ಪೋಲೀಸರೊಂದಿಗೆ ವ್ಯವಹರಿಸುವುದು ಹೇಗೆ?? ಭಯ ಬೇಡ ಈ ರೀತಿಯಾಗಿ ಮಾಡಿ

0
1624

ಸಾಮಾನ್ಯವಾಗಿ ಪೋಲಿಸ್ ಎಂದ ಕ್ಷಣ ನಮಗೆ ಸ್ವಲ್ಪ ಅಂಜಿಕೆ ಯಾಗುವುಫ಼ು ಸಾಮಾನ್ಯ.. ಇದಕ್ಕೆ ಕಾರಣ ಹುಡುಕುವುದು ಬೇಡ ಏಕೆಂದರೆ.. ಮೊದಲಿನಿಂದ ಬಂದ ಅಭ್ಯಾಸವೋ ಅಥವಾ ಇನ್ನೊಬ್ಬರು ಹೇಳಿ ತುಂಬಿದ ಭಯವೊ ನಮಗದು ತಿಳಿದಿಲ್ಲ..

ಮುಂದೆ ಏನು ಮಾಡಬೇಕೆಂಬುದು ಮುಖ್ಯ.. ಪೋಲೀಸರು ರಾಕ್ಷಸರಲ್ಲ.. ಈಗ ಸಾಮಾನ್ಯವಾಗಿ ದಾರಿಯಲ್ಲಿ ಯಾರೊ ಅಪರಿಚಿತರು ಸಿಗುವ ಹಾಗೆಯೇ ಪೋಲೀಸರು ಅಷ್ಟೇ.. ಆದರೆ ಅವರು ಸರ್ಕಾರಿ ಕೆಲಸದಲ್ಲಿರುವ ವ್ಯಕ್ತಿಗಳು.. ಅವರಿಗೆ ನಾವು ಏಕೆ ಭಯ ಪಡಬೇಕು.. ಕಾನೂನನ್ನು ರಕ್ಷಣೆ ಮಾಡುವುದಕ್ಕೊಸ್ಕರ ಕಷ್ಟ ಪಟ್ಟು ಪರೀಕ್ಷೆ ಬರೆದು ಕೆಲಸಕ್ಕೆ ಸೇರಿರುತ್ತಾರೆ.. ಅವರ ಸಂಸಾರದ ಜವಬ್ದಾರಿಯನ್ನು ನಿಭಾಯಿಸಲು.. ಜೊತೆಗೆ ಜನಸಾಮಾನ್ಯರ ರಕ್ಷಣೆ ಮಾಡಲು ಕಾರ್ಯ ನಿರ್ವಹಿಸುವ ಸರ್ಕಾರಿ ಕೆಲಸಗಾರರು ಅವರು ಅವರ ಮೇಲೆ ಗೌರವ ಇರಬೇಕೆ ಹೊರತು ಭಯವಲ್ಲ.

ಇದೇ ನಿಟ್ಟಿನಲ್ಲಿ ಅಂದರೆ ಪೋಲೀಸರ ಮೇಲೆ ಜನಸಾಮಾನ್ಯರಿಗಿರುವ ಭಯ ಹೋಗಲಾಡಿಸಲು ಈಗಾಗಲೇ ಮೈಸೂರು ಸೇರಿದಂತೆ ಹಲವಾರು ಜಿಲ್ಲೆಯ ಪೋಲೀಸರು ಹಲವಾರು ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.. ಅವರೆಷ್ಟೇ ಪ್ರಯತ್ನ ಪಟ್ಟರೂ ನಮ್ಮ ಕಡೆಯಿಂದಲೂ ಸಹಕಾರ ಸಿಗಬೇಕಲ್ಲವೇ ಅದರಿಂದ ಮಾತ್ರವೇ ಪ್ರಯತ್ನ ಯಶಸ್ವಿಯಾಗಲು ಸಾಧ್ಯ.

ನಾವು ಹೇಳಬೇಕೆಂದಿರುವುದಿಷ್ಟೇ.. ಅವರನ್ನು ನೋಡಿ ಅಂಜುವುದನ್ನು ಇಲ್ಲಿಗೆ ಬಿಡೋಣ.. ನಾವುಗಳು ತಪ್ಪೇನು ಮಾಡಿಲ್ಲವಲ್ಲ.. ಕಾನೂನಿನಲ್ಲಿ ಪೋಲೀಸರನ್ನು ನೋಡಿ ಭಯ ಪಡಬೇಕೆಂದು ಬರೆದಿಲ್ಲವಲ್ಲ.. ಅದಕ್ಕಾಗಿಯೇ ಇನ್ನು ಮುಂದೆ ಏನಾದರೂ ಕಾನೂನಾತ್ಮಕ ವಿಷಯಗಳ ಬಗ್ಗೆ ಮಾಹಿತಿ ಬೇಕಿದ್ದರೆ ಸ್ನೇಹ ಪೂರ್ವಕವಾಗಿ ಪೋಲೀಸರನ್ನೇ ಕೇಳಿ.

ನಮಗೇನಾದರೂ ಯಾರಿಂದನಾದರೂ ತೊಂದರೆ ಬಂದಲ್ಲಿ ಪೋಲೀಸರ ಬಳಿ ಹೋಗಿ.. ಸರ್ಕಾರದಲ್ಲಿ ಅವರ ಕೆಲಸವೆ ಕಾನೂನಿನ ರಕ್ಷಣೆ.. ಎಲ್ಲರೂ ಕಾನೂನನ್ನು ಪಾಲಿಸಬೇಕೆಂಬುದು… ಅವರು ನಮ್ಮಂತೆ ಮನುಷ್ಯರು.

ಇದೊಂದು ಸಾಮಾಜಿಕ ಕಳಕಳಿಯಿಂದ ಜನರಿಗೆ ಅರಿವು ಮೂಡಿಸಲು ಬರೆದ ಲೇಖನ ಸಾದ್ಯವಾದಷ್ಟೂ ಶೇರ್ ಮಾಡಿ ಅರಿವು ಮೂಡಿಸಿ..