ಇಂದು ಸಂಜೆ 5.30ಕ್ಕೆ ಜಿಯೋ ಫೋನ್ ಬುಕ್ಕಿಂಗ್ ಕೇವಲ 500ರೂಗೆ ಬುಕ್ ಮಾಡುವ ಮುನ್ನ ಇದನ್ನು ಓದಿ..!

0
2067

ಎಲ್ಲರ ಗಮನ ಸೆಳೆದಿರುವ ಜಿಯೋ ಫೋನ್ ಬುಕ್ಕಿಂಗ್ ಇಂದಿನಿಂದ ಆರಂಭವಾಗಲಿದೆ.ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ಜಿಯೋಫೋನ್ ಬುಕ್ ಮಾಡೋದು ಹೇಗೆ ಅನ್ನೋದು ಇಲ್ಲಿದೆ ನೋಡಿ. ನೀವು ಎರಡು ಮಾದರಿಯಲ್ಲಿ ಈ ಫೋನ್ ಬುಕ್ ಮಾಡಬಹುದಾಗಿದೆ ಒಂದು ಜಿಯೋ ಆಪ್ ಡೌನ್‌ ಲೋಡ್ ಮಾಡಿಕೊಳ್ಳುವ ಮೂಲಕ ಮತ್ತು ಹತ್ತಿರ ರೀಟೆಲ್ ಶಾಪ್ ನಲ್ಲಿಯೂ ಜಿಯೋ ಪೋನ್ ಬುಕ್ ಮಾಡಬಹುದಾಗಿದೆ.

ಜಿಯೋ ಫೋನ್ ಬೆಲೆ ೧೫೦೦ ಸಾವಿರ ಆದ್ರೆ ನೀವು ೫೦೦ಗೆ ಬುಕ್ ಮಾಡಬಹುದು. ಮತ್ತೆ ಇನ್ನು ೧೫೦೦ ಫೋನ್ ೫೦೦ ಗೆ ಹೇಗೆ ಸಿಗುತ್ತೆ ಅಂತ ಯೋಚನೆ ಮಾಡಬೇಡಿ. ನೀವು ಬುಕ್ ಮಾಡಿದ ಮೇಲೆ ನಿಮಗೆ ಡಿಲೇವೇರಿ ನೀಡುವ ಉಳಿದ ೧೦೦೦ ಹಣವನ್ನು ನೀವು ನೀಡಬೇಕು.

ಇಂದು ಸಂಜೆ ನಿಮ್ಮ ಹತ್ತಿರದ ರಿಟೇಲ್ ಅಂಗಡಿಗಳಲ್ಲಿ ಬುಕಿಂಗ್ ಮಾಡಬಹುದು. ಇಲ್ಲವೆ ಜಿಯೋ ವೆಬ್ಸೈಟ್ ತಾಣ ಮತ್ತು ಮೈಜಿಯೊ ಆಪ್ ಗಳ ಮೂಲಕ ರೂ. 500 ಪಾವತಿಸಿ ಮುಂಗಡ ಕಾದಿರಿಸಬಹುದು.

ಜಿಯೊ ಆಪ್ ನಲ್ಲಿ ಕಾದಿರಿಸುವಾಗ Prebook now ಆಯ್ಕೆ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್, ಪಿನ್ ಕೋಡ್, ವಾಸವಾಗಿರುವ ವಿಳಾಸ ಒದಗಿಸಬೇಕು. ಇದಾದ ಬಳಿಕೆ ನಿಮಗೆ ಬುಕಿಂಗ್ ಐಡಿ ಮತ್ತು ಸಂದೇಶ ಬರುತ್ತದೆ.

ಮುಂಗಡವಾಗಿ ಕಾದಿರಿಸುವಾಗ ರೂ. 500 ಗಳನ್ನು ಜಿಯೋಮನಿ ವಾಲೆಟ್, ಪೇಟಿಎಂ, ಯುಪಿಐ, ಕ್ರೆಇಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಲ್ಲವೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ಪಾವತಿಯಾದ ನಂತರ ನಿಮ್ಮ ನಂಬರ್ ಸಂದೇಶ ಬರುತ್ತದೆ. ಸೆಪ್ಟೆಂಬರ್‌ನಲ್ಲಿ ಜಿಯೋ ಮೊಬೈಲ್ ವಿತರಣೆ ಮಾಡುವಾಗ ಉಳಿದ ರೂ. 1,000 ಪಠಿಸಬೇಕಾಗುತ್ತದೆ.