ಇಂದು ಸಂಪೂರ್ಣ ಸೂರ್ಯಗ್ರಹಣವಿರುವ ಕಾರಣ ಹಲವು ರಾಶಿಗಳ ಮೇಲೆ ದುಷ್ಪರಿಣಾಮ ಬೀರಲಿದೆ, ಪರಿಹಾರ ಇಲ್ಲಿದೆ ನೋಡಿ!!

0
674

2019ರ ಎರಡನೇ ಸೂರ್ಯಗ್ರಹಣವು ಸಂಭವಿಸಲ್ಲಿದೆ. ಈ ಗ್ರಹಣದಿಂದ ರಾಶಿಗಳ ಮೇಲೆ ಉಂಟಾಗುವ ರಾಶಿ, ದುಷ್ಟಪರಿಣಾಮಗಳನ್ನು ಕೇಳಿದರೆ ಬೆರಗಾಗಿ ಹೋಗ್ತಿರಾ. ಗ್ರಹಣ ಎಂದರೆ ಗತಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ಈ ಬಾರಿ ಸುಮಾರು 4 ನಿಮಿಷ 33 ಸೆಕೆಂಡ್‌ವರೆಗೆ ಗ್ರಹಣ ಕಾಲ ಇರಲಿದ್ದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10.25ಕ್ಕೆ ಸಂಭವಿಸಲಿದೆ. ನ್ಯೂಜಿಲೆಂಡ್ ಕರಾವಳಿಯಲ್ಲಿ ಆರಂಭವಾಗಲಿರುವ ಗ್ರಹಣ ಪೆಸಿಫಿಕ್‌ ಸಮುದ್ರ, ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರಿಸಲಿದೆ. ಇದು ನಮ್ಮ ದೇಶದಲ್ಲಿ ಗೋಚರವಾಗುವುದಿಲ್ಲ.

ಇದರ ಪರಿಣಾಮವಾಗಿ ಕೆಲವೊಂದು ರಾಶಿಗಳಿಗೆ ಶುಭ ಮತ್ತು ಅಶುಭ ಸಂಭವಿಸಲ್ಲಿದೆ. ಅಂತಹ ಕೆಲವು ಅಶುಭ ಫಲ ವಿರುವ ರಾಶಿಗಳು ತುಂಬಾ ಜಾಗ್ರತೆ ವಹಿಸಬೇಕು ಇದರ ಪರಿಹಾರಕ್ಕಾಗಿ ಸ್ವಲ್ಪ ಅಕ್ಕಿಯನ್ನು ಮತ್ತು ಹುರಳಿಕಾಳನ್ನು ಹತ್ತಿರದ ದೇವಸ್ಥಾನದಲ್ಲಿ ದಾನಮಾಡುವ ಹಾಗೂ ಗ್ರಹಣದ ಸಮಯದಲ್ಲಿ ದೇವರ ಪಾರಾಯಣ ಮಾಡಬೇಕು. ಮತ್ತು ಇನ್ನು ಮುಖ್ಯವಾಗಿ ಗ್ರಹಣದ ಸಮಯದಲ್ಲಿ ಹೋಮ ಮಾಡಿದರೆ ಕೋಟಿ ಪುಣ್ಯಕ್ಕೆ ಸಮ ಎಂದು ಜೋತಿಷ್ಯ ಶಾಸ್ತ್ರ ದಲ್ಲಿ ಹೇಳಲಾಗಿದೆ. ಎಲ್ಲಾ ರಾಶಿಯವರು ಗ್ರಹಣದ ದಿನ ಮೂರು ಹೊತ್ತು ಸ್ನಾನ ಮಾಡಿದರೆ ತುಂಬಾ ತುಂಬಾ ಒಳ್ಳೆಯದಾಗುತ್ತೆ. ಗ್ರಹಣ ಸಂಭವಿಸಿದಾಗ ಆಹಾರ ಸ್ವೀಕಾರ ನಿಷಿದ್ಧವಾಗಿದ್ದು, ಗ್ರಹಣ ಮೋಕ್ಷವಾದ ನಂತರವೇ ಸ್ನಾನಾದಿಗಳನ್ನು ಪೂರೈಸಿ ಆಹಾರ ಸ್ವೀಕರಿಸಬೇಕು.

ಈ ಗ್ರಹಣವು ಸುಮಾರು 161 ನಿಮಿಷಗಳವರೆಗೆ ಭೂಮಿಯ ಮೇಲೆ ಗ್ರಹಣದ ಪ್ರಭಾವ ಹಲವು ರಾಶಿಗಳ ಮೇಲೆಪ್ರಭಾವ ಬಿರಿದ್ದಲ್ಲಿ ಮನಸ್ಸು ಉದ್ವಿಗ್ನಗೊಲಿಸುವ ಸಂಭವಿರುವುದರಿಂದ ಮುಖ್ಯವಾಗಿ ಗ್ರಹಣ ಸಮಯದಲ್ಲಿ ಈ ಮಂತ್ರಯನ್ನು ಹೇಳಲೇಬೇಕು.

ಶ್ರೀ ಚಂದ್ರ ಗಾಯತ್ರಿ ಮಂತ್ರ : || ಓಂ ಕೃಷ್ಣ ಪುತ್ರಾಯ ವಿದ್ಮಹೇ ಅಮ್ರುತದ್ವಾಯ ಧೀಮಹಿ ತನ್ನೋ ಚಂದ್ರ ಪ್ರಚೋದಯಾತ್ಶ್ರೀ||
ಕೇತು ಗಾಯತ್ರಿ ಮಂತ್ರ: || ಓಂ ಅಷ್ವಧ್ವಜಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನೋ ಕೇತು ಪ್ರಚೋದಯಾತ್||
ಖಗ್ರಾಸ ಚಂದ್ರಗ್ರಹಣ ಯಾವ ಯಾವ ರಾಶಿಯ ಮೇಲೆ ಯಾವ ರೀತಿಯ ಗ್ರಹಣದ ಪರಿಣಾಮ ಬೀರಲಿದೆ ಅನ್ನೋದು ಇಲ್ಲಿದೆ ನೋಡಿ..!

ಮೇಷ:

ಈ ಚಂದ್ರಗ್ರಹಣ ನಿಮ್ಮ ಮೇಲೆ ಹಾಗೂ ನಿಮ್ಮ ರಾಶಿ ಮೇಲೆ ಪ್ರಭಾವ ಬೀರುವುದು. ಈ ಸಮಯದಲ್ಲಿ ಸಮಾಧಾನ ಇರುವುದು ಹಾಗೂ ವಿಷಯಗಳನ್ನು ಸುಲಭವಾಗಿ ತೆಗೆದುಕೊಳ್ಳುವುದನ್ನು ಕಲಿತುಕೊಳ್ಳಿ. ಕುಟುಂಬ ಹಾಗೂ ಸ್ನೇಹಿತರ ಜೀವನದಲ್ಲಿ ಆಗುವ ಘಟನೆಗಳ ಪರಿಣಾಮದಿಂದಾಗಿ ಈವರೆಗೆ ಚೆನ್ನಾಗಿದ್ದವರು ನಿಮ್ಮ ಜತೆ ನಡವಳಿಕೆ ಬದಲಾಯಿಸುತ್ತಾರೆ. ಈ ರಾಶಿಯವರು ಯಾವುದೇ ವಿಷದಲ್ಲಿ ಅನಾವಶ್ಯಕವಾಗಿ ಮೂಗು ತುರಿಸುವದ್ದನ್ನು ಬಿಟ್ಟು ಸುಮ್ನನಿದ್ರೆ ಒಳ್ಳೆಯದು.

ವೃಷಭ:

ಈ ಗ್ರಹಣದಂದು ಮುಕ್ಯವಾಗಿ ಈ ರಾಶಿಯವರು ಉದ್ಯೋಗ ಮತ್ತು ವ್ಯವಹಾರದ ವಿಚಾರವಾಗಿ ಇರುವ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸ್ವಂತ ವ್ಯಾಪಾರ ಇದ್ದರೆ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯ ಸೃಷ್ಟಿ ಯಾಗುವ ಸಂಭವವಿದೆ. ಹಣಕಾಸಿನಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡದಿರುವುದು ಉತ್ತಮ. ಸಾದ್ಯವಾದಷ್ಟು ಮೊಬೈಲ್ ಫೋನ್, ಲ್ಯಾಪ್’ಟಾಪ್ ವಸ್ತುಗಳ ಬಗ್ಗೆ ಗಮನವಿರಲಿ. ನಿಮಗೆ ಚಿಕ್ಕ ಚಿಕ್ಕ ವಿಷಯಕ್ಕೆ ಚಿಂತೆ ಮಾಡಿ ನಗೆ ಪಾತಕ್ಕೆ ತುತ್ತಾಗುತ್ತಿರಾ ಅದರಿಂದ ಚಿಂತೆ ಬಿಟ್ಟು ಅರಾಮವಾಗಿರಿ.

ಮಿಥುನ:

ಈ ಬಾರಿ ನಿಮಗೆ ಅಶುಭಗಳೇ ಜಾಸ್ತಿ ವೃತ್ತಿ ,ವ್ಯಾಪಾರ ಉದ್ಯೋಗ ಕುಟುಂಬದಲ್ಲಿ ಕಷ್ಟಗಳೇ ತುಂಬಾ ಇವೇ ಅದರಿಂದ ಗ್ರಹನಶಾಂತಿ ಮಾಡಿಸುವುದು ಒಳ್ಳೆಯದು. ಉದಾಹರಣೆಗೆ ದಿಢೀರ್ ಖರ್ಚು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಒತ್ತಡ. ಮತ್ತು ಉದ್ಯೋಗ-ಹಣಕಾಸು ವಿಚಾರದಲ್ಲಿ ಎಚ್ಚರದಿಂದ ವರ್ತಿಸಿ. ಅದರಲ್ಲು ವಿದೇಶ ಪ್ರಯಾಣ-ದೂರಪ್ರಯಾಣಗಳು ಬೇಡ, ಸಮಸ್ಯೆಗಳು ಎದುರಾಗಬಹುದು ಮತ್ತು ವಿದೇಶದಲ್ಲಿ ನೆಲೆಸಿರುವ ಸ್ನೇಹಿತರು, ಸಂಬಂಧಿಕರು ಚಿಂತೆಗೆ ಕಾರಣವಾಗಬಹುದು.

ಕಟಕ:

ಈ ಹಿಂದೆ ನೀವು ಪಂಚಮ ಶನಿಕಾಟದಿಂದ ಬಹಳ ಕಷ್ಟ ಅನುಭವಿಸಿ ಈ ಗ್ರಹಣ ದಿಂದ ಮುಕ್ತಿಹೊಂದಿ ಅನುಕೂಲದ ಸಮಯ ನಿಮ್ಮದಾಗಲ್ಲಿದೆ. ಹಾಗಾಗಿ ಗ್ರಹಣ ಈ ರಾಶಿಯವರ ಮೇಲೆ ಯಾವಾಗಲೂ ಮುಖ್ಯ ಪರಿಣಾಮ ಬೀರುತ್ತದೆ. ಈ ಹಿಂದಿನ ಗ್ರಹಣಗಳಿಗೆ ಹೋಲಿಸಿದರೆ ಇದು ಶುಭ ತರುವ ಸಾಧ್ಯತೆಯಿದೆ. ಪ್ರೀತಿಪಾತ್ರರು ಅಥವಾ ಬಾಳಸಂಗಾತಿ ಮೇಲೆ ಗ್ರಹಣದ ಪ್ರಭಾವ ಹೆಚ್ಚಿರುತ್ತದೆ. ಹಣಕಾಸು ವಿಚಾರಗಳಲ್ಲಿ ಬದಲಾವಣೆ, ಗ್ರಹಣದ ಪ್ರಭಾವದಿಂದ ಶಕ್ತಿ ವೃದ್ಧಿಯಾಗುತ್ತದೆ.

ಸಿಂಹ:

ಸರಿಯಾಗಿ ನಿದ್ರೆ ಬರದೆ ಹಿಂಸೆಯಾಗುತ್ತದೆ. ಕೆಟ್ಟ ಕನಸುಗಳು ಬೀಳುತ್ತವೆ. ಎಲ್ಲ ಕೆಟ್ಟ ಕನಸುಗಳು ನಿಜವಾಗುತ್ತವೆ ಎಂಬ ಆತಂಕ ಬೇಡ ಮತ್ತು ಕಾನೂನು ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ತೊಂದರೆ ಎದುರಾಗುತ್ತದೆ. ಪ್ರೀತಿಪಾತ್ರರು ಅಥವಾ ಬಾಳಸಂಗಾತಿ ಮೇಲೆ ಗ್ರಹಣದ ಪ್ರಭಾವ ಹೆಚ್ಚಿರುತ್ತದೆ. ಹಣಕಾಸು ವಿಚಾರಗಳಲ್ಲಿ ಬದಲಾವಣೆಯಾಗುತ್ತದೆ.

ಕನ್ಯಾ:

ಒತ್ತಡ ಹೆಚ್ಚಾಗುವ ಸಾಧ್ಯತೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ ಮತ್ತು ಭಯ ಮತ್ತು ನಿರಾಶೆ ಕಾಣಿಸಿಕೊಳ್ಳುತ್ತದೆ. ಗಂಭೀರವಾದ ಅಪಘಾತ ಸಾಧ್ಯತೆ, ಆರೋಗ್ಯದ ಬಗ್ಗೆ ವಿಪರೀತ ಎಚ್ಚರ ವಹಿಸಿ. ಈ ಬಾರಿ ನಿಮಗೆ ಅಶುಭಗಳೇ ಜಾಸ್ತಿ ಇರುವುದರಿಂದ ಗ್ರಹನಶಾಂತಿ ಮಾಡಿಸುವುದು ಒಳ್ಳೆಯದು. ಗ್ರಹಣದ ಸಂದರ್ಭದಲ್ಲಿ ವಿಷ್ಣುವಿನ ಪಾರಾಯಣ ಮಾಡಿದರೆ ಒಳ್ಳೆಯದು.

ತುಲಾ:

ಪ್ರಣಯ ಹಾಗೂ ಪ್ರೇಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಈಗಾಗಲೇ ಮದುವೆಯಾದವರು ಅಥವಾ ಪ್ರೇಮದಲ್ಲಿ ಇರುವವರಿಗೆ ಸಮಸ್ಯೆ ಮತ್ತು ಸಂಬಂಧ ಇನ್ನೂ ಗಟ್ಟಿ ಆಗಿಲ್ಲ ಎಂದರೆ ಮುರಿದು ಬೀಳುವ ಸಾಧ್ಯತೆ ಇದೆ.

ವೃಶ್ಚಿಕ:

ಗ್ರಹಣದ ದಿನ ಯಾವುದೇ ಕೆಲಸವನ್ನು ಹಚ್ಚಿಕೊಳ್ಳಬೇಡಿ. ಮನೆಯಲ್ಲಿ ಇರಿ , ಪೋಷಕರು-ಪೋಷಕ ಸಮಾನರಿಂದ ಒತ್ತಡ ಬೀಳಲಿದೆ ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪ್ರಭಾವ ಇದೆ. ಉದ್ಯೋಗದ ಮೇಲೆ ಪರಿಣಾಮ. ಬಿದ್ದು ಗಾಯ ಆಗುವ ಸಂಭವವಿದೆ ಆದರಿಂದ ಎಚ್ಚರಿಕ್ಕೆ ಇಂದವಿರುವುದು ಲೇಸು. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರಲು ಪ್ರಯತ್ನಿಸಿ.

ಧನಸ್ಸು:

ಸೋದರ ಸಂಭಂಧಿ, ಬಾಳಸಂಗಾತಿ ನಿಮ್ಮ ಮೇಲೂ ಪರಿಣಾಮ, ನಿಮಗೆ ಮಕ್ಕಳಿದ್ದಲ್ಲಿ ಅವರ ಬಗ್ಗೆ ಹೆಚ್ಚಿನ ಜಾಗ್ರತೆಯನ್ನು ವಹಿಸಿ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕದಿದ್ದರೆ ಒಳ್ಳೆಯದು. ಹಣ ನಷ್ಟವಾಗುವುದು ಇದೆ ಆದರಿಂದ ಯಾವುದೇ ಹಣದಾಟವನ್ನು ಆಡಬೇಡಿ.

ಮಕರ:

ಆರ್ಥಿಕ ವಿಚಾರಗಳನ್ನು ಚೆನ್ನಾಗಿ ಪ್ಲಾನ್ ಮಾಡಿ. ಅನುಕೂಲವೇ ಆಗುತ್ತೆ. ಮನೆಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ತಕ್ಷಣ ಗಮನ ಹರಿಸಬೇಕಾಗುತ್ತದೆ ಮತ್ತು ಪ್ರೀತಿಪಾತ್ರರು, ಬಾಳ ಸಂಗಾತಿ ಅಥವಾ ಮಕ್ಕಳಲ್ಲಿ ಭಾವನಾತ್ಮಕವಾಗಿ ಅಸ್ಥಿರತೆ ಕಾಡುತ್ತೆ. ಸಾಡೇಸಾತ್ ಇದ್ರು ನೀವು ಬಯಸಿದ ಎಲ್ಲಾ ಕೆಲಸಗಳು ಎಸ್ ಆಗುತ್ತೆ.

ಕುಂಭ:

ಈ ಬಾರಿ ನಿಮಗೆ ಅಶುಭಗಳೇ ಜಾಸ್ತಿ ಇರುವುದರಿಂದ ಆರೋಗ್ಯ ಸಂಬಂಧಿ ವಿಚಾರಗಳ ಬಗ್ಗೆ ಆತಂಕ ಹೆಚ್ಚಾಗುತ್ತದೆ, ಚಿಂತೆ ಮಾಡುವ ಅಗತ್ಯವಿಲ್ಲ ವಾಹನ ಚಲಾಯಿಸುವಾಗ ಮತ್ತು ರಸ್ತೆಯಲ್ಲಿ ಓಡಾಡುವಾಗ ಎಚ್ಚರದಿಂದ ಇರಬೇಕು. ಮತ್ತು ನೀವು ಸ್ತ್ರೀ ಸಂಬದಿಸಿದ ವಿಚಾರದಲ್ಲಿ ದೂರವಿರುವುದು ಸರಿ.

ಮೀನ:

ಆಧ್ಯಾತ್ಮಿಕ ಜೀವನ ನಡೆಸುವವರಿಗೆ ಈ ಗ್ರಹಣ ಬಹಳ ಮುಖ್ಯವಾದುದು. ಆಧ್ಯಾತ್ಮಿಕ ಗುರುಗಳ ಬದಲಾವಣೆ ಆಗಬಹುದು, ಎಲ್ಲಾ ವಿಷಯದಲ್ಲಿ ಲಾಭ ವಿದೆ ಆದರಿಂದ ನೆಮ್ಮದಿ ಇರುವಿರಿ. ಈ ರಾಶಿವರಿಗೆ ಶುಭ ಫಲವಿದೆ ಹಾಗಾಗಿ ತುಂಬಾ ದಿನಗಳಿಂದ ಇದ್ದ ಚಿಂತೆ, ದುಃಖ, ಆರೋಗ್ಯ ಸಮಸ್ಯೆ, ಹಣಕಾಸಿನ ತೊಂದರೆ ಹೀಗೆ ಏನೇ ಇದ್ದರು ಕೂಡ ಈ ಗ್ರಹಣದಿಂದ ಎಲ್ಲಾ ಮುಕ್ತಿಯಾಗಿ ಒಳ್ಳೆಯ ಸುದ್ಧಿಯನ್ನು ಕೇಳುತ್ತಿರ.