ವಯಸ್ಸಿನ್ನು 35 ದಾಟಿಲ್ಲ ಆಗಲೇ ಹೊಟ್ಟೆ ಬಂದಿದೆ ಎಂದು ಕೊರಗುತ್ತಿದ್ದೀರಾ?? ಸುಲಭ ಮಾರ್ಗ ದಲ್ಲಿ ಬೊಜ್ಜು ಕರಗಿಸಿ..

0
5180

ಶೇರ್ ಮಾಡಿ ನಿಮ್ಮ ಹೊಟ್ಟೆ ಬಂದಿರುವ ಗೆಳೆಯನಿಗೂ ಸಹಾಯವಾಗಬಹುದು 🙂 🙂

ವಯಸ್ಸಿನ್ನೂ 35 ದಾಟಿಲ್ಲ ಗುರು ಆಗಲೇ ಹೊಟ್ಟೆ ಬಂದಿದೆ ನೋಡು ಎಂದು ಹೇಳಿಕೊಳ್ಳಬೇಕೆಂದೆನಿಸಿದರೂ ಹೇಳಲಾಗದು ಹೌದು ತಾನೆ.. ಇನ್ನು ಮುಂದೆ ಆ ಹಿಂಜರಿಕೆಯನ್ನು ಬಿಡಿ ಈ ಅಭ್ಯಾಸವನ್ನು ರೂಡಿಸಿಕೊಳ್ಳಿ..

1. ರಾತ್ರಿ ಹೊತ್ತು ನಿದ್ರೆಗೆ ಪ್ರಾಮುಖ್ಯತೆ ಕೊಡಿ

ರಾತ್ರಿ ಹೊತ್ತು ಸಾಕಷ್ಟು ನಿದ್ರೆ ಮಾಡಿ..
ಈಗಿನ ಕಾಲದ್ ಹುಡುಗರೊ ಆ ಮೊಬೈಲ್ ಹಿಡಿದುಕೊಂಡು ಬಿಟ್ಟರೆ ನಿದ್ರೆ ಮಾಡುವುದು ರಾತ್ರಿ 12 ಆದರು ಆಯಿತು.. 1 ಘಂಟೆ ಆದರೂ ಆಯಿತು.. ಅದನ್ನೆಲ್ಲಾ ಪಕ್ಕಕ್ಕಿಟ್ಟು ಚನ್ನಾಗಿ ನಿದ್ರೆ ಮಾಡಿ.

2. ಬೆಳಗಿನ ಉಪಹಾರ ಅತಿ ಮುಖ್ಯ.

ಬೆಳಗ್ಗಿನ ತಿಂಡಿಯನ್ನು ನಿರ್ಲಕ್ಷಿಸಬೇಡಿ.. ಉಪಹಾರ ಸೇವನೆ ತಪ್ಪಿದರೆ ಗ್ಯಾಸ್ಟ್ರಿಕ್ ಆಗಿ ಹೊಟ್ಟೆ ಬೇಗನೆ ಬರುವುದು.. ಎಷ್ಟೇ ಕೆಲಸದ ಒತ್ತಡವಿದ್ದರೂ ತಿಂಡಿ ತಿಂದು ಆಫೀಸ್ ಗೆ ಹೊರಡಿ..

3. ಡಯಟ್ ಗೆ ಗುಡ್ ಬೈ ಹೇಳಿ..

ಊಟ ಬಿಟ್ಟು ಸಣ್ಣ ಆಗಲು ಪ್ರಯತ್ನಿಸಬೇಡಿ.. ಸಾಕಷ್ಟು ತಿನ್ನಿ ಸ್ವಲ್ಪ ವ್ಯಾಯಾಮ ಮಾಡಿ.. ವಯಸ್ಸಾದಮೇಲೂ ಯಂಗ್ ಆಗಿ ಕಾಣಬೇಕಿದ್ದರೆ ವ್ಯಾಯಾಮ ಅತಿ ಮುಖ್ಯ.

4. ಗ್ರೀನ್ ಟೀ ಅಭ್ಯಾಸ ಮಾಡಿಕೊಳ್ಳಿ

ಕಡಿಮೆ ಸಮಯದಲ್ಲಿ ನಿಮ್ಮ ಬೊಜ್ಜು ಕರಗ ಬೇಕಾದರೆ ಗ್ರೀನ್ ಟೀ ಅಭ್ಯಾಸ ಮಾಡಿಕೊಳ್ಳಿ.. ಕುಡಿಯಲು ಕಹಿ ಅನಿಸಿದರು ದೇಹದ ಆರೋಗ್ಯಕ್ಕೆ ಅದುವೊಂದು ರೀತಿಯ ಸಂಜೀವಿನಿ ಇದ್ದ ಹಾಗೆ.. ಉಪಯೋಗಿಸಿ ಪರಿಣಾಮ ನೀವೆ ನೋಡಿ..

5. ಆದಷ್ಟು ವಾಕ್ ಮಾಡಿ

200 ಮೀಟರ್ ದೂರದಲ್ಲಿರುವ ಚಿಲ್ಲರೆ ಅಂಗಡಿಗೆ ಹೋಗಬೇಕಾದರೂ ಬೈಕ್ ತೆಗೆದುಕೊಂಡು ಹೋಗುವುದನ್ನು ನಿಲ್ಲಿಸಿ.. ಸಾದ್ಯವಾದಷ್ಟು ವಾಕ್ ಮಾಡಿ..

ಆಲ್ ದಿ ಬೆಸ್ಟ್ ಬೇಗ ನಿಮ್ಮ ಹೊಟ್ಟೆ ಕರಗಲಿ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840