ಮಾನಸಿಕ ನೆಮ್ಮದಿಗಾಗಿ ಮನೆಯಲ್ಲೇ ಮಾಡಬೇಕಾದ ಈ 5 ಕೆಲಸಗಳನ್ನೊಮ್ಮೆ ನೋಡಿ.

0
1928

ಕೆಲಸದ ಒತ್ತಡವೊ ಸಾಂಸಾರಿಕ ತೊಂದರೆಯೊ ಅಥವಾ ಹಣಕಾಸಿನ ಸಮಸ್ಯಯೊ ಅದಕ್ಕೂ ಮೀರಿ ಆರೋಗ್ಯದ ಚಿಂತೆಯೋ.. ಒಟ್ಟಿನಲ್ಲಿ ಮನುಷ್ಯ ಒಂದಲ್ಲಾ ಒಂದು ಚಿತೆಯಿಂದ ಬಳಲುತ್ತಿರುತ್ತಾನೆ.. ಅದರಲ್ಲೂ ದೈಹಿಕವಾಗಿ ಏನಾದರೂ ನೋವಾದರೂ ಸಹಿಸಿಬಿಡಬಹುದು.. ಆದರೇ ಮಾನಸಿಕವಾಗಿ ನೆಮ್ಮದಿ ಹಾಳಾದರೇ ಆಕಾಶವೇ ತಲೆಯ ಮೇಲೆ ಬಿದ್ದಂತಾಗುತ್ತದೆ..

ಈ ರೀತಿಯ ಒತ್ತಡಗಳಿಂದ ಹೊರ ಬರುವುದಾದರೂ ಹೇಗೆ?? ಇಲ್ಲಿದೆ ನೋಡಿ ಮನೆಯಲ್ಲೆ ಈ ಕೆಲಸಗಳನ್ನು ಮಾಡಿ ಸಂತೋಷದಿಂದಿರಿ..

1.ಗಿಡಗಳನ್ನು ನೆಡಿ
ಇದು ನೋಡಲೂ ವಿಚಿತ್ರ ಎನಿಸಿದರೂ ಅತ್ಯಂತ ಪರಿಣಾಮಕಾರಿ ಉಪಾಯ.. ಮನೆಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು.. ಹಸಿರು ಒಂದು ರೀತಿಯ ನೆಮ್ಮದಿಯ ಸಂಕೇತವಾಗಿದೆ.. ಗಿಡಗಳ ಬೆಳವಣಿಗೆಯ ಜೊತೆಗೆ ನಮ್ಮ ನೋವುಗಳು ಕಡಿಮೆಯಾಗುತ್ತಾ ಬರುತ್ತವೆ.. ಒಮ್ಮೆ ಪ್ರಯತ್ನಿಸಿ ನೋಡಿ..

2.ರೇಡಿಯೋ ಟಿ ವಿ ಯ ಮೊರೆ ಹೋಗಿ
ನೋವಾದ ವಿಚಾರವನ್ನು ಪದೇ ಪದೇ ನೆನಪಿಸಿಕೊಳ್ಳದೇ ರೇಡಿಯೋ ಅಥವಾ ಟಿ ವಿ ಕಾರ್ಯಕ್ರಮಗಳನ್ನು ನೋಡಿ.. ಅದು ನಮ್ಮ ಮನಸನ್ನು ತನ್ನೆಡೆ ಸೆಳೆದುಕೊಳ್ಳುತ್ತದೆ.. ಕ್ರಮೇಣ ನಮ್ಮ ಮನಸ್ಸು ಹಗುರವಾಗುತ್ತದೆ..

3.ಹಸಿರಿನ ಪರಿಸರದಲ್ಲಿ ಸುತ್ತಾಡಿ..
ಮೊದಲೇ ಹೇಳಿದಂತೆ ಹಸಿರು ಒಂದು ನೆಮ್ಮದಿಯ ಸಂಕೇತವಾಗಿದೆ..ಆದ್ದರಿಂದ ಹಸಿರಿನ ವಾತಾವರಣ ಗಿಡ ಮರಗಳ ನಡುವೆ ನಿಮ್ಮ ಸಮಯ ಕಳೆಯಿರಿ.

4.ಪ್ರಾಣಾಯಾಮವನ್ನು ಮಾಡಿ..
ಕೆಲವರಿಗೆ ಪ್ರಾಣಾಯಾಮ ಎಂದರೇ ಏನೊ ಎಂದುಕೊಳ್ಳುತ್ತಾರೆ.. ಆದರೆ ಇದೊಬ್ದು ಉಸಿರಾಟದ ಪ್ರಕ್ರಿಯೇ ಅಷ್ಟೆ.. ಇದಕ್ಕಾಗಿ ನೀವೇನೂ ಯೋಗದ ಕ್ಲಾಸಿಗೆ ಹೋಗಬೇಕಿಲ್ಲಾ.. ಇದರ ಬಗ್ಗೆ ಹಲವಾರು ವೀಡಿಯೋ ಇರುತ್ತವೆ ಒಮ್ಮೆ ನೋಡಿ ಮಾಡಿ.. ಇದರಿಂದ ನಮ್ಮ ಅಂತರಾತ್ಮ ತನ್ನ ನೋವಿನಿಂದ ಹೊರ ಬಂದು ಮಾನಸಿಕವಾಗಿ ನೆಮ್ಮದಿಗೊಳ್ಳುತ್ತದೆ..

5.ನಿಮ್ಮ ಹವ್ಯಾಸದ ಬಗ್ಗೆ ಗಮನ ಕೊಡಿ
ನಿಮ್ಮ ಹವ್ಯಾಸಗಳು ಕ್ರೀಡೆಯಾಗಿರಬಹುದು ಅಥವಾ ಪುಸ್ತಕ ಒದುವುದಾಗಲಿ ಅಥವಾ ಇನ್ನೇನೆ ಇರಬಹುದು.. ನಿಮ್ಮ ಹವ್ಯಾಸಗಳ ಬಗ್ಗೆ ನಿಮ್ಮ ಮನಸ್ಸನ್ನು ಬದಲಾಯೊಸಿ.. ಇದು ನಿಮ್ಮ ನೋವನ್ನು ಮರೆಯಲು ಸಹಾಯ ಮಾಡುತ್ತದೆ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಲಿ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840