ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಸರ್ಕಾರದ ಡಿಜಿಟಲ್ ಇಂಡಿಯಾದಿಂದ ಎಷ್ಟೊಂದು ಪ್ರಯೋಜನವಾಗಿದೆ.?

0
789

ನರೇಂದ್ರ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ ಈ ಯೋಜನೆಯಿಂದ ಹಲವಾರು ಉಪಯೋಗಗಳು ಆಗಿವೆ ನರೇಂದ್ರ ಮೋದಿಯವರು ಚುನಾವಣೆಕ್ಕಿಂತ ಮೊದಲು ನೀಡದ ಬರವಸೆಯಲ್ಲಿ ಈ ಡಿಜಿಟಲ್ ಕನಸು ಒಂದಾಗಿತ್ತು.


Also read: ಟ್ವಿಟ್ಟರ್​ನಲ್ಲಿ ಇನ್ಮುಂದೆ ಅಸಭ್ಯ ಮತ್ತು ಅವಾಚ್ಯ, ನಿಂದನೆಯ ಪೋಸ್ಟ್​ಗಳನ್ನು ಹಾಕಿವ ಮುನ್ನ ಎಚ್ಚರ; ಬೀದಿಯಲ್ಲಿ ಹರಾಜ್ ಆಗುತ್ತೆ ಮಾನ..

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದೆ. ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದೆ.ಇದು ಕಾಗದಪತ್ರಗಳ ಕಾರ್ಯ, ಸಮಯ ಮತ್ತು ಮಾನವಶ್ರಮವನ್ನು ಉಳಿಸುವಲ್ಲಿ ಒಂದು ಪ್ರಮುಖ ಪಾತ್ರವಹಿಸಿದೆ. ಸರ್ಕಾರ ಮತ್ತು ಖಾಸಗಿ ವಲಯಗಳ ಒಕ್ಕೂಟದಿಂದಾಗಿ ಈ ಯೋಜನೆಗೆ ಆವೇಗ ಹತ್ತಿಕೊಳ್ಳುತ್ತವೆ. ಹಳ್ಳಿಗಳು ಹೊಂದಿರುವ ಹಿಂದುಳಿದ ಪ್ರದೇಶಗಳನ್ನು ಡಿಜಿಟಲೀಕರಣ ಗೊಳಿಸುವುವುದರಿಂದಾಗಿ ಆ ಹಳ್ಳಿಗಳ ಅಭಿವ್ರುದ್ಧಿ ಸಾಧ್ಯವಾಗಿದೆ ಹಾಗೂ ಭಾರತದ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿ ಹೆಚ್ಚು ತಾಂತ್ರಿಕವಾಗಿ ಮುಂದುವರಿಯುತ್ತದೆ. ಡಿಜಿಟಲ್ ಇಂಡಿಯಾ ಭಾರತ ಸರ್ಕಾರದ ಒಂದು ಬಹುಮುಖ ಮತ್ತು ಉಪಯುಕ್ತ ಉಪಕ್ರಮವು ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ಆಗಿದೆ.


Also read: ರಾಜಕೀಯ ಲಾಭಕ್ಕಾಗಿ ಯೋಧರನ್ನು ಬಳಸಿಕೊಳ್ಳುತ್ತಿದೆ ಕಮಲ; ನಾಚಿಕೆ ಬಿಟ್ಟು ಸರ್ಜಿಕಲ್ ಸ್ಟ್ರೈಕ್ ದಿನವನ್ನು ಆಚರಿಸಿದ ಬಿಜೆಪಿ..!

ಇದಕ್ಕೆ ಸಾಕ್ಷಿಯಾಗಿ ಪ್ರಧಾನ ಮಂತ್ರಿ ಜನಧನ ಯೋಜನೆ, ಉಜ್ವಲ ಯೋಜನೆ ಯಾವುದೇ ಇದ್ದಿರಬಹುದು, ಅವನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಲು ಸೋಶಿಯಲ್ ಮೀಡಿಯಾವನ್ನು ಸರ್ಕಾರ ಸಮಸರ್ಥವಾಗಿ ಬಳಸಿಕೊಂಡಿದೆ. ರೈಲ್ವೇ ನಿಲ್ದಾಣಗಳಲ್ಲಿ ವೈಫೈಯ ಸೌಲಭ್ಯ, ಹಲವು ಮೊಬೈಲ್ app ಗಳ ಮೂಲಕ ಸರ್ಕಾರದ ಯೋಜನೆ ಜನರಿಗೆ ತಲುಪುವಂತೆ ಮಾಡಿ, ಹೊಸ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಭಾರತೀಯ ರೈಲ್ವೇಯು 700 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ನೀಡುತ್ತಿದೆ.


Also read: ಜಿಯೋವಿನ ಏಳಿಗೆಗೆ ಮೋದಿ ಸರ್ಕಾರ ಬಿಎಸ್ಎನ್ಎಲ್ ಅನ್ನು ಬಲಿ ಕೊಡುತ್ತಿದೆಯೇ??

ಇದರ ಉಪಯೋಗವನ್ನು ತಿಂಗಳಿಗೆ ಸುಮಾರು 8 ಮಿಲಿಯನ್ ಜನರು ತೆಗೆದುಕೊಳ್ಳುತ್ತಿದ್ದಾರೆ. ಗೂಗಲ್ ಜೊತೆಗಿನ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ದೇಶದಲ್ಲಿ ಕಪ್ಪು ಹಣದ ಹರಿವನ್ನು ತಪ್ಪಿಸುವ ಸಲುವಾಗಿ ಹಣ ಪಾವತಿ ವಿಧಾನದಲ್ಲೇ ಹಲವು ಬದಲಾವಣೆಗಳನ್ನು ತರಲಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರ್ಕಾರದ ಈ ಎಲ್ಲಾ ಯೋಜನೆಗಳಿಂದ ಆಧುನಿಕ ತಂತ್ರಜ್ಞಾನವನ್ನು ಜನಸಾಮಾನ್ಯರೂ ಬಳಸಿಕೊಳ್ಳುವಂತಾಗಿರುವುದು ಶ್ಲಾಘನೀಯ. ಜನರು ಅಗತ್ಯ ದಾಖಲೆಗಳ ಪ್ರತಿಯನ್ನು ಕಾಗದದ ಅಥವಾ ಸ್ಮಾರ್ಟ್ ಕಾರ್ಡ್ ಮೂಲಕ ಸಂಗ್ರಹಿಸುವುದಕ್ಕಿಂತ ಹೊಸ ಕಾಲಕ್ಕೆ ತಕ್ಕಂತೆ ಡಿಜಿಟಲ್ ರೂಪದಲ್ಲಿ ಕಾಯ್ದಿರಿಸಲು ಡಿಜಿ ಲಾಕ್ app ಅನ್ನು ಪರಿಚಯಿಸಿದೆ. ಉಮಾಂಗ್(Unified Mobile Application for New-age Governance) ಎಂಬ ಮೊಬೈಲ್ app ಸರ್ಕಾರದ ಹಲವು ಯೋಜನೆಗಳ ಉಪಯೋಗವನ್ನು ಮೊಬೈಲ್ app ಮೂಲಕ ನೀಡುತ್ತಿದೆ. ಗ್ಯಾಸ್ ಬುಕಿಂಗ್, ಬೆಳೆ ವಿಮೆ, ಇಪಿಎಫ್, ಪಿಂಚಣಿ ಸೇರಿದಂತೆ ಹಲವು ಯೋಜನೆಗಳ ಉಪಯೋಗವನ್ನು ಇಲ್ಲಿ ಪಡೆಯಬಹುದು.