ತಿಂದಷ್ಟು ರುಚಿ ಕೊಡುವ ನಿಪ್ಪಟ್ಟು ಮಾಡುವ ವಿಧಾನ

0
9093

ಬೇಕಾಗುವ ಸಾಮಗ್ರಿಗಳು:

 • ಅಕ್ಕಿ ಹಿಟ್ಟು – ಒಂದು ಬಟ್ಟಲು
 • ಹುರಿಗಡಲೆ ಹಿಟ್ಟು – ಎರಡು ದೊಡ್ಡ ಚಮಚ
 • ಕಡಲೆ ಹಿಟ್ಟು – ಒಂದೆರಡು ಚಮಚ
 • ಮೈದಾ ಹಿಟ್ಟು – ಅರ್ಧ ಬಟ್ಟಲು
 • ಕರಿಬೇವಿನಸೊಪ್ಪು-ಸಣ್ಣಗೆ ಮುರಿದಿದ್ದು
 • ಕಡ್ಲೆಕಾಯಿ ಬೀಜಗಳು – ಸ್ವಲ್ಪ
 • ಹುರಿಗಡಲೆ- ಸ್ವಲ್ಪ
 • ಎಳ್ಳು ಸ್ವಲ್ಪ
 • ಅಚ್ಚಕಾರದ ಪುಡಿ ರುಚಿಗೆ
 • ಉಪ್ಪು ರುಚಿಗೆ ತಕಷ್ಟು

ತಯಾರಿಸುವ ವಿಧಾನ:

 1. ಅಕ್ಕಿಹಿಟ್ಟು,ಮೈದಾಹಿಟ್ಟು,ಹುರಿಗಡಲೆ ಹಿಟ್ಟು,ಕಡ್ಲೆಹಿಟ್ಟು,ಕಡ್ಲೆಕಾಯಿಬೀಜ (ಕಡ್ಲೆಕಾಯಿಬೀಜಗಳನ್ನು ಸ್ವಲ್ಪ ದಪ್ಪವಾಗಿ ಕುಟ್ಟಿಹಾಕಿ),ಹುರಿಗಡಲೆ, ಕರಿಬೇವು,ಎಳ್ಳು,ಉಪ್ಪು,ಕಾರದ ಪುಡಿ ಮತ್ತು ಕಾಯಿಸಿರುವ ಎರಡು ಚಮಚ ಎಣ್ಣೆಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಿ.
 2. ಅದಕ್ಕೆ ನೀರು ಹಾಕಿ ಮೃದುವಾಗಿ ಕಲೆಸಿಕೊಳ್ಳಿ.
 3. ಕಲೆಸಿದ ಹಿಟ್ಟನ್ನು ಚೆನ್ನಾಗಿ ನಾದಿ.
 4. ಅದರಿಂದ ದಪ್ಪ ಗೋಲಿ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಕವರ್ ಅಥವಾ ಬಾಳೆದೆಲೆ / ಅಲ್ಯುಮಿನಿಯಂ ಫಾಯಿಲ್ ಮೇಲೆ ಉಂಡೆಗಳನ್ನು ಸಣ್ಣ ಪೂರಿಯಂತೆ,ಕೈನಿಂದಲೇ ಅದುಮಿಕೊಂಡು ಪುಟ್ಟ ಪುಟ್ಟದಾಗಿ ತಟ್ಟಿ. ಸ್ವಲ್ಪ ದಪ್ಪವಿರಲಿ.
 5. ಕಾದಿರುವ ಎಣ್ಣೆಗೆ ಹಾಕಿ ಎರಡು ಬದಿ ಬೇಯಿಸಿ. ಹೊಂಬಣ್ಣ ಬರುವವರೆಗೂ ಕರಿಯಿರಿ.

ನಂತರ ರುಚಿಯಾದ ನಿಪ್ಪಟ್ಟು ಸವಿಯಲು ಸಿದ್ದ