ಎಷ್ಟು ಓದಿದ್ರು ಮರೆತು ಹೋಗುತ್ತೆ ಅನ್ನೋವ್ರು ಅನುಸರಿಸಲೇಬೇಕಾದ ಕೆಲವು ನೆನಪು ವೃದ್ಧಿಸೋ ಟಿಪ್ಸ್ ಗಳು ಇಲ್ಲಿವೆ ಓದಿ…

0
2410

ಮರೆವು ಜಾಸ್ತಿ ಆಗ್ತಿದೆ ಅಂತ ಕೊರಗ್ತಿರೋವ್ರು ಈ ಟಿಪ್ಸ್ ಫಾಲೋ ಮಾಡಿ ನೆನಪಿನ ಶಕ್ತಿಯನ್ನು ಹೆಚ್ಚಿಸ್ಕೊಳ್ಳಿ…

“ಎಲ್ಲ ಚೆನ್ನಾಗಿ ಬಾಯಿಪಾಠ ಮಾಡಿದ್ದೆ. ಅದೇ ಪ್ರಶ್ನೆ ಬಂದಿತ್ತು.ಆದ್ರೂನೂ ಬರೆಯೋಕೆ ಶುರು ಮಾಡಿದ್ಮೇಲೆ ಏನು ಜ್ಞಾಪಕಕ್ಕೆ ಬರ್ಲಿಲ್ಲ, ನೆನಪಿಸ್ಕೊಳೋ ಅಷ್ಟೋತ್ತಿಗೆ ಟೈಮ್ ಆಗಿ ಹೋಯ್ತು” ಅಂತ ಹೇಳಿರೋ ಮಕ್ಕಳನ್ನು ನಾವು ನೋಡ್ತಾನೆ ಇರ್ತೀವಿ..ಎಲ್ಲೋ ಇಟ್ಟ ಕನ್ನಡಕವನ್ನು ಮತ್ತೆಲ್ಲೋ ಹುಡುಕೋ ವೃದ್ಧರನ್ನು ಕಾಣ್ತಾ ಇರ್ತೀವಿ.

ನಾವು ಓದಿದ, ನೋಡಿದ,ಕೇಳಿದ ಅಂಶಗಳು ನಮ್ಮ ಮಿದುಳಿನಲ್ಲಿ ಸಂಗ್ರಹವಾಗುತ್ತದೆ. ನೆನಪು ಮೆದುಳಿನಲ್ಲಿ ಉಳಿಯಬೇಕಾದರೆ ನಾವು ಕಲಿತ ಜ್ಞಾನ, ಮಾಹಿತಿ, ಕಲಿಯುವವರ ವಯಸ್ಸು, ವರ್ತನೆ, ಗಮನ, ಆಸಕ್ತಿ, ಆಯಾಸ, ಸಾಮರ್ಥ್ಯ, ಸಾಧನೆಗಳನ್ನು ಅವಲಂಭಿಸುತ್ತದೆ.ನಮಗೆ ಚೆನ್ನಾಗಿ ಅರ್ಥವಾದ, ಆಸಕ್ತಿಕರ ವಿಷಯಗಳು ಯಾವುದೇ ಶ್ರಮವಿಲ್ಲದೆ ನಮ್ಮ ನೆನಪಿನ ಭಂಡಾರದಲ್ಲಿ ಉಳಿದುಬಿಡುತ್ತದೆ. ನೆನಪುಗಳನ್ನು ಆಗಾಗ ಮೆಲಕು ಹಾಕುವುದರಿಂದ ಅವು ಅಳಿಸಿಹೋಗುವುದಿಲ್ಲ.

ನೆನಪಿನ ಶಕ್ತಿ ಕ್ಷೀಣಿಸುವುದಕ್ಕೆ ಕಾರಣಗಳು:

 • ನೆನಪಿನ ಶಕ್ತಿ ಕಡಿಮೆಯಾಗಲು ಆಕರ್ಷಣೆಗಳು, ವಿಕರ್ಷಣೆಗಳು, ದುಃಖ ದುಮ್ಮಾನಗಳು, ಬೇಸರಗಳು, ಭಯ, ಆತಂಕಗಳು, ಅನಾರೋಗ್ಯಗಳು ಮುಖ್ಯ ಕಾರಣವಾಗಿವೆ.
 • ನೆನಪಿನ ವರ್ಧನೆಗೆ ಹೀಗೆ ಮಾಡಿರಿ
 • ನಮ್ಮ ನೆನಪಿನ ಶಕ್ತಿ ಚೆನ್ನಾಗಿರಬೇಕಾದರೆ ಮಿದುಳಿಗೆ ಉತ್ತಮ ಪೋಷಣೆ ಅಗತ್ಯ.
 • ನೀವು ಕಲಿಯಬೇಕೆಂಬ ವಿಷಯದ ಬಗ್ಗೆ ನಿಮಗೆ ಆಸಕ್ತಿ ಇರಲಿ.
 • 3 R ವಿಧಾನವನ್ನು ಅನುಸರಿಸಿ, ಅದೇನೆಂದರೆ ರೀಡ್, ರೀವೈಸ್ ಮತ್ತು ರಿವ್ಯೂ. ಅಂದರೆ ಒಮ್ಮೆ ಓದಿ, ಪುನರ್ ಮನನ ಮಾಡಿ ಆಮೇಲೆ ವಿಮರ್ಶೆ ಮಾಡಿ.
 • ಬಿಡುವು ಕೊಟ್ಟು ಕಲಿಯುವುದು ಒಳ್ಳೆಯದು.

 • ಸ್ವಲ್ಪ ಜೋರಾಗಿ ಓದುವುದು ಒಳ್ಳೆಯದು. ಏಕೆಂದರೆ ಓದಿದಾಗ ನಮಗೆ ಕೇಳಿಸಿ ಓದಿದ್ದು ನೆನಪಿನಲ್ಲಿ ಉಳಿಯುತ್ತದೆ.
 • ಯಾವುದಾದರೂ ಅನುಕೂಲಕರವಾದ ಸಮಯವನ್ನು ನಿಗದಿ ಮಾಡಿಕೊಂಡು ಪ್ರತಿದಿನ ಅದೇ ಸಮಯಕ್ಕೆ ಓದಿ,ಬರೆಯುವುದನ್ನು ಮಾಡಿ.
 • ಓದುತ್ತಿರುವಾಗ ಬೇರೆ ಬೇರೆ ಆಕರ್ಷಣೆಗಳು ಇಲ್ಲದಿರಲಿ.
 • ನೀವು ಓದಿರುವ ವಿಷಯವನ್ನು ಸ್ನೇಹಿತರೊಂದಿಗೆ, ಸಹಪಾಠಿಗಳೊಂದಿಗೆ ಚರ್ಚಿಸಿ ನಿಮ್ಮಲ್ಲಿರುವ ಹೆಚ್ಚಿನ ವಿಷಯಗಳನ್ನು ಅವರೊಡನೆ ಹಂಚಿಕೊಳ್ಳಿ.
 • ದೊಡ್ಡ ದೊಡ್ಡ ವಿಷಯಗಳನ್ನು ಸಂಕ್ಷಿಪ್ತಾಕ್ಷರಗಳ ಮೂಲಕ ನೆನಪಿನಲ್ಲಿರಿಸಿಕೊಳ್ಳಿರಿ.
 • ನೀವು ಓದಿದ್ದನ್ನು, ಸನ್ನಿವೇಶಗಳನ್ನು ಮನದಲ್ಲೇ ಚಿತ್ರಿಸಿಕೊಳ್ಳಿ ಇಲ್ಲವಾದಲ್ಲಿ ಅದರ ಕುರಿತ ಚಿತ್ರಗಳನ್ನು ವೀಕ್ಷಿಸಿ ಇದರಿಂದ ಆ ವಿಷಯಗಳು ಬಹು ಕಾಲ ನಿಮ್ಮ ತಲೆಯಲ್ಲಿ ಉಳಿಯುತ್ತವೆ.
 • ಕಲಿತ ಮೇಲೆ ವಿಶ್ರಾಂತಿ, ನಿದ್ರೆಗಳಿಂದ ಓದಿದ್ದು ಮನಸಿನ್ನಲ್ಲಿ ಉಳಿಯಲು ಸಹಾಯಕವಾಗುತ್ತದೆ.