ನಿಮ್ಮ ಆಫೀಸ್ ಕೆಲಸ ಮಾಡಿಕೊಂಡೆ ನೀವು ಮತ್ತೆ ಬೇರೆಕಡೆಯಿಂದ ಹೆಚ್ಚು ಹಣಗಳಿಸಬಹುದು ಅನ್ನೋದು ಇಲ್ಲಿದೆ ನೋಡಿ..!

1
1370

ಇದೇನಪ್ಪ ಹೀಗೆ ಹೇಳ್ತಿದೀರಾ ಅಂತ ಯೋಚನೆ ಮಾಡ್ತಿದೀರಾ ಹೇಗೆ ಹಣ ಗಳಿಸಬುದು ಅನ್ನೋದು ಇಲ್ಲಿದೆ ನೋಡಿ.
ನೀವು ನಿಮ್ಮ ಆಫೀಸ್ ಕೆಲಸ ಮಾಡಿಕೊಂಡೆ ಬೇರೆಕಡೆ ಕೆಲಸ ಮಾಡಬುದು ಮತ್ತು ಅದರಿಂದ ನೀವು ಹೆಚ್ಚು ಹಣವನ್ನು ಸಹ ಗಳಿಸಬುದು.

ನೀವು ಹಣಗಳಿಸುವ ಸುಲಭ ಮಾರ್ಗಗಳು ಇಲ್ಲಿವೆ ನೋಡಿ:

೧.ವಿಶಿಷ್ಟ ರೀತಿಯ ಮಾತು ಜನ ಮೆಚ್ಚುವಂತಹ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ.

ಎಸ್ ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಇರುವುದು ಎಲ್ಲರಿಗು ಗೊತ್ತಿರುವ ವಿಚಾರ ಹೀಗಿರುವಾಗ ನೀವು ಒಂದು ನೀವು ವಿಡಿಯೋ ಅಪಲೋಡ್ ಮಾಡಿದರೆ ಅದನ್ನು ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್ ಮತ್ತು ಟ್ವಿಟ್ಟರ್ ಮೂಲಕ ಪ್ರಚಾರ ಮಾಡಿ ಮಾರುಕಟ್ಟೆ ಮಾಡಬಹುದು.

ಹಣ ಗಳಿಸುವ ಟ್ಯಾಬ್ ಕ್ಲಿಕ್ ಮಾಡುವುದರ ಮುಖೇನ ನೀವು ಆ ವಿಡಿಯೋ ಮೇಲೆ ಹಣವನ್ನು ಗಳಿಸಬಹುದಾಗಿದೆ. ಎಷ್ಟು ವ್ಯಕ್ತಿಗಳು ಎಷ್ಟು ಬಾರಿ ಆ ವಿಡಿಯೋ ಟ್ಯಾಬ್ ಕ್ಲಿಕ್ ಮಾಡುತ್ತಾರೆ ಹಾಗೂ ನೋಡುತ್ತಾರೆ ಎಂಬುದರ ಮೇಲೆ ನಿಮಗೆ ಹಣ ದೊರೆಯುತ್ತದೆ. ನಿಮ್ಮ ಯುಟ್ಯೂಬ್ ಚಾನೇಲ್ ಮೂಲಕ ಹಣ ಗಳಿಸಬೇಕೆಂದರೆ ಆಡ್ಸೆನ್ಸ್ ಖಾತೆ(AdSense account) ಹೊಂದಿರಬೇಕಾಗುತ್ತದೆ. ಕೆಲಸ ಇಲ್ಲದ ಹೆಚ್ಚುವರಿ ಸಮಯದಲ್ಲಿ ಜನರು ವಿಡಿಯೋಗಳನ್ನು ವಿಕ್ಷಿಸುವುದರಿಂದ ಮತ್ತು ಜಾಹೀರಾತುಗಳ ಮೇಲೆ ಕ್ಲಿಕ್ ಮಾಡುವುದರಿಂದ ನೀವು ಹಣ ಸಂಪಾದಿಸಬಹುದಾಗಿದೆ.

೨.ಆನ್ಲೈನ್ ಬರವಣಿಗೆ ಮಾಡಿ:


ಅನೆಕ ಆನ್ಲೈನ್ ಪೋರ್ಟಲ್ ಗಳು ಎಸ್ಇಓ ಸಂಬಂಧಿತ ಸಂಗತಿಗಳನ್ನು ಬಯಸುತ್ತವೆ. ಅವು ಒಂದು ಪದಕ್ಕೆ 1 ರೂ.ವರೆಗೆ ಕೊಡುತ್ತಾರೆ. ಒಂದು ಪದಕ್ಕೆ ರೂ. 0.25-0.50 ವರೆಗೆ ಇದರ ವ್ಯಾಪ್ತಿ ಇರುತ್ತದೆ. ಅನೇಕ ವ್ಯಕ್ತಿಗಳು ಇಂತಹ ಕೆಲಸದ ಮೂಲಕ ಹಣವನ್ನು ಸಂಪಾದಿಸುತ್ತಿದ್ದಾರೆ.

೩.ಯೋಗ ತರಗತಿಗಳು:


ನೀವು ಯೋಗದಲ್ಲಿ ಪರಿಣಿತರಾಗಿದ್ದಲ್ಲಿ ನಿಮ್ಮ ಬಿಡುವಿನ ವೇಳೆಯಲ್ಲಿ ಅಂದರೆ ಬೆಳಿಗ್ಗೆ 8ರ ಒಳಗಾಗಿ ಮತ್ತು ಸಂಜೆ 6ರ ನಂತರ ಯೋಗ ತರಗತಿಗಳನ್ನು ತೆಗೆದುಕೊಳ್ಳಬಹುದು. ಕೆಲವರಿಗೆ ಮನೆಮನೆಗೆ ಹೋಗಿಯೂ ಯೋಗ ಮತ್ತು ಥೇರಪಿಗಳನ್ನು ಹೇಳಿಕೊಡಬಹುದು. ಇಂತಹ ಐದಾರು ಮನೆಗಳ ಸಂಪರ್ಕ ಇಟ್ಟುಕೊಂಡರೆ ಹೆಚ್ಚು ಹಣವನ್ನು ಗಳಿಸಬಹುದು.

೪.ರಾತ್ರಿ ಉದ್ಯೋಗ:


ನಿಮ್ಮ ಆಪಿಸ್ ಕೆಲಸ ಮುಗಿಸಿಕೊಂಡು ನೀವು ರಾತ್ರಿ ಸಮಯದಲ್ಲಿ ಕೆಲಸ ಮಾಡುವ ಶಕ್ತಿ ನಿಮ್ಮಲ್ಲಿ ಇದ್ರೆ ಬಾರ್, ರೆಸ್ಟೋರೆಂಟ್ ಮತ್ತು ಡಿಜೆ ಮುಂತಾದ ಕೆಲಸಗಳನ್ನು ಮಾಡಬಹುದು.

೫.ಡೇಟಾ ಎಂಟ್ರಿ ಮಾಡಿ:
ನಿಮ್ಮ ಕೆಲಸ ಮುಗಿದ ಸಮಯದಲ್ಲಿ ನೀವು ಪ್ರೀ ಇದ್ರೆ ನಿಮ್ಮ ಕೆಲಸ ಮಾಡುವ ಆಸಕ್ತಿ ಇದ್ರೆ ಬೇರೆ ಕಡೆಗಳಲ್ಲಿ ನೀವು ಡೇಟಾ ಎಂಟ್ರಿ ಕೆಲಸ ಮಾಡುವುದರಿಂದ ಹೆಚ್ಚು ಹಣಗಳಿಸಬುದು.