ನೀವು ಪೆಟ್ರೋಲ್ ಪಂಪ್ ಮಾಲಿಕತ್ವ ಪಡೆಯಬೇಕ? ಹಾಗಾದ್ರೆ ಈ ಮಾಹಿತಿ ನೋಡಿ..

0
2352

ದೇಶದಲ್ಲಿ 65 ಸಾವಿರ ಪೆಟ್ರೋಲ್‌ ಪಂಪ್‌ ರೂಪಿಸಲು ಅರ್ಜಿ ಆಹ್ವಾನ:

ಸ್ವಂತ ಉದ್ಯಮ ಸ್ಥಾಪಿಸುವ ಯೋಚನೆಯಲ್ಲಿರುವ ನವ ಉದ್ಯಮಗಳಿಗೆ ಇಂದಿಗ ಒಳ್ಳೆಯ ಅವಕಾಶ ಒದಗಿ ಬಂದಿದೆ. ಹೆಚ್ಚು ಹಣಗಳಿಸುವ ಉದ್ಯಗಳ ಸಾಲಿನಲ್ಲಿರುವ ಪೆಟ್ರೋಲ್ ಡೀಸೆಲ್ ಮಾರಾಟದ ಉದ್ಯಮ ಅತೀ ಹೆಚ್ಚು ಸುದ್ದಿಯಲ್ಲಿದೆ ಇದಕ್ಕೆ ಪರವಾನಗಿ ನೀಡಲು ಅರ್ಜಿ ಕರೆದಿದ್ದು ಆಸಕ್ತರು online ಮೂಲಕ ಅರ್ಜಿ ಸಲ್ಲಿಸಬಹುದು.

Also read: ಇರಾನ್-ನಿಂದ ಭಾರತ ತೈಲ ಆಮದು ಮಾಡಿಕೊಳ್ಳಲು ವಿನಾಯಿತಿ ಕೊಟ್ಟ ಅಮೇರಿಕ; ಇನ್ಮೇಲಾದ್ರು ಪೆಟ್ರೋಲ್ ಬೆಲೆ ಕಡಿಮೆಯಾಗುತ್ತ?

ಹೌದು ದೇಶದ ನಾನಾ ಭಾಗಗಳಲ್ಲಿ 65000 ಪೆಟ್ರೋಲ್ ಪಂಪ್ ಗಳನ್ನು ಹೊಸದಾಗಿ ತೆರೆಯಲಾಗುವುದು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಎಚ್ಪಿಸಿಎಲ್) ಈ ಬಗ್ಗೆ ಜಾಹೀರಾತನ್ನು ನೀಡಿದ್ದು ಸರ್ಕಾರಿ ಸ್ವಾಮ್ಯದ ತೈಲ ಮರಾಟ ಕಂಪನಿಗಳು ಪ್ರಸಕ್ತ ಸಾಲಿನಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ನಂತರ ದೇಶದಾದ್ಯಂತ ಪೇಟ್ರೋಲ್ ಪಂಪ್ ಗಳನ್ನು ತೆರೆಯಲು ಮುಂದಾಗಿವೆ. ಅಂದರೆ ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಲಿದೆ. ಈ ಬಂಕ್ ಗಳ ಹೆಚ್ಚಳದಿಂದ ಗಣನೀಯವಾಗಿ ಹೊಸ ಉದ್ಯೋಗ ಸೃಷ್ಟಿಯಾಗಲಿದೆ.

ಮೂಲ ಉದ್ದೇಶ?

Also read: ಪೆಟ್ರೋಲ್ ಪಂಪ್-ನಲ್ಲಿ ಚಿಪ್ ಹಾಕಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಪಂಪ್-ಅನ್ನು ಸೀಜ್ ಮಾಡಿದ ಪೊಲೀಸರು, ಇನ್ನೆಷ್ಟು ಹೀಗೆ ಮೋಸ ಮಾಡುತ್ತಿವೆಯೋ??

ತ್ವರಿತ ವೇಗದ ಆರ್ಥಿಕತೆ. ದೇಶದ ಬೆಳವಣಿಗೆಗೆ ಇಂಧನವು ಅತ್ಯಗತ್ಯವಾಗಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ನ ರೀಟೇಲ್‌ ಮಾರಾಟವು ಕ್ರಮವಾಗಿ ಶೇ.8 ಮತ್ತು ಶೇ.4ರಷ್ಟು ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೂತನ ಹೆಚ್ಚುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ನ ಬೇಡಿಕೆ ಪೂರೈಸಲು ದೇಶದಲ್ಲಿ 65,000 ಪೆಟ್ರೋಲ್‌ ಪಂಪ್‌ಗಳನ್ನು ರೂಪಿಸಲು ಅರ್ಜಿಗಳನ್ನು ಆಹ್ವಾನಿಸಲು ತೈಲ ಕಂಪನಿಗಳು ಮುಂದಾಗಿವೆ. 55,649 ಪೆಟ್ರೋಲ್‌ ಪಂಪ್‌ಗಳ ಡೀಲರ್‌ಶಿಪ್‌ಗೆ ಮೊದಲ ಹಂತದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಎಂದು ತೈಲ ಕಂಪನಿಗಳು ಹೇಳಿವೆ. ಐಒಸಿ ಈಗಾಗಲೇ 27,377 ಪೆಟ್ರೋಲ್‌ ಪಂಪ್‌ಗಳನ್ನು ಹೊಂದಿದ್ದು, 26,982 ಪಂಪ್‌ಗಳ ರೂಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಬಿಪಿಸಿಎಲ್‌ 14,592 ಪೆಟ್ರೋಲ್‌ ಪಂಪ್‌ ಹೊಂದಿದ್ದು, ಹೊಸದಾಗಿ 12,865 ಪಂಪ್‌ಗಳ ಸ್ಥಾಪಿಸಲಿದೆ. ಎಚ್‌ಪಿಸಿಎಲ್‌ ಹೊಸದಾಗಿ 12,865 ಕೇಂದ್ರಗಳನ್ನು ತೆರೆಯಲಿದೆ.

ಅರ್ಜಿ ಸಲ್ಲಿಕ್ಕೆ ಮತ್ತು ಬೇಕಾದ ದಾಖಲಾತಿಗಳು?

Also read: ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಗ್ರಾಹಕರು ಹೆಚ್ಚು ಹಣ ಪಾವತಿಸಬೇಕಾಗುತ್ತದೆ ಯಾಕೆ ಗೊತ್ತಾ..!

ಹೊಸ ಪೆಟ್ರೋಲ್ ಬಂಕ್ ಗಳಿಗಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನೀತಿ ನಿಯಮಗಳಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲಾಗಿದೆ. ಹನ್ನೆರಡನೇ ತರಗತಿಯಿಂದ ಹತ್ತನೇ ತರಗತಿಗೆ ಶೈಕ್ಷಣಿಕ ಅರ್ಹತೆ ಇಳಿಸಲಾಗಿದೆ. ಮತ್ತು ಪದವಿ ಹೊಂದಿದ್ದರೆ ಒಳ್ಳೆಯದು. ಆದರೆ ಮುಖ್ಯವಾಗಿರುವುದು ಪೆಟ್ರೋಲ್ ಪಂಪ್ ನಿರ್ಮಾಣಕ್ಕೆ ಬೇಕಾದ ಜಾಗದ ಮಾಲೀಕತ್ವ ಬೇಕಾಗುತ್ತೆ. ಹಾಗೆಯೇ ಅರ್ಜಿ ಸಲ್ಲಿಸಿದವರು ಎಲ್ಲರೂ ಕೂಡ ದಾಖಲಾತಿ ಸಲ್ಲಸುವ ಅಗತ್ಯವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಂದ ಮಾತ್ರವೇ ಅಗತ್ಯ ದಾಖಲಾತಿಗಳನ್ನು ತೆಗೆದುಕೊಳ್ಳಲಾಗುವುದು. ವಯಸ್ಸಿನ ಮಿತಿ 55 ರಿಂದ 64ಕ್ಕೆ ಏರಿಸಲಾಗಿದೆ. ಬಂಕ್ ನಿರ್ಮಾಣಕ್ಕೆ ಭೂಮಿ ಇಲ್ಲದೆ ಇದ್ದವರು ಕೂಡ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ನಂತರ ಭೂಮಿ ಹೊಂದಿಸಲು ಕಾಲಮಿತಿ ನೀಡಲಾಗುವುದು.