ಮನೆಯ ಅಲಂಕಾರ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತದೆ.. ಹೇಗೆ ಎಂದು ಇಲ್ಲಿದೆ ನೋಡಿ

0
785

Kannada News | Health tips in kannada

ಮಕ್ಕಳನ್ನು ಹೇಗೇಗೋ ಬೆಳೆಸಬೇಕು ಎಂದು ಹೆತ್ತವರು ಕನಸು ಕಾಣುತ್ತಾರೆ… ಅದರಲ್ಲೂ ಈಗಿನ ಕಾಂಪಿಟೇಟಿವ್ ಯುಗದಲ್ಲಿ ಮಕ್ಕಳು ದೊಡ್ಡ ಮನುಷ್ಯರಾಗಬೇಕು ಎಂಬ ಹಂಬಲ ಎಲ್ಲಾ ಪೋಷಕರಲ್ಲೂ ಹೆಚ್ಚಾಗುತ್ತಲೇ ಇದೆ..

ಇದರಲ್ಲಿ ಬಹುಮುಖ್ಯವಾಗಿ ಮಕ್ಕಳಿಗೆ ಬೇಕಾಗಿರುವುದು.. ಒಳ್ಳೆಯ ದಾರಿಯಲ್ಲಿ ವ್ಯಕ್ತಿತ್ವ ರೂಪುಗೊಳ್ಳುವುದು.. ಹೌದು ಮಕ್ಕಳ ಬೆಳೆಯುವ ವಾತಾವರಣ ಮಕ್ಕಳ ನಡವಳಿಕೆಯ ನಿರ್ಧಾರವನ್ನು ಮಾಡುತ್ತದೆ.. ಜೊತೆಗೆ ಮನೆಯ ಅಲಂಕಾರ ಕೂಡ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ..

ಇದೇನಪ್ಪಾ ಅಂತೀರಾ?? ಮಕ್ಕಳ ಮನಸ್ಸಿನ ಮೇಲೆ ಬಹಳ ಸುಲಭವಾಗಿ ಪರಿಣಾಮ ಬೀರುವುದು ಮನೆಯ ಅಲಂಕಾರ.. ಹೌದು ಮಕ್ಕಳಾಗಲಿ ದೊಡ್ಡವರಾಗಲಿ ಹೆಚ್ಚಾಗಿ ಸಮಯ ಕಳೆಯುವ ಜಾಗದಲ್ಲಿ ಇಡುವ ವಸ್ತುಗಳನ್ನು ನೋಡು ನೋಡುತ್ತಾ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ.. ಹಾಗಿದ್ದರೆ ಹೇಗಿರ ಬೇಕು ಮನೆಯ ಅಲಂಕಾರ..‌ಇಲ್ಲಿದೆ ನೋಡಿ ನಮ್ಮದೊಂದಿಷ್ಟು ಸಲಹೆ..

ಮನೆಯಲ್ಲಿ ಸಾಧಕರ ಫೋಟೋ ಗಳನ್ನು ಇರಿಸಿ..

ಮನೆಯ ತುಂಬೆಲ್ಲಾ ಅಲ್ಲದಿದ್ದರೂ ಮಕ್ಕಳ ರೂಮ್ ಗಳಲ್ಲಾಗಿರಬಹುದು.. ಮಕ್ಕಳು ಹೆಚ್ಚಾಗಿ ಓಡಾಡುವ ಜಾಗಗಳಲ್ಲಿರಬಹುದು ಸಾಧಕರ ಫೋಟೋ ಗಳನ್ನು ಇರಿಸಿ.. ಸಾಮಾನ್ಯವಾಗಿ ಮಕ್ಕಳು ಯಾರನ್ನು.. ಯಾವುದನ್ನು ಹೆಚ್ಚಾಗಿ ನೋಡುತ್ತಾರೋ ಅವರಂತೆ ಆಗಬೇಕೆಂದು ಕೊಳ್ಳುವುದು ಸಹಜ..

ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಮನೆಯನ್ನು ಪ್ರಾಣಿ ಪಕ್ಷಿಯ ಚಿತ್ರಗಳಿಂದ ಅಲಂಕರಿಸಿ.

ನಿಮ್ಮ ಮನೆಯಲ್ಲೇನಾದರೂ ಪುಟ್ಟ ಮಕ್ಕಳಿದ್ದರೆ ಪ್ರಾಣಿ ಪಕ್ಷಿಗಳ ಚಾರ್ಟ್ ಗಳನ್ನು ಹಾಕಿ.. ಇದರಿಂದ ಮಕ್ಕಳ ಮನಸ್ಸಿಗೆ ಸಂತೋಷದ ಜೊತೆಗೆ ಆ ವಿಷಯದ ಕುರಿತು ಆಸಕ್ತಿಯೂ ಮೂಡುತ್ತದೆ..

ಗಿಫ್ಟ್ ಗಳ ಬದಲು ಪುಸ್ತಕಗಳನ್ನು ತಂದು ಇಡಿ..

ಮಕ್ಕಳ ಹುಟ್ಟು ಹಬ್ಬಗಳು ಬಂದಾಗ ಬಣ್ಣ ಬಣ್ಣದ ಆಟಿಕೆಗಳನ್ನು ಸ್ವಲ್ಪ ಕಡಿಮೆ ಮಾಡಿ.. ಅವರಿಗೆ ಪುಸ್ತಕಗಳನ್ನು ಉಡುಗೊರೆಗಳಾಗಿ ನೀಡಿ..

ಪ್ರಶಾಂತತೆ ಕಾಪಾಡಿಕೊಳ್ಳಿ..

ಮನೆ ಪುಟ್ಟದಾಗಲಿ.. ದೊಡ್ಡದಾಗಲಿ ಪ್ರಶಾಂತತೆಯಿಂದ ಕೂಡಿರುವ ಹಾಗೆ ನೋಡಿಕೊಳ್ಳಿ.. ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಇದು ಕೂಡ ಬಹಳ ಮುಖ್ಯವಾದದ್ದು…

ಮನೆಯ ಅಲಂಕಾರ ಆಡಂಬರವಾಗಿರದೇ ಅರ್ಥಪೂರ್ಣವಾಗಿರಲಿ..‌

Also read: ಬೇಸಿಗೆಯಲ್ಲಿ ಆರೋಗ್ಯದಿಂದಿರಲು ಸೇವಿಸಬೇಕಾದ 5 ಆಹಾರಗಳು ಇಲ್ಲಿವೆ ನೋಡಿ