Bitcoin ಖರೀದಿಸಿದವರು ಕೋಟ್ಯಾಧಿಪತಿಗಳಾಗಿದ್ದರೆ!! ಅದನ್ನು ಹೇಗೆ ಖರೀದಿಸುವುದು ಹೇಗೆ?? ಇಲ್ಲಿದೆ ಫುಲ್ ಡೀಟೇಲ್ಸ್..

0
1582

ಬಿಟ್ಕಾಯಿನ್ ಅಂದರೆ ಏನು..?

ಬಿಟ್ಕಾಯಿನ್.. ಬಿಟ್ಕಾಯಿನ್ ಬಗ್ಗೆ ನಿಮಗೆಷ್ಟು ಗೊತ್ತು..? ಬಿಟ್ಕಾಯಿನ್ ಅನ್ನು ಎಲ್ಲಿ ಹೇಗೆ ಬಳಸುವುದು..? ಬಿಟ್ಕಾಯಿನ್ ಬಗ್ಗೆ ಕೇಳಿರ್ತೀರಾ.. ಆದರೆ ಅದೇನು..? ಅದರ ಬಳಕೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಾನೇ ಮಾಡಿರಲ್ಲ. ಅದರ ಕೆಲ ಮಾಹಿತಿಗಳು ನಿಮಗಾಗಿ..

ಬಿಟ್ಕಾಯಿನ್… ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಎಂದು ಕರೆಯಲಾಗುತ್ತೆ. ಇದು ಸಂಪೂರ್ಣವಾಗಿ ಡಿಜಿಟಲ್ ಮೂಲಕ ಮಾಡುವ ವ್ಯವಹಾರ.

ಬಿಟ್ಕಾಯಿನ್ ಅನ್ನು ಜಪಾನ್ ಮೂಲದ ಸಂತೋಷಿ ಎಂಬಾತ 2008 ರಲ್ಲಿ ಕಂಡು ಹಿಡಿದ. ಜಗತ್ತಿನಲ್ಲಿ ನಾವು ಯಾವುದೇ ವ್ಯವಹಾರ ಮಾಡಲು ಬ್ಯಾಂಕ್ ಮೂಲಕವೇ ಮಾಡ್ಬೇಕು. ನಗದು ರಹಿತ ಡಿಜಿಟಲ್ ವ್ಯವಹಾರವಾದರೂ ಅದೂ ಕೂಡ ಬ್ಯಾಂಕ್ ಮೂಲಕವೇ ಆಗಿರುತ್ತೆ. ಆದರೆ ಬಿಟ್ಕಾಯಿನ್ ವ್ಯವಹಾರ ಹಾಗಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ವ್ಯವಹರಿಸಬಹುದು. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಅತೀ ಸುಲಭ ವ್ಯವಹಾರ. ಅಲ್ಲದೇ ಯಾವುದೇ ಕೇಂದ್ರದ ನಿಯಂತ್ರಣವಿರುವುದಿಲ್ಲ.

ಬಹುಶಃ ಸಂತೋಷಿಗೆ ಹಣದ ವಹಿವಾಟಿನಲ್ಲಿ ಯಾವುದೇ ಬ್ಯಾಂಕ್ ಆಗಲಿ ಮತ್ಯಾರು ನಿಯಂತ್ರಣ ಸಾಧಿಸುವುದು ಇಷ್ಟವಿರಲಿಲ್ಲ ಅಂತ ಕಾಣಿಸುತ್ತೆ. ಅದಕ್ಕೆ ಈ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಿದ್ದಾರೆ. 2009 ರಲ್ಲಿ ಬಿಟ್ಕಾಯಿನ್ ಅನ್ನು ಬಿಡುಗಡೆ ಮಾಡಿದರು.

ಬಿಟ್ಕಾಯಿನ್ ಹೇಗೆ ಕಾರ್ಯ ನಿರ್ವಹಿಸುತ್ತೆ..?

ಬಿಟ್ಕಾಯಿನ್ ಸಂಪೂರ್ಣವಾಗಿ ಡಿಜಿಟಲ್ ವ್ಯವಹಾರವಾಗಿದೆ. ಬಿಟ್ಕಾಯಿನ್’ಗೆ ಯಾವುದೇ ರೂಪವಿಲ್ಲ. ಅಂದರೆ ಪೇಪರ್ ಅಥವಾ ಕಾಯಿನ್ ರೂಪದಲ್ಲಿಲ್ಲ.

ಈ ಬಿಟ್ಕಾಯಿನ್ ಕೆಲಸ ಮಾಡೋದು ಓಪನ್ ಲೆಡ್ಜರ್ ಸಿಸ್ಟಂ ಮೂಲಕ. ಓಪನ್ ಲೆಡ್ಜರ್ ಅಂದರೆ ಉದಾಹರಣೆಗೆ ಮನೋಜ್ ಎಂಬಾತನ ಬಳಿ 10 ಬಿಟ್ಕಾಯಿನ್ ಇರುತ್ತೆ. ಅದರಲ್ಲಿ ಆತ ತನ್ನ ಸ್ನೇಹಿತ ರಿಯಾಜ್ ಗೆ 5 ಬಿಟ್ಕಾಯಿನ್ ಕಳಿಸ್ಬೇಕಿರುತ್ತೆ.
ರಿಯಾಜ್ ಗೆ ಮನೋಜ್ 5 ಬಿಟ್ಕಾಯಿನ್ ಕಳಿಸಿದ್ ಮೇಲೆ, ಮನೋಜ್ ಹತ್ರ 5 ಬಿಟ್ಕಾಯಿನ್ ಉಳಿಯುತ್ತೆ. ಈ ಲೆಕ್ಕ, ಓಪನ್ ಲೆಡ್ಜರ್ ನಲ್ಲಿ ಸೇವ್ ಆಗಿರುತ್ತೆ.

ಓಪನ್ ಲೆಡ್ಜರ್ ಅಂದರೆ ಏನು..?

ಓಪನ್ ಲೆಡ್ಜರ್ ಅಕೌಂಟ್’ಗಳ ವಹಿವಾಟಿನ ಲೆಕ್ಕವಿಡುತ್ತೆ. ಬ್ಲಾಕ್ ಚೈನ್ ಮೂಲಕ ಈ ಲೆಡ್ಜರ್ ವರ್ಕ ಆಗುತ್ತೆ
ಲೆಡ್ಜರ್ ನಲ್ಲಿ ಬಿಟ್ಕಾಯಿನ್ ಟ್ರಾನ್ಸ್ಯಾಕ್ಷನ್ ಅಪ್ಡೇಟ್ ಆಗ್ತಿರತ್ತೆ.
ಸಾವಿರಾರು ಜನ ಬಿಟ್ಕಾಕಾಯಿನ್ ವರ್ಗಾಯಿಸುತಿರುತ್ತಾರೆ. ಪ್ರತಿಯೊಂದು ಬಿಟ್ಕಾಯಿನ್ ಟ್ರ್ಯಾನ್ಸ್ಯಾಕ್ಷನ್ ಅಪ್ಡೇಟ್ ಆಗುತ್ತೆ.

ಬಿಟ್ಕಾಯಿನ್ ಗಳಿಸುವುದು ಹೇಗೆ..?

ಪ್ರತಿಯೊಂದು ಟ್ರ್ಯಾನ್ಸ್ಯಾಕ್ಷನ್ ಮಾಡುವ ಮೂಲಕ ಬಿಟ್ಕಾಯಿನ್ ಗಳಿಸಬಹುದು.
ಪ್ರತಿ ಸಲ ಟ್ರ್ಯಾನ್ಸ್ಯಾಕ್ಷನ್ ಮಾಡಿದಾಗ ಸಿಸ್ಟಂ ಒಂದು ಪಝಲ್ ಕೊಡುತ್ತೆ. ಈ ಪ್ರಾಬ್ಲಮ್ಸ್ ಅನ್ನು ಪರಿಹರಿಸಿದಾಗ ಮಾತ್ರ ನಮ್ಮ ಬಿಟ್ಕಾಯಿನ್ ಟ್ರ್ಯಾನ್ಸ್ಯಾಕ್ಷನ್ ಕಂಪ್ಲೀಟ್ ಆಗೋದು. ಈ ಪಝಲ್ ಕೊಡುವುದರ ಉದ್ದೇಶ ಬಿಟ್ಕಾಯಿನ್ ಟ್ರ್ಯಾನ್ಸ್ಯಾಕ್ಷನ್ ದೃಢೀಕರಣಕ್ಕೆ. ಬಿಟ್ಕಾಯಿನ್ ವ್ಯವಹಾರ ಫ್ರಾಡ್ ಆಗಿರಬಾರದು ಎಂದು. ಹೀಗೆ ಪ್ರಾಬ್ಲಂ ಸಾಲ್ವ್ ಮಾಡಿದ ಮೇಲೆ ಹೊಸ ಬಿಟ್ಕಾಯಿನ್ ಸಿಸ್ಟಂನಲ್ಲಿ ಜನರೇಟ್ ಆಗುತ್ತೆ ಅದು ನಮ್ಮ ಅಕೌಂಟ್’ಗೆ ಬಂದು ಬೀಳುತ್ತೆ. ಪ್ರತಿಯೊಂದು ಬಿಟ್ಕಾಯಿನ್ ಮೇಲೂ ಓಪನ್ ಲೆಡ್ಜರ್ ನಿಗಾ ಇಟ್ಟಿರುತ್ತೆ.

ಬಿಟ್ಕಾಯಿನ್ ಅನ್ನು ಎಲ್ಲಿ ಬಳಸಬಹುದು..?

ಡೆಬಿಟ್ ಕಾರ್ಡ್, ಪೇಟಿಯಂ ಬಳಸಿದಂತೆಯೇ ಬಿಟ್ಕಾಯಿನ್ ಅನ್ನು ಕೂಡ ಬಳಸಬಹುದು.. ಆದರೆ ಇದು ಬಿಟ್ಕಾಯಿನ್ ಅಕೌಂಟ್ ಹೊಂದಿರುವ ವ್ಯಾಪರಸ್ಥರ ಬಳಿ ಮಾತ್ರ ಸಾಧ್ಯ.

ಇನ್ನು ಭಾರತದಲ್ಲಿ ಇಂದಿನ ಒಂದು ಬಿಟ್ಕಾಯಿನ್ ಬೆಲೆ. 11 ಲಕ್ಷ ರೂಪಾಯಿ.