ಮಕ್ಕಳಲ್ಲಿ ಬುದ್ಧಿಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಟಾನಿಕ್ ಮಾತ್ರೆಗಳ ಮೊರೆ ಹೋಗೋ ಮೊದ್ಲು ಈ ಮನೆಮದ್ದುಗಳನ್ನು ಪಾಲಿಸಿ…

0
2762

Kannada News | Health tips in kannada

೧) ಒಂದೆಲಗ ಅಥವಾ ಬ್ರಾಹ್ಮಿ ಸೊಪ್ಪನ್ನು ತೊಳೆದು, ರಸ ತೆಗೆದು ಅರ್ಧ ಕಪ್ ಕಾಯಿಸಿ ಅರಿಶಿನ ಹಾಕಿದ ಹಾಲಿನೊಂದಿಗೆ ಬೆರೆಸಿ ದಿನವೂ ಬೆಳಿಗ್ಗೆ ಸಂಜೆ ಸೇವಿಸುವುದು.
೨) ಬಜೆಯನ್ನು ಜೇನಿನಲ್ಲಿ ತೇಯ್ದು ದಿನವೂ ಅಲ್ಪಪ್ರಮಾಣದಲ್ಲಿ ತಿನಿಸುವುದು.
೩) ತುಳಸಿ ರಸದೊಂದಿಗೆ ಒಂದೆಲಗದ ರಸವನ್ನು ಸೇರಿಸಿ ದಿನಕ್ಕೆ ಒಂದು ಟೀ ಸ್ಪೂನ್ ನಂತೆ ಸೇವಿಸುವುದು.
೪) ಕೊಮ್ಮೆ ಅಥ್ವಾ ಪುನರ್ವವ ಎಂಬ ಗಿಡದ ಬೇರನ್ನು ಕುಟ್ಟಿ ಚೂರ್ಣ ತಯಾರಿಸಿ ಊಟಕ್ಕೆ ಮೊದಲು ಸೇವಿಸಬೇಕು.

೫) ಜವೆಗೋಧಿ ಮತ್ತು ಬೀಜ ರಹಿತ ಖರ್ಜೂರವನ್ನು ನೆನೆಸಿಟ್ಟು, ದೋಸೆಹಿಟ್ಟಿನ ಹದಕ್ಕೆ ರಬ್ಬಿಕೊಂಡು ಒಲೆಮೇಲೆ ಇತ್ತು ಕಾಯಿಸಿದರೆ ಪಾಯಸ ಸಿದ್ದವಾಗುತ್ತದೆ. ಇದಕ್ಕೆ ಹಾಲು, ಸಕ್ಕರೆ, ಗೋಡಂಬಿ, ದ್ರಾಕ್ಷಿ ಬೆರೆಸಿ ಕುಡಿಯಬೇಕು.
೬) ಹಲಸಿನ ತೊಳೆಯ ರಸಾಯನ ಸೇವಿಸಬೇಕು.

source:searchhomeremedy.com

೭) ನೆಲ್ಲಿಕಾಯಿ ಮೊರಬ್ಬದ ಸೇವನೆ ಜ್ಞಾಪಕ ಶಕ್ತಿಯನ್ನು ಉತ್ತಮಪಡಿಸುತ್ತದೆ.
೮) ಚೂರು ಹಸಿ ಶುಂಠಿ, ಜೀರಿಗೆ, ಮತ್ತು ಕಲ್ಲುಸಕ್ಕರೆಯನ್ನು ದಿನಕ್ಕೆರಡು ಸಲ ಜಗಿದು ತಿನ್ನಬೇಕು.

 

benefits-of-ginger-for-skin-2

೯) ಊಟದ ಬಳಿಕ ಸೇಬು ಹಣ್ಣನ್ನು ತಿಂದಲ್ಲಿ ಬುದ್ಧಿಶಕ್ತಿ ಹೆಚ್ಚಾಗುವುದು.
೧೦) ದಾಲ್ಚಿನ್ನಿ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ನಿಯಮಿತವಾಗಿ ಸೇವಿಸುವುದರಿದಲೂ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.

Also Watch:

೧೧) ನೆನೆಸಿ ಹುರಿದ ಉದ್ದಿನಬೇಳೆಯನ್ನು ರಾಗಿ ರೊಟ್ಟಿ, ಚಪಾತಿಗಳೊಂದಿಗೆ ನಿಯಮಿತವಾಗಿ ಸೇವಿಸುವುದರಿಂದ ಸ್ಮರಣ ಶಕ್ತಿ ಅಧಿಕವಾಗುತ್ತದೆ.
೧೨) ಮೆಂತ್ಯೆ ಸೊಪ್ಪನ್ನು ಉಪ್ಪು ಮತ್ತು ಮೂಲಂಗಿ ತುರಿಯೊಂದಿಗೆ  ಬೆರೆಸಿ ಮೆಣಸು ಜೀರಿಗೆಗಳ ಒಗ್ಗರಣೆ ಮಾಡಿಕೊಂಡು ಮಾಡಿಕೊಂಡು ಸೇವಿಸಿದ್ದಲ್ಲಿ ಮಕ್ಕಳು ಬುದ್ಧಿವಂತಯಾರಾಗುವುದರಲ್ಲಿ ಸಂಶಯವೇ ಇಲ್ಲ..

Also Read: ಗರುಗದ ಗಮ್ಮತ್ತು ಗೊತ್ತಾದ್ರೆ ಗಿಡ ಬೆಳ್ಸೋದು ಗ್ಯಾರಂಟೀ…ಅಷ್ಟಿಲ್ಲದೆ ಕರೀತಾರ ಭೃಂಗರಾಜ ಅಂತ..