ನಿಮ್ಮ ಖಾಸಗಿ ಮಾಹಿತಿ ಸುರಕ್ಷಿತವಾಗಿರಬೇಕು ಅಂದ್ರೆ ತಕ್ಷಣವೇ ನಿಮ್ಮ ಆಧಾರ್ -ಅನ್ನು ಬ್ಯಾಂಕ್ ಹಾಗು ಮೊಬೈಲ್ ಕಂಪನಿಗಳಿಂದ ಡಿ-ಲಿಂಕ್ ಮಾಡಿಸಿ, ಹೇಗೆ ಅಂತ ಹೇಳ್ತೀವಿ ಓದಿ

0
445

ಆಧಾರ್ – ಅನ್ನು ಡಿ-ಲಿಂಕ್ ಮಾಡಿಸೋ ಬಗೆ | Kannada News

ಸುಪ್ರೀಂ ಕೋರ್ಟ್ ಕೇಂದ್ರದ ಆಧಾರ್ ಯೋಜನೆಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿದೆ. ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ಕನೆಕ್ಷನ್ ಮತ್ತು ಶಾಲಾ ಪ್ರವೇಶಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಸ್ಪಷ್ಟ ಪಡಿಸಿದೆ. ಅಲ್ಲದೆ, ಐಟಿ ರಿಟರ್ನ್ಸ್, ಸರ್ಕಾರಿ ಯೋಜನೆಗಳಿಗೆ ಮತ್ತು ಪ್ಯಾನ್ ಕಾರ್ಡ್’’ಗಳಿಗೆ ಆಧಾರ್ ಕಡ್ಡಾಯ ಎಂದು ನ್ಯಾಯಾಲಯ ತಿಳಿಸಿದೆ.

Also read: ಸುಧಾರಣೆಯಾಗದ ರಾಜಕಾಲುವೆಗಳು; ಸಾರ್ವಜನಿಕರಲ್ಲಿ ನಿಲ್ಲದ ಆತಂಕ..!

ಸುಪ್ರೀಂ ಕೋರ್ಟ್’’ನ ಮಹತ್ವದ ತೀರ್ಪಿ ಆಲಿಸಿ ನೀವೆಲ್ಲಾ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಸಂಪರ್ಕಗಳಿಂದ ಡಿಲಿಂಕ್ ಮಾಡುವುದು ಹೇಗೆ ಅಂತ ಯೋಚಿಸುತ್ತಿದ್ದೀರಾ..? ನಿಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಸಂಪರ್ಕಗಳಿಂದ ಆಧಾರ್ ಅನ್ನು ಡಿಲಿಂಕ್ (Delink) ಮಾಡಲು ಬಯಸಿದರೆ.. ಇಲ್ಲಿದೆ ನೋಡಿ ಅತಿ ಸುಲಭ ಮಾರ್ಗ

ಬ್ಯಾಂಕ್ ಖಾತೆಯಿಂದ ಆಧಾರ್ ಡಿಲಿಂಕ್ ಮಾಡೋದು ಹೇಗೆ..?

 • ನಿಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
 • ಗ್ರಾಹಕರ ಸೇವಾ ಕೌಂಟರ್’ನಿಂದ, ಆಧಾರ್ ಅನ್ನು ಡಿಲಿಂಕ್ ಮಾಡಲು ಅರ್ಜಿಯನ್ನು ಕೇಳಿ ಪಡೆಯಿರಿ
 • ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಿ ಅಷ್ಟೇ
 • 48 ಗಂಟೆಗಳೊಳಗೆ ನಿಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡಲಾಗುತ್ತದೆ.
 • ನಿಮ್ಮ ಬ್ಯಾಂಕ್ ಖಾತೆಯನ್ನು ಡಿಲಿಂಕ್ ಮಾಡಲಾಗಿದೆಯೆ ಎಂದು ಪರಿಶೀಲಿಸಲು, ನೀವು ಬ್ಯಾಂಕ್’ಗೆ ಕರೆ ಮಾಡಬಹುದು.

  ಮೊಬೈಲ್ ಫೋನ್ ನಂಬರ್ ಡಿಲಿಂಕ್ ಮಾಡುವುದು ಹೇಗೆ..?

  Also read: ಬಿಬಿಎಂಪಿ ಈಗಾಗ್ಲೇ 90% ಗುಂಡಿಗಳನ್ನ ಮುಚ್ಚಿದೆಯಂತೆ..! ಆದ್ರೆ ಎತ್ತ ನೋಡಿದರೂ ಗುಂಡಿಗಳು ಹಾಗೆ ಬಾಯ್ತೆರೆದಿವೆ…

 • ಮೊಬೈಲ್ ಕಂಪೆನಿ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ.
 • ಆಧಾರ್ ಸಂಪರ್ಕ ಡಿಲಿಂಕ್ ಮಾಡುವಂತೆ ಮನವಿ ಸಲ್ಲಿಸಿ. ಅದಕ್ಕೆ ಸಂಬಂಧಿಸಿದ ಇ-ಮೇಲ್ ರವಾನಿಸುವಂತೆ ಕೇಳಿ
 • ಮೊಬೈಲ್ ಕಂಪೆನಿಯಿಂದ ಆಧಾರ್ ಕಾರ್ಡ್‌ನ ಫೋಟೊ ಕಳಿಸುವಂತೆ ಕೋರಿಕೆಯ ಮೇಲ್ ನಿಮಗೆ ತಲುಪುತ್ತದೆ. ಅವರು ಸೂಚಿಸಿದ ಕ್ರಮಗಳನ್ನು ಅನುಸರಿಸಿ.
 • 48 ಗಂಟೆಗಳಲ್ಲಿ ಆಧಾರ್ ಜೋಡಣೆಯನ್ನು ರದ್ದುಗೊಳಿಸಿದ್ದನ್ನು ದೃಢಪಡಿಸುವ ಮೇಲ್ ನಿಮಗೆ ಸಿಗುತ್ತದೆ.
 • ನಿಮ್ಮ ಮೊಬೈಲ್ ಫೋನ್ ನಂಬರ್ ಅನ್ನು ಡಿಲಿಂಕ್ ಮಾಡಲಾಗಿದೆಯೆ ಎಂದು ಪರಿಶೀಲಿಸಲು, ನೀವು ಮೊಬೈಲ್ ಕಂಪೆನಿ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಬಹುದು.

ಖಾಸಗಿ ವಾಲೆಟ್ ಸೇವೆಗಳಿಂದ ಆಧಾರ್ ಅನ್ನು ಡಿಲಿಂಕ್ ಮಾಡೋದು ಹೇಗೆ..?

 • Paytm, Ola, Uber, Google Pay, MobiKwik ನಂತಹ ಖಾಸಗಿ ವ್ಯಾಲೆಟ್ ಸಂಸ್ಥೆಗಳ ಗ್ರಾಹಕ ಸಂಖ್ಯೆಗಳಿಗೆ ಕರೆ ಮಾಡಬೇಕು.
 • ಆಧಾರ್ ಜೋಡಣೆಯನ್ನು ಡಿಲಿಂಕ್ ಮಾಡಲು ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ತಿಳಿಸಿ.
 • ನೀವು ಸೇವೆ ಪಡೆಯುತ್ತಿರುವ ಸಂಬಂಧಿತ ಕಂಪನಿಯಿಂದ ಬರುವ ಮೇಲ್‌ನಲ್ಲಿ ಈ ಮನವಿಯನ್ನು ಕಾರ್ಯಗತಗೊಳಿಸಲು ನಿಮ್ಮ ಆಧಾರ್ ಕಾರ್ಡ್‌ನ ಸ್ಪಷ್ಟ ಚಿತ್ರವನ್ನು ಕಳುಹಿಸುವಂತೆ ಕೋರಲಾಗುತ್ತದೆ. ಅದರಂತೆ ಆ ಸೂಚನೆಯನ್ನು ಪಾಲಿಸಿ.
 • ಸಂಸ್ಥೆಯು ನಿಮ್ಮ ಆಧಾರ್ 72 ಗಂಟೆಗಳೊಳಗೆ ಡಿಲಿಂಕ್ ಮಾಡಲಾಗುವುದು ಎಂದು ಇ-ಮೇಲ್ ಮೂಲಕ ದೃಢೀಕರಿಸುತ್ತದೆ.
 • ಆಧಾರ್ ಡೀಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
 • ಈ ಪ್ರಕ್ರಿಯೆಯನ್ನು ಸಂಬಂಧಿತ ಡಿಜಿಟಲ್ ವ್ಯಾಲೆಟ್ ಸಂಸ್ಥೆಗಳಳೊಂದಿಗೆ ಅನುಸರಿಸಿ. ಪೇಟಿಎಂ ಗ್ರಾಹಕ ಸೇವೆ ಸಂಖ್ಯೆ 01204456456 ಕರೆ ಮಾಡಿ.

ಆಧಾರ್ ಡಿಲಿಂಕ್ ಪರಿಶೀಲನೆ ಹೇಗೆ..?

Also read: ದ್ವಿಚಕ್ರ ಹಾಗೂ ಕಾರ್ ಮಾಲೀಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರದ ಹೊಸ ಆದೇಶ!! ನಿಮ್ಮ ಗಾಡಿ ಸೀಜ್ ಆಗಬಾರದು ಅಂದ್ರೆ ಮೊದಲು ಇದನ್ನ ಓದಿ…

  • ಆಧಾರ್ ಜೋಡಣೆ ಮಾಡಿರುವ ಸಂಸ್ಥೆಗಳಿಗೆ ಆಧಾರ್ ಡಿಲಿಂಕ್ ಪ್ರಕ್ರಿಯೆ ತಲೆ ನೋವು ಆಗಲಿದೆ.
  • ಆಧಾರ್ ಡಿಲಿಂಕ್ ಮಾಡಿದರೂ ಜನರ ಖಾಸಗಿತನದ ಗೋಪ್ಯತೆಯನ್ನು ಕಾಯ್ದುಕೊಳ್ಳುತ್ತವೆಯೇ ಎಂಬುದನ್ನು ಹೇಳುವುದು ಸುಲಭವಲ್ಲ.
  • ಕಾರಣ ಆಧಾರ್‌ಗೆ ಸಂಬಂಧಿಸಿದಂತೆ ಅವರು ಪಡೆದುಕೊಂಡ ಸಂಪೂರ್ಣ ಡೇಟಾವನ್ನು ಎಲ್ಲಾ ದಾಖಲೆಗಳಿಂದಲೂ ಅಳಿಸಿ ಹಾಕಬೇಕು. ಈ ಪ್ರಕ್ರಿಯೆ ನಡೆದಿದೆ ಎನ್ನುವುದನ್ನು ಪರಿಶೀಲಿಸುವುದು ಕೂಡ ಸುಲಭವಲ್ಲ.
  • ಜಿಯೋನಂತಹ ಟೆಲಿಕಾಂ ಕಂಪೆನಿಗಳು ಆರಂಭದಿಂದಲೂ ಆಧಾರ್ ಸಂಖ್ಯೆಗೆ ಮಾತ್ರವೇ ತನ್ನ ಸಿಮ್‌ಗಳನ್ನು ವಿತರಿಸಿವುದೇ ಕಾರಣ.