ಸೊಳ್ಳೆಗಳ ತೊಂದರೆ ಸಾಮಾನ್ಯ.. ಚಿಂತೆ ಬಿಡಿ ಸೊಳ್ಳೆಗಳನ್ನು ಹೋಗಲಾಡಿಸಲು ಪರಿಣಾಮಕಾರಿ ವಿಧಾನ ಇಲ್ಲಿದೆ ನೋಡಿ..

0
1545

ಸೊಳ್ಳೆಗಳಿಂದ ಬರುವ ರೋಗಗಳು ಒಂದೆರೆಡಲ್ಲ.. ಇತ್ತೀಚಿನ ದಿನಗಳಲ್ಲಿ ಸೊಳ್ಳೆಯಿಂದ ಖಾಯಿಲೆಗಳು ಹೆಚ್ಚಾಗಿವೆ.. ಔಷದಿಗಳು ಸಿಕ್ಕರೂ ಕೂಡ ಖಾಯಿಲೆಗಳಿಂದ ನರಳುವುದು ಯಾರಿಗೆ ತಾನೆ ಇಷ್ಟ ಹೇಳಿ.. ಮಲೇರಿಯಾ ಟೈಫಾಯ್ಡ್ ಡೆಂಗ್ಯೂ ಇನ್ನೂ ಹತ್ತಾರು ಖಾಯಿಲೆಗಳು ಸೊಳ್ಳೆಗಳಿಂದ ಬರುತ್ತದೆ.. ಅದರಲ್ಲೂ ಮಳೆಗಾಲ ಬಂತೆಂದರೆ ಸೊಳ್ಳೆಗಳು ಹೆಚ್ಚಾಗುತ್ತವೆ..

ಸೊಳ್ಳೆ ನಿರ್ಮೂಲನೆಗೆ ಕಾಯ್ಲ್ ಗಳು ಲಿಕ್ವಿಡ್ ಗಳನ್ನು ಸಾಮಾನ್ಯವಾಗಿ ಬಳಸುತ್ತೇವೆ ಆದರೆ ಅದರಿಂದಲೂ ಕೂಡ ಆರೋಗ್ಯ ಕೆಡುತ್ತದೆ.. ಅದಕ್ಕಾಗಿಯೇ ಸುಲಭವಾಗಿ ನೈಸರ್ಗಿಕ ವಾಗಿ ಮಾಡಿದ ಪದಾರ್ಥಗಳನ್ನು ಬಳಸುವುದು ಉತ್ತಮ.. ಇದು ಹೇಗೆ ಎಂದು ಯೋಚಿಸುತ್ತಿರುವಿರಾ?? ಇಲ್ಲಿದೆ ನೋಡಿ ನಾವೇ ಮನೆಯಲ್ಲೇ ಸುಲಭವಾಗಿ ಪರಿಣಾಮಕಾರಿಯಾಗಿ ಸೊಳ್ಳೆಯನ್ನು ಹೇಗೆ ನಿರ್ಮೂಲನೆ ಮಾಡಬಹುದೆಂದು.

ಇದಕ್ಕೆ ಬೇಕಾಗುವ ವಸ್ತುಗಳು

 • ಒಂದು ವಾಟರ್ ಬಾಟಲ್.
 • ಈಸ್ಟ್ (ಅಂಗಡಿಗಳಲ್ಲಿ ಸಿಗುತ್ತದೆ)
 • ಜೇನು ತುಪ್ಪ
 • ಫೆವಿಕಾಲ್
 • ಸಕ್ಕರೆ

ಮಾಡುವ ವಿಧಾನ

 • ಮೊದಲು ಸ್ವಲ್ಪ ನೀರನ್ನು ಕಾಯಿಸಿ ಆರಿಸಿಕೊಳ್ಳಿ..
 • ನಂತರ ಒಂದು ಪ್ಲಾಸ್ಟಿಕ್ ಬಾಟಲಿಯನ್ನು ಎರಡು ಭಾಗಗಳಾಗಿ ಕಟ್ ಮಾಡಿಕೊಳ್ಳಿ..
 • ಕೆಳಗಿನ ಭಾಗಕ್ಕೆ ಕುದಿಸಿ ಆರಿಸಿದ ನೀರನ್ನು ಹಾಕಿ..
 • ನೀರಿಗೆ ಸ್ವಲ್ಪ ಸಕ್ಕರೆ ಮತ್ತು ಸ್ವಲ್ಪ ಈಸ್ಟ್ ಅನ್ನು ಹಾಕಿ ಬೆರೆಸಿ
 • ನಂತರ ಸ್ವಲ್ಪ ಜೇನು ತುಪ್ಪ ವನ್ನು ಬೆರೆಸಿ..
 • ನಂತರ ಬಾಟಲಿನ ಇನ್ನೊಂದು ಭಾಗವನ್ನು ತಲೆಕೆಳಗಾಗಿ ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ಮುಚ್ಚಿ..
 • ನಂತರ ಎರಡು ಭಾಗಗಳು ಸೇರುವ ಜಾಗವನ್ನು ಫೆವಿಕಾಲ್ ನಿಂದ ಅಂಟಿಸಿ..
 • ಈ ಮಿಶ್ರಣ ದಿಂದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ.. ಇದು ಸೊಳ್ಳೆಗಳನ್ನು ಆಕರ್ಷಿಸುತ್ತದೆ..
 • ಸೊಳ್ಳೆಗಳು ಬಂದು ಈ ಅಂಟು ಅಂಟಾದ ದ್ರವದಲ್ಲಿ ಬಿದ್ದು ಸಾಯುತ್ತವೆ..
 • ಈ ರೀತಿಯಾಗಿ ಮನೆಯ ಎರಡು ಮೂಲೆಗಳಲ್ಲಿ ಎರಡು ಬಾಟಲ್ ಗಳನ್ನು ಇಡಿ ಸಾಕು ಸುಲಭವಾಗಿ ಮನೆಯಲ್ಲಿರುವ ಎಲ್ಲಾ ಸೊಳ್ಳೆಗಳು ಸಾಯುತ್ತವೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಬಹುದು..