ಪ್ರತಿಯೊಬ್ಬ ಮನುಷ್ಯ ಲಕ್ಷ್ಮೀ ಕಟಾಕ್ಷ ಸಿಗಲೆಂದು ಪ್ರಾರ್ಥಿಸುತ್ತಾರೆ. ಲಕ್ಷ್ಮಿ ತಮ್ಮ ಮನೆಯಲ್ಲಿ ನೆಲೆಸಬೇಕು ಎಂದು ಎಲ್ಲರೂ ಬಯಸುತ್ತಾರೆ. ವೇದದಲ್ಲಿ ಕೂಡ ಲಕ್ಷ್ಮಿಯನ್ನು ಅದೃಷ್ಟ, ಐಶ್ವರ್ಯ, ಸಮೃದ್ಧಿ, ಯಶಸ್ಸು ಮತ್ತು ಸಂತೋಷದ ಸಂಕೇತವಾಗಿ ನಿರೂಪಿಸಲಾಗಿದೆ. ಸಮೃದ್ಧಿ ಮತ್ತು ಹಣ ಯಾವಾಗಲೂ ಒಂದಕ್ಕೊಂದು ಪೂರಕ. ಹೀಗಾಗಿ ಮಹಾಲಕ್ಷ್ಮಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲೆ ಇರಬೇಕೆಂದರೆ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಆಮೆಯ ಪ್ರತಿಮೆ
ಉತ್ತರ ಮತ್ತು ಪೂರ್ವ ದಿಕ್ಕನ್ನು ಬಿಟ್ಟು ಬೇರೆ ಯಾವ ಮೂಲೆಯ ಸ್ಥಳದಲ್ಲಿ ಆಮೆಯ ಪ್ರತಿಮೆಯನ್ನು ಇಟ್ಟರೆ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಕಾರಣ ಭೂಮಿಯ ಮೇಲೆ ಆಕಳನ್ನು ಬಿಟ್ಟರೆ ಕೇವಲ ಆಮೆಯಲ್ಲಿ ಮಾತ್ರ ವಾತಾವರಣದಲ್ಲಿರುವ ಸಾತ್ತ್ವಿಕತೆಯನ್ನು ಹೆಚ್ಚು ಪ್ರಮಾಣದಲ್ಲಿ ಸೆಳೆದುಕೊಳ್ಳುವ ಶಕ್ತಿಯಿದೆ. ಇದರಿಂದ ಎಲ್ಲಿ ಸಾತ್ತ್ವಿಕತೆ ಹೆಚ್ಚಾಗಿ ಇರುವುದೋ ಅಲ್ಲಿ ಲಕ್ಷ್ಮಿ ವಲೆಯುತ್ತಾಳೆ.
ಬೆಳ್ಳಿಯ ವಿಗ್ರಹ
ಲಕ್ಷ್ಮಿ ಮತ್ತು ಗಣೇಶನ ಬೆಳ್ಳಿಯ ವಿಗ್ರಹಗಳನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಲಕ್ಷ್ಮಿ ದೇವಿಯನ್ನು ಆಕರ್ಷಿಸಬಹುದು.
ಕೊಳಲು
ವ್ಯಾಪಾರದಲ್ಲಿ ಲಕ್ಷ್ಮಿ ಕಟಾಕ್ಷ ನಿಮಗೆ ಸಿಗಬೇಕೆಂದರೆ ವ್ಯಾಪಾರ ಮಾಡುವ ಸ್ಥಳ ಅಥವಾ ಮನೆಯ ತಿಜೋರಿಯಲ್ಲಿ ಬೆಳ್ಳಿಯ ಕೊಳಲನ್ನು ಇಡಬೇಕು.
ಲಕ್ಷ್ಮೀಯಂತ್ರ
ಲಕ್ಷ್ಮೀಯಂತ್ರವನ್ನು ದೇವರ ಮನೆಯಲ್ಲಿ ಅಥವಾ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು.
ಕವಡೆ
ಕವಡೆಗೂ ಲಕ್ಷ್ಮಿ ದೇವಿಗೂ ಹೆಚ್ಚಿನ ಸಂಬಂಧ ವಿದೆ. ಇವು ಸಮುದ್ರದಿಂದ ಹೊರಬರುತ್ತವೆ. ಇವುಗಳನ್ನು ಲಕ್ಷ್ಮಿ ದೇವಿಯೂ ಸಮುದ್ರದಿಂದ ಹೊರಹೊಮ್ಮಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖಿಸಿದೆ. ಆದ್ದರಿಂದ ಇವನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿಯನ್ನು ಆಕರ್ಷಿಸಿದಾಗೆ ಎನ್ನಲಾಗುತ್ತದೆ.
ತಾವರೆ ಹೂ
ಲಕ್ಷ್ಮೀಗೆ ತಾವರೆ ಹೂವಿಗೂ ನೆರವಾದ ಹೋಲಿಕೆಗಳಿವೆ. ತಾವರೆ ಹೂವಿನ ಮೇಲೆ ಅವಳ ವಾಸ. ಲಕ್ಷ್ಮೀಮಿಗೆ ಅತಿಪ್ರೀಯವಾದುದ್ದರಿಂದ ನಾವು ಮನೆಯಲ್ಲಿಟ್ಟರೆ ಲಕ್ಷ್ಮೀದೇವಿಕೂಡ ಮನೆಯಲ್ಲಿ ನೆಲೆಸುತ್ತಾಳೆ.