಪಡೆಯಲು ಕಾರಣ ಸಿದ್ದಪ್ಪ ಸ್ಟಾಲ್ ಅನ್ಸುತೆ ಅಷ್ಟೊಂದು ಪೇಮಸ್ ಆದ ಸಿದ್ದಪ್ಪ ಸ್ಟಾಲ್ ಬರಿ ದೋಸೆಗೆ ಹೆಸರುವಾಸಿಯಾಗಿದೆ. ಈ ಹೋಟೆಲ್- ನಲ್ಲಿ ಸಿಗುವ ಗರಿ ಗರಿಯಾದ ಗೋಲ್ಡ್ ಕಲರ್ ದೋಸೆಯ ರುಚಿ ಒಂದು ಸಾರಿ ನೋಡಿದ್ರೆ ಮತ್ತೆ ಯಾವತ್ತು ಅದೇ ರುಚ್ಚಿ ಬೇಕು ಅನ್ಸುತ್ತೆ ಅಷ್ಟೊಂದು ರುಚಿಮಯವಾದ ದೋಸೆ ಸ್ಟಾಲ್- ಗೆ ಜನರು ಘಂಟೆಯ ವರೆಗೂ ಲೈನ್-ನಲ್ಲಿ ನಿಂತು ಇಲ್ಲಿನ ದೋಸೆ ತಿನ್ನುತ್ತಾರೆ ಮತೊಂದು ದೋಸೆ ಬೇಕು ಅಂದ್ರೆ ಅದು ನಾಳೆನೆ ಸಿಗೋದು ಅದು ಬೇಗ ಬಂದ್ರೆ ಮಾತ್ರ.


Also read: ಬೆಂಗಳೂರಿನಲ್ಲಿದೆ ಆಕಾಶದಲ್ಲಿ ತೇಲುವ ರೆಸ್ಟೋರೆಂಟ್; ಇನ್ಮುಂದೆ ಫ್ಲೈ ಡೈನಿಂಗ್ ರೆಸ್ಟೋರೆಂಟ್’ ಗೆ ದುಬೈಗೆ, ಸಿಂಗಪೂರ್​ಗೆ ಹೋಗಬೇಕಿಲ್ಲ..

ಸಿದ್ದಪ್ಪ ಸ್ಟಾಲ್ ದೋಸೆಯ ವಿಶೇಷತೆ ಏನ್?

ಇಲ್ಲಿ ದೋಸೆಯನ್ನು ತುಪ್ಪ ಬೆಣ್ಣೆಯಲ್ಲಿ ಮಾಡುತ್ತಾರೆ ಮತ್ತು ದೋಸೆಯನ್ನು ತಿನ್ನಲು ಪ್ಲೇಟ್ ಕೂಡ ಇರೋದಿಲ್ಲ ಬರಿ ಪಥ್ರೋಳೆ, ಬಾಳೆ ಎಲೆಯಲ್ಲಿ ಕೊಡುತ್ತಾರೆ. ಈ ಮಾಸ್ಟರ್ ದೋಸೆಯ ಕಲೆಯನ್ನು ಸಿದ್ದಪ್ಪನ ಚಮತ್ಕಾರ ಎಂದು ಕರೆಯಿತ್ತಾರೆ. ಇಷ್ಟೊಂದು ಪೇಮಸ್ ಇರುವ ದೋಸೆಯ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ:

  • ಖಾಲಿ ದೋಸೆ – 25 ರೂ.
  • extra ತುಪ್ಪ – 10 ರೂ.
  • ಮಿನಿ ಮಸಾಲಾ – 45 ರೂ.
  • ಪ್ಲೇಟ್ ಇಡ್ಲಿ 10 ರೂ


Also read: ಭಾರತದ ಈ ಚಿಕ್ಕ ಊರಿನ ಪ್ರತಿಯೊಂದು ಮನೆಯಲ್ಲೂ ಒಂದು ವಿಶೇಷವಿದೆ, ಅದನ್ನು ತಿಳಿದರೆ ಬೆರಗಾಗೋದಂತು ಗ್ಯಾರಂಟಿ…!

ಇದೆಲ್ಲವನ್ನು ನೋಡಿದರೆ ಈ ಹೋಟೆಲ್-ನಲ್ಲಿ ಅದೆಂತ ರುಚಿ ಅಡಗಿದೆ ಅನ್ಸುತೆ ಅತಿ ಸಣ್ಣದಾದ ಜಾಗದಲ್ಲಿರುವ ಈ ಹೋಟೆಲ್- ಹೆಸರು ಮಾಡಲು ಕಾರಣ ಸಿದ್ದಪ್ಪನವರ ದೋಸೆ phd ಅನ್ಸುತೆ. ಗುರುವಾರ ಭಾನುವಾರ ಬಂದ್ರೆ ಅಂತು ಎಷ್ಟೊಂದು ಜನ ಅಂದ್ರೆ ಒಬ್ಬರಿಗೆ ಒಂದು ದೊಸೆಯಾದರು ಸಿಗುತ್ತಿಲ್ಲೋ ಅನೋ ಅಷ್ಟು ಜನರು ಇಲ್ಲಿರುತ್ತಾರೆ. ಈ ಸಿದ್ದಪ್ಪ ದೋಸೆ ಸ್ಟಾಲ್ ಇರುವುದು ಸಾಂಪಂಗಿ ರಾಮನಗರದಲ್ಲಿದೆ ಇನ್ನೂ ಈ ಹೋಟೆಲ್ ಬೆಳಿಗ್ಗೆ 8 ರಿಂದ 11 ವರೆಗೆ ಮಾತ್ರ ತೆರೆದಿರುತ್ತೆ. ಇಂತಹ ರುಚಿಯಿರುವ ಸಿದ್ದಪ್ಪ ದೋಸೆ ಸ್ಟಾಲ್ ದೋಸೆ ರುಚಿಯನ್ನು ನೀವು ಸವಿದು ನೋಡಿ.