ಮುಖದಲ್ಲಿರುವ ರಂದ್ರಗಳಿಗೆ ದುಬಾರಿ ಕ್ರೀಮ್ ಬಳಸಬೇಡಿ.. ಈ ಮನೆಮದ್ದುಗಳನ್ನು ಪಾಲಿಸಿ clear ತ್ವಚೆ ನಿಮ್ಮದಾಗುತ್ತದೆ.!

1
6866

Kannada News | Health tips in kannada

ನಿಮಗೆ ಮೊಡವೆ ಸಮಸ್ಯೆಯಿಲ್ಲವಾದರೂ ಒಮ್ಮೊಮ್ಮೆ ಮುಖದ ಮೇಲಿನ ರಂಧ್ರಗಳು ನಿಮ್ಮ ಸೌಂದರ್ಯವನ್ನು ಸಂಪೂರ್ಣ ಹಾಳುಮಾಡುತ್ತದೆ. ಹೀಗೆ ರಂಧ್ರ ಬಿದ್ದರೆ ಮುಖ ಮುಪ್ಪಾದಂತೆ ಕಾಣುವುದು. ತ್ವಚೆ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಎಣ್ಣೆ ತ್ವಚೆ ಇದ್ದವರಿಗಂತೂ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ಈ ಸಮಸ್ಯೆ ನಿವಾರಣೆಗೆ ಈ ಕೆಳಗಿನ ಸಲಹೆಗಳನ್ನು ತಪ್ಪದೆ ಪಾಲಿಸಿ

1. ವಾರಕ್ಕೆ 2 ಬಾರಿ ಮುಖಕ್ಕೆ ಬಿಸಿ ನೀರಿನ ಹವೆ ತೆಗೆದುಕೊಳ್ಳಬೇಕು (ಆದರೆ ನೀರು ತುಂಬಾ ಬಿಸಿ ಇರಬಾರದು). ಹೀಗೆ ಮಾಡುವುದರಿಂದ ಚರ್ಮದ ಮುಚ್ಚಿದ ರಂಧ್ರಗಳು ತೆರೆದುಕೊಂಡು ದೇಹದಲ್ಲಿನ ಬೇಡವಾದ ಕಲ್ಮಶಗಳು ಹೊರಬರುತ್ತವೆ.

2. ಐಸ್ ಕ್ಯೂಬ್ ಅನ್ನು ರಂಧ್ರ ಇರುವ ಜಾಗದಲ್ಲಿ 20 ಸೆಕೆಂಡ್ ಗಳ ಕಾಲ ಇಟ್ಟರೆ ತ್ವಚೆಯನ್ನು ಬಿಗಿಯುತ್ತದೆ, ಈ ರೀತಿ ಮಾಡಿದರೆ ತ್ವಚೆ ರಂಧ್ರಗಳನ್ನು ಕಡಿಮೆ ಮಾಡುತ್ತದೆ.

3. ಒಂದು ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಒಂದು ಚಮಚ ನೀರು ನಂತರ ಒಂದು ಚಮಚ ಆಲೀವ್ ಎಣ್ಣೆ ಇವುಗಳನ್ನು ಮಿಶ್ರ ಮಾಡಿ ಮುಖಕ್ಕೆ 2 ನಿಮಿಷ ಉಜ್ಜಿ ನಂತರ ಮುಖ ತೊಳೆಯಬೇಕು. (ವಾರದಲ್ಲಿ ಒಮ್ಮೆಯಾದರೂ ಈ ರೀತಿ ಮಾಡಬೇಕು)

4. ಒಂದು ನಿಂಬೆ ಹಣ್ಣಿನ ರಸ ಮತ್ತು ಅನನಾಸ್ ರಸಕ್ಕೆ ಒಂದು ಹತ್ತಿ ಬಟ್ಟೆಯ ತುಂಡು ತೆಗೆದುಕೊಂಡು ಅದರಲ್ಲಿ ಅದ್ದಿ ಮುಖಕ್ಕೆ 2 ನಿಮಿಷಗಳ ಒತ್ತಿ ಹಿಡಿಯಬೇಕು. ನಂತರ ಬಿಸಿನೀರಿನಿಂದ ಮುಖ ತೊಳೆಯಬೇಕು. ನಿಂಬೆ ಅಥವಾ ಪೈನಾಪಲ್ ಅಥವಾ ಅನನಾಸ್ ತ್ವಚೆಯನ್ನು ಬಿಗಿದು ಹಿಡಿಯುತ್ತದೆ, ಇದರಿಂದ ರಂಧ್ರಗಳು ಕಾಣಿಸುವುದಿಲ್ಲ, ತ್ವಚೆ ಕೂಡ ಕಾಂತಿಯನ್ನು ಪಡೆಯುತ್ತದೆ.

5. ಸಕ್ಕರೆ ಪುಡಿಗೆ ಸ್ವಲ್ಪ ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಹೆಚ್ಚು ರಂಧ್ರ ಇರುವ ಜಾಗದಲ್ಲಿ 5 ನಿಮಿಷಗಳ ಕಾಲ ಮೃದುವಾಗಿ ಸರ್ಕ್ಯುಲರ್‌‌‌‌‌ ಮೋಶನ್‌‌ನಲ್ಲಿ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ಮಾಶ್ಚರೈಸರ್ ಹಚ್ಚಿಕೊಳ್ಳಿ. (ವಾರಕ್ಕೆ ಒಂದು ಬಾರಿ ಹೀಗೆ ಮಾಡಿ)

6. ದಾಳಿಂಬೆ ರಸವನ್ನು ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಇದು ಟೋನರ್‍ನಂತೆ ಕೆಲಸ ಮಾಡಿ ಮುಖದ ರಂಧ್ರ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.

7. ಒಂದು ಟೀ ಸ್ಪೂನ್ ಜೇನುತುಪ್ಪಕ್ಕೆ ಸ್ವಲ್ಪ ಚೆಕ್ಕೆ ಪುಡಿಯನ್ನು ಮಿಶ್ರಣ ಮಾಡಿ ರಂಧ್ರಗಳ ಮೇಲೆ ಹಚ್ಚಿ 20 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಚರ್ಮದಲ್ಲಿನ ಹೆಚ್ಚಿನ ಜಿಡ್ಡು ಅಂಶ ಹೊರ ಬಂದು ರಂಧ್ರಗಳು ಟೈಟ್ ಆಗುತ್ತದೆ.

8. 1 ಸ್ಪೂನ್ ಮೊಟ್ಟೆಯ ಬಿಳಿ ಭಾಗಕ್ಕೆ 1/2 ಸ್ಪೂನ್‌‌‌ ನಿಂಬೆರಸ ಬೆರೆಸಿ ಸಮವಾಗಿ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಂಧ್ರ ಹೆಚ್ಚಾಗಿರುವ ಭಾಗಕ್ಕೆ ಹಚ್ಚಿ 20 ನಿಮಿಷದ ನಂತರ ಮುಖ ತೊಳೆಯಿರಿ. ವಾರಕ್ಕೆ 3 ಬಾರಿ ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶ ತಿಳಿಯಲಿದೆ.

9. ಅಕ್ಕಿ ತೊಳೆದ ನೀರು ಮೊಡವೆ ಗುಣಪಡಿಸಲು ನೆರವಾಗುತ್ತದೆ ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ, ಚರ್ಮದ ಮೇಲೆ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸಮಾಡುತ್ತದೆ. ಅಷ್ಟೇ ಅಲ್ಲದೆ ಅಕ್ಕಿ ತೊಳೆದ ನೀರು ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ರಕ್ತದ ಹರಿವನ್ನು ಪ್ರಚೋದಿಸುತ್ತದೆ, ಮತ್ತು ನಿಮ್ಮ ಚರ್ಮವನ್ನು ಮೃದುವಾದ ಮತ್ತು ಪ್ರಕಾಶಮಾನವಾಗಿರಿಸುತ್ತದೆ.

Also Read: ಮಂಜುಗಡ್ಡೆಯನ್ನು ಕತ್ತಿನ ಹಿಂಭಾಗದಲ್ಲಿ ಇಟ್ಟರೆ ಏನೆಲ್ಲಾ ಲಾಭಗಳು ಇವೆ ಅಂತ ಗೊತ್ತಾದ್ರೆ, ನೀವು ಬೆರಗಾಗೋದ್ರಲ್ಲಿ ಸಂಶಯವೇ ಇಲ್ಲ!!!