ರಜೆಯಲ್ಲಿ ಮಕ್ಕಳ ಮೆನೆ ಸದಾ ಒಂದು ಕಣ್ಣು ಇಟ್ಟಿರಿ.. ಈ ಐದು ವಿಷಯಗಳು ನಿಮ್ಮ ಗಮನದಲ್ಲಿದ್ದರೆ, ನಿಮ್ಮ ಮಕ್ಕಳು ಸುರಕ್ಷಿತವಾಗಿರುತ್ತಾರೆ..

0
1122

ರಜೆಯಲ್ಲಿ ಮಕ್ಕಳನ್ನು ನಿಭಾಯಿಸುವುದೇ ಹೆತ್ತವರಿಗೆ ಒಂದು ದೊಡ್ಡ ತಲೆನೋವಿನ ಕೆಲಸವಾಗಿದೆ.. ಹೌದು ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ರಜೆಯಲ್ಲಿ ಆಡುವುದಕಿಂತ ಹೆಚ್ಚಾಗಿ ಅನಾಹುತ ಗಳನ್ನು ಮಾಡಿಕೊಂಡಿರುವುದೇ ಹೆಚ್ಚು.. ಅದಕ್ಕಾಗಿಯೇ ಮಕ್ಕಳ ಮೇಲೆ ಹೆಚ್ಚು ಗಮನ ವಹಿಸಬೇಕಿದೆ.. ಮಕ್ಕಳನ್ನು ಜೋಪಾನವಾಗಿರಿಸಲು ರಜೆಯಲ್ಲಿ ಪೋಷಕರು ಮಾಡಬೇಕಿರುವ 5 ಮುಖ್ಯ ಕೆಲಸಗಳು..

1.ಮಕ್ಕಳನ್ನು ನೀರಿನ ಜಾಗದಲ್ಲಿ ಆಡಲು ಬಿಡಬೇಡಿ..

ಮೊನ್ನೆ ಮೊನ್ನೆ ತಾನೆ ಶಿವಮೊಗ್ಗದಲ್ಲಿ ದಸರಾ ರಜೆ ಸವಿಯಲು ಈಜಲು ಹೋಗಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ ದುರ್ಘಟನೆ ನಡೆದಿದೆ.. ಇದು ಒಂದೇ ಉದಾಹರಣೆಯಲ್ಲ ಈ ರೀತಿಯ ಅನಾಹುತಗಳು ಸಾಮಾನ್ಯವಾಗಿ ಬಿಟ್ಟಿವೆ.. ಅದಕ್ಕಾಗಿಯೇ ಮಕ್ಕಳನ್ನು ನೀರಿನ ಬಳಿ ಬಿಡಬೇಡಿ.. ಅವರಿಗೆ ಅದರಿಂದಾಗುವ ಅನಾಹುತದ ಬಗ್ಗೆ ತಿಳಿಸಿ ಹೇಳಿ.. ಅಕಸ್ಮಾತ್ ಬಿಟ್ಟರೂ ನೀವು ಜೊತೆಯಲ್ಲಿ ಹೋಗಿ ನೋಡಿಕೊಳ್ಳಿ.. ಅವರ ಸುರಕ್ಷತೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ..

2.ರಸ್ತೆ ಬದಿಯಲ್ಲಿ ಸೈಕಲ್ ತುಳಿಯಲು ಬಿಡಬೇಡಿ..

ಮಕ್ಕಳು ರಜೆಯಲ್ಲಿ ಹೆಚ್ಚಿಗೆ ಮಾಡುವುದೇ ಈ ಕೆಲಸ.. ಹೈ ವೇ ಅಥವಾ ಮೈನ್ ರೋಡ್ ಗಳಲ್ಲಿ ಬರುವ ಹೆವಿ ವೆಹಿಕಲ್ ಗಳ ಸ್ಪೀಡ್ ಊಹಿಸಲೂ ಅಸಾಧ್ಯ.. ನಮ್ಮ ಮುಂಜಾಗ್ರತೆಯಲ್ಲಿ ನಾವಿದ್ದರೇ ಒಳ್ಳೆಯದು.. ಹಾಗಂತ ಅವರು ಸೈಕಲ್ ಓಡಿಸಲೇ ಬಾರದು ಎಂದೇನಿಲ್ಲ.. ಅದಕ್ಕಾಗಿಯೇ ಕೆಲವು ಖಾಲಿ ಜಾಗಗಳಿರುತ್ತವೆ ಅಲ್ಲಿ ಮಕ್ಕಳನ್ನು ಸೈಕಲ್ ತುಳಿಯಲು ಬಿಡಿ..

3. ಮಕ್ಕಳನ್ನು ಪಾರ್ಕ್ ಗೆ ಕರೆದುಕೊಂಡು ಹೋಗಿ..

ಮಕ್ಕಳಿಗೂ ಸ್ನೇಹಿತರ ಜೊತೆ ಬೆರೆಯಬೇಕು ಅನ್ನಿಸುತ್ತದೆ.. ಒಂಟಿತನ ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.. ಅದಕ್ಕಾಗಿಯೇ ಅವರನ್ನು ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ಮಕ್ಕಳ ಜೊತೆ ಆಡಲು ಬಿಡಿ.. ಪಾರ್ಕ್ ಎಂದರೇ ಸೇಫ್ ಆಗೂ ಇರುತ್ತದೆ.. ನಮಗೂ ನಿರಾಳ.. ಮಕ್ಕಳಿಗೂ ಖುಷಿಯಾಗುತ್ತದೆ..

4.ಅವರ ಕಂಪ್ಯೂಟರ್ ಮೊಬೈಲ್ ಪರ್ಸನಲ್ ರೂಮ್ ಗಳನ್ನು ಆಗಾಗ ಚೆಕ್ ಮಾಡುತ್ತಿರಿ..

ಈಗಿನ ಮುಂದುವರಿದ ಯುಗದಲ್ಲಿ ಮಕ್ಕಳು ಹಾಳಾಗುವುದೇ ಇದರಿಂದ.. ಇದನ್ನೂ ಉಪಯೋಗಿಸಿಕೊಂಡು ಬೆಳೆದವರೂ ಇದ್ದಾರೆ.. ಮಕ್ಕಳು ಈಗ ಸ್ವಲ್ಪ ಹೈ ಸ್ಕೂಲ್ ಮಟ್ಟಕ್ಕೆ ಬಂದರೆ ಸಾಕು ಅವರ ಕೈಯಲ್ಲಿ ಮೊಬೈಲ್ ಕಂಪ್ಯೂಟರ್ ಇತ್ಯಾದಿ.. ರಜೆಯಲ್ಲಿ ಕೇಳಲೇಬೇಕಿಲ್ಲ.. ಇದರಿಂದ ಮಕ್ಕಳು ಅಡಲ್ಟ್ ಜಾಲತಾಣಗಳನ್ನು ವೀಕ್ಷಿಸುವುದೂ ಉಂಟು.. ಅವರಿಗೆ ಪ್ರೈವೆಸಿ ಇರಲಿ ಎಂದೂ ಬಿಡಬೇಡಿ ಅವರು ಮಾಡುವ ಪ್ರತಿಯೊಂದು ಕೆಲಸದ ಮೇಲೂ ಜಾಗ್ರತೆ ವಹಿಸಿ..

5.ಮಕ್ಕಳಿಗೆ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿ..

ಬರಿ ಓದುವುದು ಮಾತ್ರವಲ್ಲ.. ರಜೆಯಲ್ಲಿ ಮಕ್ಕಳಿಗೆ ಏನು ಇಷ್ಟವೊ ಆ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೂ ಪ್ರೋತ್ಸಾಹಿಸಿ.. ಡ್ರಾಯಿಂಗ್ ಆಗಿರಬಹುದು.. ಪೇಯ್ಟಿಂಗ್ ಆಗಿರಬಹುದೂ ಅಥವಾ ಬೇರೆ ಏನೇ ಇರಲಿ ಅವರನ್ನು ಪ್ರೋತ್ಸಾಹಿಸಿ..

ಮಕ್ಕಳು ನಮ್ಮ ಆಸ್ಥಿ ಜೋಪಾನವಾಗಿ ಕಾಪಾಡಿಕೊಳ್ಳಿ.. ಒಳ್ಳೆ ಮಾಹಿತಿ ಎನಿಸಿದರೇ ಶೇರ್ ಮಾಡಿ ಇತರರಿಗೂ ಉಪಯೋಗವಾದೀತು..