ತಾಮ್ರದ ಪಾತ್ರೆ ಫಳಫಳ ಹೊಳೆಯಲು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸುವುದು ಹೇಗೆ?

0
1503

ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿದರೆ ಆರೋಗ್ಯದ ಜೊತೆಗೆ ಸುಖ, ಸಂಪತ್ತು ಲಭಿಸಲಿದೆ ಮತ್ತು ತಾಮ್ರದ ಪಾತ್ರೆಯಲ್ಲಿಟ್ಟ ನೀರು ಅಮೃತಕ್ಕೆ ಸಮಾನ ಎನ್ನುವುದನ್ನು ಶಾಸ್ತ್ರದಲ್ಲಿಯೇ ಹೇಳಲಾಗಿದೆ. ತಾಮ್ರದ ಪಾತ್ರೆಗಳಲ್ಲಿ ಊಟ ಮಾಡುವುದರಿಂದ, ನೀರು ಕುಡಿಯುವುದರಿಂದ ಅಷ್ಟೇ ಅಲ್ಲ, ಅದರಲ್ಲಿ ಅಡುಗೆ ಮಾಡುವುದರಿಂದಲೂ ನೀವು ಬಹಳಷ್ಟು ಆರೋಗ್ಯಕರ ಅಂಶಗಳನ್ನು ಪಡೆಯುತ್ತೀರಿ. ಆರೋಗ್ಯಕರ ಅಂಶಗಳಿಂದ ಕೂಡಿದ ಹೊಳೆಯುವ ತಾಮ್ರದ ಪಾತ್ರೆಗಳನ್ನು ನೋಡಿದಾಗ ಅದನ್ನು ಖರೀದಿಸಬೇಕು ಎಂದೆನಿಸುತ್ತದೆ ಅಲ್ಲವೇ? ಇದನ್ನು ಖರೀದಿಸಿದ ಮೇಲೆ ಅದೇ ರೀತಿ ಯಾವಾಗಲೂ ಹೊಳೆಯುವಂತೆ ನೋಡಿಕೊಳ್ಳುವುದು ಬಹು ಮುಖ್ಯ ಕೆಲಸ.

Also read: ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ನಿಮಗೆ ಆಗುವ ಲಾಭಗಳು ತಿಳಿದ್ರೆ, ನೀವು ಯಾವಾಗಲು ಇದೇ ಲೋಟದಲ್ಲಿ ನೀರು ಸೇವನೆ ಮಾಡುತ್ತೀರಾ..!

ಹಾಗಾದರೆ ಬನ್ನಿ ತಾಮ್ರದ ಪಾತ್ರೆ ಫಳಫಳ ಹೊಳೆಯಲು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸುವುದು ಹೇಗೆ ಅಂತ ತಿಳಿಯೋಣ.

  • ಸ್ವಲ್ಪ ಕಲ್ಲು ಉಪ್ಪು ಮತ್ತು ಹುಣಸೆಹಣ್ಣು ತೆಗೆದುಕೊಂಡು ತಾಮ್ರದ ಪಾತ್ರೆಯ ಕಲೆಯಾಗಿರುವ ಭಾಗಕ್ಕೆ ಉಜ್ಜಬೇಕು. ನಂತರ ಬಿಸಿ ನೀರಿನಿಂದ ತೊಳೆದರೆ ಪಾತ್ರೆಯು ಹೊಸದರಂತೆ ಕಾಣಿಸುತ್ತದೆ.
  • ಸ್ವಲ್ಪ ಉಪ್ಪು ಮತ್ತು ನಿಂಬೆಹಣ್ಣು ತಗೊಂಡು ಪಾತ್ರೆಯ ಮೇಲೆ ಮೆದುವಾಗಿ ಉಜ್ಜಿ. ಜಾಸ್ತಿ ಕಪ್ಪಗಾಗಿದ್ದರೆ, ಅಂದರೆ ತಳಭಾಗದಲ್ಲಿ ಅಥವಾ ಬದಿಗಳಲ್ಲಿ ಗಟ್ಟಿ ಕಲೆಗಳಿದ್ದರೆ, ಇದೆರೆಡರ ಪೇಸ್ಟ್ ಮಾಡಿಕೊಂಡು ಆ ಜಾಗದ ಮೇಲೆ ಹಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ನಿಧಾನವಾಗಿ ತೊಳೆಯಲು ಶುರು ಮಾಡಿ. ನಿಮ್ಮ ಪಾತ್ರೆ ಮತ್ತೆ ಮೊದಲಿನಂತೆ ಹೊಳೆಯುತ್ತದೆ ನೋಡಿ.

  • ಸ್ವಲ್ಪ ವಿನೆಗರ್ ತಗೊಂಡು ಉಪ್ಪಿನ ಜೊತೆ ಸೇರಿಸಿ ಕಪ್ಪಗಿರುವ ತಾಮ್ರದ ಪಾತ್ರೆಗಳ ಮೇಲೆ ಹಚ್ಚಿ ಉಜ್ಜಿ.
  • ಮೈದಾ ಹಿಟ್ಟು, ಉಪ್ಪು, ಯಾವುದಾದರೂ ಡಿಟರ್ಜೆಂಟ್ ಈ ಮೂರನ್ನೂ ಸಮಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ವಿನೆಗರ್, ನಿಂಬೆರಸ ಮತ್ತು ಸ್ವಲ್ಪ ನೀರು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ಇದರಿಂದ ಪಾತ್ರೆಯನ್ನು ಸ್ಕ್ರಬ್ ಮಾಡಿ ನಂತರ ನೀರಿನಿಂದ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಿದರೆ ತಾಮ್ರವು ಮೊದಲಿನಂತೆ ಕಾಣಿಸುತ್ತದೆ.
  • ಬೇಕಿಂಗ್ ಸೋಡಾ ಉಪಯೋಗಿಸಿ ತಾಮ್ರದ ಪಾತ್ರೆಗಳನ್ನು ಫಳಫಳ ಅಂತ ಹೊಳೆಯಿಸಬಹುದು. ನೀವು ಬೇಕಿಂಗ್ ಸೋಡವನ್ನು ನಿಂಬೆ ರಸದೊಂದಿಗೆ ಮಿಕ್ಸ್ ಕೂಡ ಮಾಡಬಹುದು, ಅಥವಾ ಹಾಗೆಯೇ ಉಪಯೋಗಿಸಲೂಬಹುದು.

 • ಒಂದು ಟೇಬಲ್ ಸ್ಪೂನ್ ಉಪ್ಪು, ಒಂದು ಕಪ್ ಬಿಳಿ ವಿನಿಗರ್ ಗೆ ಸ್ವಲ್ಪ ಮೈದಾ ಹಿಟ್ಟನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ಇದನ್ನು ತಾಮ್ರದ ಪಾತ್ರೆಯ ಕಲೆಯಾಗಿರುವ ಭಾಗಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ಬಿಸಿ ನೀರಿನಿಂದ ತೊಳೆದರೆ ಪಾತ್ರೆಯು ಹೊಸದರಂತೆ ಕಾಣಿಸುತ್ತದೆ.

Also read: ಪವಾಡದ ರೀತಿಯಲ್ಲಿ ಬೆಂಕಿ ಇಲ್ಲದೆಯೇ ಅಕ್ಕಿ ಬೇಯುತ್ತದೆ ಇಲ್ಲಿ.! ಪವಾಡ ಪ್ರಸಿದ್ದ ಶಿವಸ್ಥಾನವಾದ ಮಣಿಕರಣ್ ದೇವಾಲಯದ ವೈಶಿಷ್ಟ್ಯತೆ..!!