ಪೆಟ್ರೋಲ್ ಬಂಕ್-ನಲ್ಲಿ ಮೊಬೈಲ್ ಬಳಸುವುದು ಬ್ಯಾನ್ ಆಗಿದ್ದರೂ, PayTM ಅಥವಾ BHIM ಆಪ್-ಗಳನ್ನು ಬಳಸುವುದು ಎಷ್ಟು ಸುರಕ್ಷಿತ

0
696

ನೀವು ನಿಮ್ಮ ವಾಹನಗಳಿಗೆ ಬಂಕ್ ಗಳಲ್ಲಿ ಇಂಧನ ಹಾಕಿಸುವಾಗ ಎಚ್ಚರ ವಹಿಸುವುದು ಅಗತ್ಯ. ಪೆಟ್ರೋಲ್ ಬಂಕ್‌ ಬಳಿ ಮೊಬೈಲ್ ಬಳಕೆ ಅಪಾಯಕಾರಿ ಅಪಾಯ ಎಂದು ಗೊತ್ತಿದ್ದರೂ ಪೆಟ್ರೋಲ್ ಮತ್ತು ಗ್ಯಾಸ್ ಬಂಕ್‌ಗಳಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ಈ-ವಾಲೆಟ್ ಮುಖಾಂತರ ಹಣವನ್ನು ಪಾವತಿ ಮಾಡುವವರಿಗೆ ಕೇಂದ್ರ ಸರ್ಕಾರ ಭರ್ಜರಿ ರಿಯಾಯಿತಿ ನೀಡಿತ್ತು.

ಅಷ್ಟಕ್ಕೂ ಪೆಟ್ರೋಲ್ ಮತ್ತು ಗ್ಯಾಸ್ ಬಂಕ್‌ಗಳಲ್ಲಿ ಮೊಬೈಲ್ ಯಾಕೆ ಬಳಸಬಾರದು..?

ಈ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಿದ್ದರೂ, ಪ್ರಕರಣಗಳು ಕಡಿಮೆಯಾಗುವ ಬದಲು ಹೆಚ್ಚುತ್ತಿರುವುದು ಬಂಕ್‌ಗಳ ಮಾಲೀಕರ ನಿದ್ದೆಗೆಡಿಸಿದೆ. ‘ಸೂಚನೆ ಇರುವುದು ನೋಡಲಿಕ್ಕೆ, ನಿಯಮ ಇರುವುದು ಉಲ್ಲಂಘಿಸಲು’ ಎಂಬ ನಿಲುವು ಕೆಲ ಗ್ರಾಹಕರದ್ದು. ಬಂಕ್ ಪ್ರವೇಶಿಸಿದ ತಕ್ಷಣ ಮೊಬೈಲ್ ಕೈಗೆತ್ತಿಕೊಳ್ಳುವವರೂ ಇದ್ದಾರೆ. ಬಂಕ್ ಸಿಬ್ಬಂದಿ ಮನವಿಗೆ ಕಿವಿಗೊಡದೆ ಉಡಾಫೆ ಮಾಡುವವರೇ ಹೆಚ್ಚು.

‘ಬಂಕ್ ಒಳಗೆ ಮೊಬೈಲ್ ಬಳಕೆ ನಿಷೇಧ’ ಎಂಬ ಫಲಕದ ಎದುರೇ ಮೊಬೈಲ್ ಬಳಸುತ್ತಾರೆ. ಇವರಿಗೆ ಅಪಾಯದ ಕಿಂಚಿತ್ ಅರಿವು ಇರುವಂತೆ ಕಾಣುತ್ತಿಲ್ಲ. ಮೊಬೈಲ್ ಬಳಕೆ ನಿಷಿದ್ಧ ಎಂದು ಗೊತ್ತಿದ್ದರೂ, ಬಳಸುತ್ತಾರೆ.

ಅಗ್ನಿ ಅನಾಹುತ:

ಮೊಬೈಲ್‌ಗಳು ಹೊರಸೂಸುವ ಎಲೆಕ್ಟ್ರಾನಿಕ್ ಡಿಸ್‌ಚಾರ್ಜ್ ನಿಂದ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

ಉರಿಯುವ ಬೆಂಕಿಕಡ್ಡಿ ಅಥವಾ ಸಿಗರೇಟಿನಂತೆಯೇ ಮೊಬೈಲ್‌ ಫೋನ್‌ ಕೂಡ ಪೆಟ್ರೋಲ್‌ ಬಂಕ್‌ನಲ್ಲಿ ಅಪಾಯಕಾರಿಯಾಗಬಲ್ಲದು. ಮೊಬೈಲ್‌ ಫೋನ್‌ ಸೂಸುವ ಕಿರಣಗಳು ಪೆಟ್ರೋಲ್‌, ಡೀಸೆಲ್‌ ಅಥವಾ ಎಲ್‌ಪಿಜಿಯಾಂದಿಗೆ ಸಂಯೋಗ ಹೊಂದಿದಾಗ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು.

ಮೊಬೈಲ್‌ ಫೋನ್‌ನಿಂದ ಕಾಂತೀಯ ತರಂಗಗಳು ಸೃಷ್ಟಿಯಾಗುತ್ತವೆ. ಈ ತರಂಗಗಳು ಪೆಟ್ರೋಲ್‌ ಹೊತ್ತಿ ಉರಿಯಲು ಪ್ರಚೋದಿಸುತ್ತವೆ. ಇದರಿಂದ ಭಾರೀ ಸ್ಫೋಟ ಸಂಭವಿಸಬಹುದು.

ಇಎಸ್‌ಡಿ ಎಂದರೇನು?

ಎರಡು ವಿದ್ಯುತ್ ಉತ್ಪಾದಕ ವಸ್ತುಗಳು ಸಂಪರ್ಕಕ್ಕೆ ಬಂದಾಗ ಉಂಟಾಗುವ ಕಿಡಿ. ಡಿಜಿಟಲ್ ಸಾಧನಗಳು, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ಗಳನ್ನು ಬಂಕ್ ಮತ್ತು ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಬಳಸದಿರುವುದು ಸೂಕ್ತ. ಇದೇ ಕಾರಣಕ್ಕೆ ವಿಮಾನ ನಿಲ್ದಾಣದ ಬೋರ್ಡಿಂಗ್ ತಾಣದ ಬಳಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.

ಬಂಕ್‌ಗಳಲ್ಲಿ ಮೊಬೈಲ್ ಬಳಕೆ ಅಪಾಯಕಾರಿ. ಈ ಕುರಿತು ನಿರ್ಲಕ್ಷ್ಯ ಸರಿಯಲ್ಲ. ಕಬ್ಬಿಣದ ವಸ್ತುಗಳು ಇರುವಲ್ಲಿ ಮೊಬೈಲ್ ಬಳಕೆಯಿಂದ ಕಿಡಿ ಉದ್ಭವಿಸುವ ಸಾಧ್ಯತೆ ಇದೆ. ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ತುಂಬುವ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಬೇಕು.