ಲೋಕಸಭಾ ಚುನಾವಣೆಗೆ ವಿವಿ ಪ್ಯಾಟ್​ ಎನ್ನುವ ಹೊಸ ತಂತ್ರಜ್ಞಾನ ಬಳಕೆ; ಮತದಾರರು ಇದನ್ನು ಬಳಸುವುದು ಹೇಗೆ ಗೊತ್ತಾ?

0
476

ಇವಿಎಂ ಬಳಕೆಗಳಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಹಲವು ಅನುಮಾನಗಳ ಸುದ್ದಿಗಳು ಕೇಳಿಬರುತ್ತಿದ್ದವು, ಇದನ್ನು ಚುನಾವಣಾ ಆಯೋಗ ಸುಳ್ಳು ಎಂದು ಹೇಳಿತ್ತು. ಆದರು ಕೂಡ ಹಲವರಿಗೆ ಇದರ ಬಗ್ಗೆ ಸಂಶಯ ಇದೆ ಇತ್ತು. ಇದೆಲ್ಲ ಸುತ್ತೋಲೆಯನ್ನು ಬಗೆ ಹರಿಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು. ಈ ಬಾರಿ ಚುನಾವಣೆಗೆ ವಿವಿ ಪ್ಯಾಟ್​ ಎಂಬ ಹೊಸ ತಂತ್ರವನ್ನು ಬಳಕೆ ಮಾಡಲಾಗುತ್ತಿದೆ. ಇದರ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ಸುನೀಲ್​ ಅರೋರ ವಿವಿ ಪ್ಯಾಟ್​ ಬಳಕೆ ಹೆಚ್ಚು ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

Also read: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ; whatsapp, facebook, ಟ್ವೀಟ್, ಗಳಲ್ಲಿ ಎಲೆಕ್ಷನ್​​ ಪ್ರಚಾರ ಮಾಡಿದ್ರೆ ಜೈಲು ಪಕ್ಕಾ..

ಇವಿಎಂ ಬಗ್ಗೆ ಆರೋಪಗಳು;

ಹೌದು 2018 ರಲ್ಲಿ ನಡೆದ ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ಆಯೋಜಿಸಿದ ಇವಿಎಂ ಹ್ಯಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೇರಿಕ ಮೂಲದ ಸೈಬರ್ ತಜ್ಞ ಸಯಿದ್ ಶುಜಾ ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾದ್ಯ ಎಂದು ತಿಳಿಸಿದ. ಅವರು ಈಗಾಗಲೇ ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ ‘ಇವಿಎಂ ದುರ್ಬಳಕೆ’ ನಡೆದಿದೆ. ಹೇಗೆಂದರೆ ಬ್ಲೂಟೂತ್ ನಿಂದ ಇವಿಎಂ ಹ್ಯಾಕ್ ಮಾಡಬೇಕಾದರೆ ಗ್ರಾಫೈಟ್ ಹೊಂದಿರುವ ಟ್ರಾನ್ಸ್ಮಿಟರ್ ಇದ್ದರೆ ಸಾದ್ಯವಾಗುತ್ತೆ ಅದೇರೀತಿ 2014ರ ಲೋಕಸಭಾ ಚುನಾವಣೆಯಲ್ಲಿ ಟ್ರಾನ್ಸ್ಮಿಟರ್‌ಗಳನ್ನು ಬಳಸಲಾಗಿದೆ. ಮತ್ತು 7hz ಕಡಿಮೆ ಕಂಪನಾಂಕದ ಮಾಡ್ಯುಲೇಟರ್ ಬಳಸಿ ಹ್ಯಾಕ್ ಮಾಡಲಾಗಿದೆ ಎಂದು ಸೈಬರ್ ತಜ್ಞ ಸಯೀದ್ ಶುಜಾ ಹೇಳಿದ್ದರು. ಇದೆಲ್ಲ ಸುಳ್ಳು ಎಂದು ಚುನಾವಣಾ ಆಯೋಗ ಹೇಳಿತ್ತು. ಈ ಎಲ್ಲ ಆರೋಪವನ್ನು ಗಮನದಲ್ಲಿಟ್ಟುಕೊಂಡು ವಿವಿ ಪ್ಯಾಟ್​ ಬಳಕೆ ಮಾಡಲಾಗುತ್ತಿದೆ.

ಏನಿದು ವಿವಿ ಪ್ಯಾಟ್‌?:

Also read: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಪತ್ನಿ ಮಂಡ್ಯ ಕ್ಷೆತ್ರದಿಂದ ಲೋಕಸಭಾ ಅಕಾಡಕ್ಕೆ??

2019 ರ ಲೋಕಸಭಾ ಚುನಾವಣೆಗೆ ಹೊಸದಾಗಿ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರೇಲ್‌ (ವಿವಿಪ್ಯಾಟ್‌) ಇವಿಎಂಗಳಿಗೆ ಅಳವಡಿಸುವುದರಿಂದ ಮತದಾರರಿಗೆ ತಮ್ಮ ಮತ ಯಾರಿಗೆ ಹೋಗಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ಈ ವಿವಿಪ್ಯಾಟ್‌ಗಳು ಸ್ವತಂತ್ರ್ಯ ಪರಿಶೀಲನಾ ಯಂತ್ರವಾಗಿದ್ದು, ಇವಿಎಂನಲ್ಲಿ ಒತ್ತಿದ ಮತ ಯಾವ ಪಕ್ಷದ ಯಾವ ಅಭ್ಯರ್ಥಿಗೆ ಹೋಗಿದೆ ಎಂಬುದನ್ನು ತೋರಿಸುತ್ತದೆ. ಜತೆಗೆ ಮತಗಳನ್ನು ನಾಶಪಡಿಸುವ ಅಥವಾ ಮತ್ತೊಬ್ಬ ಅಭ್ಯರ್ಥಿಗೆ ಹೋಗುವಂತೆ ಮಾಡುವ ಕುತಂತ್ರಗಳನ್ನೂ ತಡೆಯುತ್ತದೆ. ಒಟ್ಟಾರೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಕಟ್ಟುನಿಟ್ಟಿನಿಂದ ನಡೆಸುವ ಹೊಣೆ ಹೊತ್ತಿದೆ. ಈ ಸಮಯದಲ್ಲಿ ಇವಿಎಂಗಳ ಬಗ್ಗೆ ಬಂದಿರುವ ಆರೋಪವನ್ನು ಅದು ತೊಳೆದುಕೊಳ್ಳುವ ಪ್ರಯತ್ನ ಮಾಡಿದೆ. ಹೀಗಾಗಿಯೇ, ಮುಖ್ಯ ಚುನಾವಣಾ ಆಯುಕ್ತ ಸುನೀಲ್​ ಅರೋರ, ವಿವಿಪ್ಯಾಟ್ ಬಳಕೆ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ.

ವಿವಿಪ್ಯಾಟ್‌ ಹೇಗೆ ಕೆಲಸ ಮಾಡುತ್ತೆ?

ಲೋಕಸಭಾ ಚುನಾವಣೆಗೆ ಸಿದ್ದತೆಗೊಳಿಸಿರುವ, ವಿವಿ ಪ್ಯಾಟ್‌ ಸಾಮಾನ್ಯ ಪ್ರಿಂಟರ್‌ಗಳಂತೆ ಕಾರ್ಯನಿರ್ವಹಿಸುತ್ತದೆ. ಇವಿಎಂಗಳ ಬ್ಯಾಲಟ್‌ ಯೂನಿಟ್‌ಗಳಿಗೆ ವಿವಿ ಪ್ಯಾಟನ್ನು ಅಳವಡಿಸಿರುತ್ತಾರೆ. ಮತದಾರ ಮತಯಂತ್ರದಲ್ಲಿ ಮತವನ್ನು ಒತ್ತಿದಾಗ ವಿವಿಪ್ಯಾಟ್‌ನಿಂದ ಒಂದು ರಶೀದಿ ಪ್ರಿಂಟ್‌ ಆಗಿ ಹೊರಬರುತ್ತದೆ. ಏಳು ಸೆಕಂಡ್‌ಗಳ ಕಾಲ ಆ ಸ್ಲಿಪ್‌ ಹಾಗೆಯೇ ಇರುತ್ತದೆ. ಆ ಏಳು ಸೆಕಂಡ್‌ಗಳ ಒಳಗೆ ಮತದಾರ ತಾನು ಹಾಕಿದ ಮತ ತನ್ನಿಷ್ಟದ ಅಭ್ಯರ್ಥಿಗೇ ಹೋಗಿದೆಯಾ ಇಲ್ಲವಾ ಎಂಬುದನ್ನು ನೋಡಿಕೊಳ್ಳಬಹುದು. ಆದರೆ ಏಳು ಸೆಕಂಡ್‌ಗಳ ನಂತರ ಅದು ಮತ್ತೆ ಬಾಕ್ಸ್‌ ಒಳಗೆ ಹೋಗುತ್ತದೆ. ಸ್ಲಿಪ್‌ ಮತದಾರನ ಕೈಗಾಗಲೀ ಅಥವಾ ಇನ್ನೊಬ್ಬರ ಕೈಗಾಗಲೀ ಸಿಗುವುದಿಲ್ಲ. ಆದ್ದರಿಂದ ಮತದಾರನ ಮತ ರಹಸ್ಯವಾಗಿಯೇ ಉಳಿಯುತ್ತದೆ. ಇದರಲ್ಲಿ ಯಾವುದೇ ಅಕ್ರಮ ನಡೆಯಲು ಸಾದ್ಯವಿರುದಿಲ್ಲ.

Also read: ಪ್ರೀತಿ ಎಂದರೆ ಇದೆ ಅನಿಸುತ್ತೆ; ಹುತಾತ್ಮ ಮೇಜರ್​​ ಮಡದಿ ಗಂಡನ ಕನಸ್ಸನ್ನು ನನಸಾಗಿಸಲು ಪತಿ ಧರಿಸುತ್ತಿದ್ದ ಯೂನಿಫಾರಂನ್ನೇ ಧರಿಸುವ ಮೂಲಕ ಸೇನೆಗೆ ಸೇರಿದರು..

ಕಾಂಗ್ರಸ್ ಆರೋಪಕ್ಕೆ ವಿವಿಪ್ಯಾಟ್‌ ಉತ್ತರ?

ಇವಿಎಂ ಬಗ್ಗೆ ಆರೊಪ ಮಾಡುತ್ತಿದ್ದವರಲ್ಲಿ ಕಾಂಗ್ರೆಸ್​ ಪಕ್ಷ ಈ ಹಿಂದಿನಿಂದಲೂ ಚುನಾವಣೆ ಸೋತ ಕಡೆಗಳಲ್ಲೆಲ್ಲಾ ಇವಿಎಂ ಟ್ಯಾಂಪರಿಂಗ್​ ಮಾಡಲಾಗುತ್ತಿದೆ ಎಂಬ ಆರೋಪ ಮಾಡಿಕೊಂಡು ಬಂದಿದೆ. ಈಗ ಕಾಂಗ್ರೆಸ್‌ ವಿವಿಪ್ಯಾಟ್‌ ಅಳವಡಿಕೆಗೆ ಯಾವ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.