ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರುಪಾಯಿ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ, ಉಚಿತ ವಾಗಿ ಹೇಗೆ ಚಿಕಿತ್ಸೆ ಪಡೆದುಕೊಳ್ಳಬಹುದು ಅಂತ ಹೇಳ್ತೀವಿ ಓದಿ!!

0
3149

ದೇಶದ ಅಭಿವೃದ್ಧಿಗೆ ಬರಿ ಉದ್ಯೋಗ, ಹಣವಿದ್ದರೆ ಸಾಲದು ದೇಶದಲ್ಲಿರುವ ನಾಗರಿಕರ ಆರೋಗ್ಯವು ಬಹುಮುಖ್ಯವಾಗಿದೆ ಈ ನಿಟ್ಟಿನಲ್ಲಿ “ಆರೋಗ್ಯ ಯೋಜನೆಯನ್ನು” ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದ ಮೊದಲನೇ ರಾಜ್ಯ ಕರ್ನಾಟಕವಾಗಿದೆ. ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಇಂದಿರಾ ಸುರಕ್ಷಾ ಯೋಜನೆ, ಮುಖ್ಯಮಂತ್ರಿಗಳ ಸಾಂತ್ವನ ಯೋಜನೆ ಹಾಗೂ ಹಿರಿಯ ನಾಗರಿಕರ ರಾಷ್ಟ್ರೀಯ ಸ್ವಾಸ್ಥ ಭೀಮ ಯೋಜನೆ ಸೇರಿದಂತೆ ಇವುಗಳನ್ನೆಲ್ಲ ಒಟ್ಟುಗೂಡಿಸಿ “ಆರೋಗ್ಯ ಕರ್ನಾಟಕ ಯೋಜನೆಯನ್ನು” ಸರಕಾರ ಜಾರಿಗೊಳಿಸಿದೆ. ಇದರ ಮೂಲ ಉದ್ದೇಶ ಜನರಿಗೆ ಸಮರ್ಪಕವಾಗಿ ಚಿಕಿತ್ಸೆ ಸಿಗುವುದರ ಜೊತೆಗೆ ಹಳೆಯ ಯೋಜನೆಗಳಿಂದ ಉಂಟಾಗುತ್ತಿದ್ದ ನಷ್ಟವನ್ನು ತಡೆಯಿವ ಯೋಜನೆಯಾಗಿದೆ.

ಬಿ.ಪಿ.ಎಲ್ ಕಾರ್ಡ್ ಇರುವವರಿಗೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಸಿಗಲಿದೆ ಮತ್ತು ಎ.ಪಿ.ಎಲ್ ಕಾರ್ಡ್ ಇರುವವರಿಗೆ ಚಿಕಿತ್ಸಾ ವೆಚ್ಚದ ಬರಿ 30% ಮಾತ್ರ ಉಳಿದ 70 % ಕೇಂದ್ರ ಸರ್ಕಾರ ಭರಿಸಲಿದೆ. ಆದರೆ ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ ಗಂಭೀರ ಆರೋಗ್ಯ ಸಮಸ್ಯೆ ಇದ್ದಾಗ, ಇಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದಾಗ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರ ಕೊರತೆ ಇದ್ದಾಗ, ಆಧುನಿಕ ವೈದಕೀಯ ಉಪಕರಣ ಇಲ್ಲದಿದ್ದಾಗ ಮಾತ್ರ ಸರ್ಕಾರಿ ವೈದರು ಖಾಸಗಿ ಆಸ್ಪತ್ರೆಗೆ ಕಳುಹಿಸಬಹುದು ಎಂಬ ಮಾಹಿತಿ ಆಗೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿದೆ.

ಈ “ಆರೋಗ್ಯ ಕರ್ನಾಟಕ ಯೋಜನೆಯ” ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದೆ ಮತ್ತು ಕೆಲವೇ ನಿಮಿಷದಲ್ಲಿ ಕಾರ್ಡ್‌ ಪಡೆಯಬಹುದು ಹೇಗೆಂದರೆ. ಎಲ್ಲಾ BPL ಹಾಗೂ APL ಕಾರ್ಡ್ ಹೊಂದಿರುವವರು ತಮ್ಮ ಕುಟುಂಬ ದವರೊಂಧಿಗೆ ರೇಷನ್ ಕಾರ್ಡ್, (ಪಂಡಿತರ ಚೀಟಿ) ಮತ್ತು ಆಧಾರ್‌ ಕಾರ್ಡ್‌ನ್ನು ತಪ್ಪದೇ ತೆಗೆದುಕೊಂಡುಹೋಗಿ. ಪಡಿತರ ಇಲ್ಲದಿದ್ದರೆ ಆಧಾರ್‌ ಕಾರ್ಡ್‌ ಕಡ್ಡಾಯ. ಅದನ್ನು ತೋರಿಸಿ ಅರ್ಜಿ ಪಡೆದು 10 ರೂ. ನೊಂದಿಗೆ ಭರ್ತಿ ಮಾಡಿಕೊಟ್ಟರೆ ದಾಖಲಾತಿ ಪರಿಶೀಲಿಸಿ ಬೆರಳಚ್ಚು ಪಡೆದು ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲೇ ಕಾರ್ಡ್‌ ವಿತರಿಸಲಾಗುವುದು. ಮೊದಲ ಬಾರಿ ಕಾರ್ಡ್‌ ಪಡೆಯಲು 10 ರೂ ಮಾತ್ರ ಒಂದುವೇಳೆ ಕಾರ್ಡ್‌ ಕಳೆದುಕೊಂಡು ಪುನಃ ಪಡೆಯಲು 20 ರೂ. ಪಾವತಿಸಬೇಕು.

ಹೊರ ರಾಜ್ಯಗಳಿಗೂ ವಿಸ್ತರಣೆ!!
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್‌, ಕಲಬುರಗಿ, ಬಳ್ಳಾರಿ, ರಾಯಚೂರು ಹೀಗೆ ರಾಜ್ಯದ ಗಡಿ ಭಾಗದಲ್ಲಿರುವ ಜಿಲ್ಲೆಗಳ ಜನರು ಚಿಕಿತ್ಸೆಗಾಗಿ ನೆರೆಯ ರಾಜ್ಯದ ಆಸ್ಪತ್ರೆಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕೆ ಮಹಾರಾಷ್ಟ್ರ, ಆಂಧ್ರಪ್ರದೇಶದ 27 ಖಾಸಗಿ ಆಸ್ಪತ್ರೆಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಗೋವಾ ರಾಜ್ಯದ ಯಾವುದೇ ಆಸ್ಪತ್ರೆ ಈ ಯೋಜನೆಯ ಸೌಲಭ್ಯ ಕೊಡಲು ಮುಂದೆ ಬಂದಿಲ್ಲ. ಮಹಾರಾಷ್ಟ್ರದ 20 ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿವೆ. ಕನ್ನಡಿಗರು ಕೆಲಸಕ್ಕಾಗಿ ವಲಸೆ ಹೋಗುವ ಮುಂಬಯಿಯಲ್ಲೂ ಒಂದು ಆಸ್ಪತ್ರೆ ನೋಂದಾಯಿಸಲಾಗಿದೆ. ಕೊಲ್ಲಾಪುರ, ಸೊಲ್ಲಾಪುರದ ತಲಾ ಆರು ಆಸ್ಪತ್ರೆಗಳು, ಸಾಂಗ್ಲಿಯ ನಾಲ್ಕು, ಕರ್ನೂಲ್‌, ಲಾತೂರ್‌ನ ತಲಾ ಒಂದು ಆಸ್ಪತ್ರೆ ‘ಆರೋಗ್ಯ ಕರ್ನಾಟಕ’ ಜಾಲದಲ್ಲಿ ಸೇರಿವೆ. ಆಂಧ್ರಪ್ರದೇಶದ ಹೈದರಾಬಾದ್‌ನ ಏಳು ಖಾಸಗಿ ಆಸ್ಪತ್ರೆಗಳನ್ನು ಯೋಜನೆಯಡಿ ಸೇರಿಸಿಕೊಳ್ಳಲಾಗಿದೆ.