Online ಪೇಮೆಂಟ್-ನಲ್ಲಿ ಇತ್ತೀಚೆಗೆ ವಂಚನೆ ಜಾಸ್ತಿಯಾಗ್ತಿದೆ, ಗ್ರಾಹಕ ಸೇವೆಯವರ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಗ್ರಾಹಕನ ಕಥೆ ನೋಡಿ!!

0
234

ಇತ್ತೀಚಿಗೆ ಆನ್ಲೈನ್ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿದ್ದು, ಇದರಿಂದ ಎಷ್ಟೊಂದು ಪ್ರಯೋಜನ ಇದಿಯೋ ಅಷ್ಟೊಂದೆ ಅಪಾಯವು ಕಂಡು ಬರುತ್ತಿದೆ. ಏಕೆಂದರೆ ಚಾಲಾಕಿ ವಂಚಕರು ಹಲವು ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹದೆ ಘಟನೆಯೊಂದು ಇಂದೋರ್‌ನಲ್ಲಿ ನಡೆದಿದ್ದು 42 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ 2.28 ಲಕ್ಷ ರೂ. ಕಳೆದುಕೊಂಡಿದ್ದಾನೆ. ಇಂತಹವುಗಳ ಹಲವಾರು ಬ್ಯಾಂಕುಗಳು ಈ ಎಚ್ಚರಿಕೆ ನೀಡುತ್ತಿವೆ. ಆದರೆ ಇವುಗಳ ಬಗ್ಗೆ ಎಚ್ಚರವಾಗಿದ್ದರೂ ರಿಮೋಟ್ ಡಿವೈಸ್ ಕಂಟ್ರೋಲ್ ಆ್ಯಪ್ ಮೂಲಕ ಬಲಿಪಶು ಆಗಿದ್ದಾನೆ . ಹೇಗೆ ವಂಚನೆ ಮಾಡುತ್ತಾರೆ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

Also read: ಈ ಹೀರೋಯಿನ್-ನ ಜೊತೆ ಭೇಟಿ ಆಗೋ ಆಸೆ ಇಟ್ಕೊಂಡು ಹೋಗಿ 60 ಲಕ್ಷ ಕಳೆದುಕೊಂಡ ವ್ಯಕ್ತಿ!!

ವಂಚನೆಗೆ ಒಳಗಾದ ವ್ಯಕ್ತಿ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ, ಈ ಹಿಂದೆ ಮಾಡಿದ ಕೆಲವು ಆರ್ಡರ್ ಗಳಿಗೆ ಹೆಚ್ಚುವರಿಯಾಗಿ 280 ರೂಗಳನ್ನು ತನ್ನ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗಿದೆ ಎನ್ನುವುದನ್ನು ತಿಳಿಸಲು ಕಂಪನಿಯ ಕಾಲ್ ಮಾಡಿದ್ದಾನೆ. ಇದಾದ ಎರಡು ದಿನದ ನಂತರ ಪಾವತಿ ಗೇಟ್‌ವೇ ಕಂಪನಿಯ ಗ್ರಾಹಕರ ಸಲಹೆಗಾರನೆಂದು ಕರೆಮಾಡಿ ನೆಟ್ವರ್ಕ್ ಸಮಸ್ಯೆ ಇದೆ ಅದಕ್ಕಾಗಿ ಈ APP ಡೌನ್ಲೋಡ್ ಮಾಡಿ ನಾನು ಹೇಳಿದ ಹಾಗೆ ಮಾಡಿ ನಿಮ್ಮ ಹಣ ವಾಪಸ್ ಬರುತ್ತದೆ ಎಂದು ಹೇಳಿದ್ದಾನೆ. ನಂತರ ಲಾಗಿನ್ ಆದ ಪಾಸ್ವರ್ಡ್ ಕೊಡಿ ಎಂದು ಹೇಳಿದ್ದಾನೆ ಅದರಂತೆ ಪಾಸ್ವರ್ಡ್ ಕೊಟ್ಟಿದ್ದಾನೆ.

Also read: ಕಳ್ಳರು ಈಗ ATM ಕಾರ್ಡ್ ನಿಮ್ಮ ಜೇಬಿನಲ್ಲಿ ಇರುವಾಗಲೇ ಅದರ ಮಾಹಿತಿ ಪಡೆದು ವಂಚನೆ ಮಾಡುತ್ತಿದ್ದಾರೆ, ಅದನ್ನು ತಪ್ಪಿಸುವ ಮಾಹಿತಿ ಹೇಳ್ತೀವಿ ಓದಿ!!

ಆಗ ವ್ಯಕ್ತಿಗೆ ಅನುಮಾನ ಬಂದು ಭಯದಿಂದ ತನ್ನ ಖಾತೆಯಿಂದ ಎಲ್ಲಾ ಹಣವನ್ನು ತನ್ನ ಹೆಂಡತಿಯ ಖಾತೆಗೆ ವರ್ಗಾಯಿಸಲು ಪ್ರಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ಬ್ಯಾಂಕ್ ಗೆ ಹೋಗಿದ್ದಾನೆ. ಬ್ಯಾಂಕ್ ಅವನ ಡೆಬಿಟ್ ಕಾರ್ಡ್-ನ್ನು ಮಾತ್ರ ಬ್ಲಾಕ್ ಮಾಡಿದೆ. ಆದರೆ ಆನ್ಲೈನ್ ಬ್ಯಾಂಕಿಂಗ್ ನ್ನು ಹಾಗೇ ಬಿಟ್ಟಿದೆ. ಅದನ್ನು ಹೆಚ್ಚು ವಿಚಾರ ಮಾಡದ ವ್ಯಕ್ತಿಯ ಎರಡು ದಿನ ಯಾವುದೇ ಹಣ ಕಡಿತವಾಗಿಲ್ಲ, ನಂತರ 15 ಸಾರಿ ಅಕೌಂಟ್-ನಿಂದ ಹಣ ಕಟ್ ಆಗಿದೆ ಆಗ ನೋಡಿದರೆ ಬರೋಬರಿ 2.28 ಲಕ್ಷ ರೂ.ಗಳನ್ನು ವಂಚನೆ ಮಾಡಲಾಗಿತ್ತು.

ಹೇಗೆ ನಡೆಯುತ್ತೆ ವಂಚನೆ?

Also read: ಮೊಬೈಲ್​ ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಎಚ್ಚರ; ಹೊಸ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ ಸೈಬರ್ ಕಳ್ಳರು..

ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ವಂಚಕರು ಕರೆಮಾಡಿ ತಮ್ಮ ಪರಿಚಯ ಮಾಡಿಕೊಂಡು, ನಾವು ನಿಮ್ಮ ಬ್ಯಾಂಕ್ ಮಾಹಿತಿಗಾರ ಎಂದು ಹೇಳುತ್ತಾರೆ. ನಂತರ ನಿಮ್ಮ ಖಾತೆಯನ್ನು ದೃಡಿಕರಿಸಲು ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ಸಂಖ್ಯೆ ಹೇಳಿ ಸಂಪೂರ್ಣ ವಿವರವನ್ನು ಪಡೆಯುತ್ತಾರೆ. ಒಂದು ವೇಳೆ ಮಾಹಿತಿಯನ್ನು ನೀಡಲು ನಿರಾಕರಿಸಿದರೆ, ನಿಮ್ಮ ಮೊಬೈಲ್ ಬ್ಯಾಂಕಿಂಗ್ ಕ್ಲೋಸ್ ಮಾಡಲಾಗುತ್ತೆ. ಎಂದು ಹೆದರಿಸುತ್ತಾರೆ ಅದಕ್ಕೆ ನೀವೂ ಭಯಪಡದೇ ಯಾವುದೇ ಮಾಹಿತಿಯನ್ನು ನೀಡಬೇಡಿ. ವಂಚಕನ ಅಂತಿಮ ಉದ್ದೇಶವೆಂದರೆ ‘ಸಮಸ್ಯೆಯನ್ನು’ ಪರಿಹರಿಸಲು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಮನವರಿಕೆ ಮಾಡುತ್ತಾರೆ. ಈ ಅಪ್ಲಿಕೇಶನ್ ‘ಎನಿಡೆಸ್ಕ್’ ಅಥವಾ ಇತರ ರೀತಿಯ ರಿಮೋಟ್ ಡಿವೈಸ್ ಕಂಟ್ರೋಲ್ ಆ್ಯಪ್ ಆಗಿರುತ್ತದೆ. ಮೋಸ ಕರೆ ಮಾಡುವವರು ನಂತರ 9-ಅಂಕಿಯ ಅಪ್ಲಿಕೇಶನ್ ಕೋಡ್ ಕೇಳುತ್ತಾರೆ. ಅದನ್ನು ಯಾವುದೇ ಕಾರಣಕ್ಕೂ ನೀಡಲು ನಿರಾಕರಿಸಿ. ಅದರಿಂದಲೇ ವಂಚನೆ ಮಾಡುತ್ತಾರೆ.

ಎಚ್ಚರ: ಯಾವುದೇ ಬ್ಯಾಂಕ್ ಅಥವಾ ಕಂಪನಿ ಎಂದು ಕರೆ ಮಾಡಿದ್ದಾಗ app ಮೂಲಕ ಡೌನ್ಲೋಡ್ ಮಾಡಿಕೊಳ್ಳಿ ಎಂದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ.