ಚಪಾತಿ ಗಟ್ಟಿಯಾಗುತ್ತಿದೆಯಾ? ಮೆತ್ತನೆಯ ಚಪಾತಿ ಹೇಗೆ ಮಾಡೋದು ಅಂತ ಹೇಳ್ತಿವಿ.. ಮುಂದೆ ಓದಿ..

0
2497

ನೀವು ಮನೇಲಿ ಮಾಡುವ ಚಪಾತಿ ಗಟ್ಟಿಯಾಗಿ ತಿನ್ನಲು ಹಿಡಿಸದಿರುವ ಚಪಾತಿಯನ್ನು ಮಾಡುತ್ತಿದ್ದೀರಾ..?

ಸಾಮಾನ್ಯವಾಗಿ ಮಕ್ಕಳು ಅಥವಾ ಮನೆಯವರು ಚಪಾತಿ ಮೃದುವಾಗಿರಲು ಇಷ್ಟ ಪಡುತ್ತಾರೆ, ಗಟ್ಟಿಯಾಗಿರೋ ಚಪಾತಿ ತಿನ್ನಲು ಮೂಗು ಮುರಿಯುತ್ತಾರೆ. ನಿಮ್ಮ ಮನೇಲೂ ಕೂಡ ಇದೆ ರೀತಿ ಯಾಗಿದ್ದಾರೆ ಚಿಂತೆ ಬಿಡಿ ಇಲ್ಲಿದೆ ನೋಡಿ ನಿಮಗೆ ಕೆಲವು ಟಿಪ್ಸ್….

ಮೆತ್ತನೆಯ ಹಾಗು ಮೃದುವಾದ ಚಪಾತಿ ಮಾಡುವ ವಿಧಾನ:

ಅಗತ್ಯವಿರುವ ಸಮಾಗ್ರಿಗಳು:

 • ಗೋಧಿ ಹಿಟ್ಟು
 • ನೀರು
 • ಉಪ್ಪು
 • ಎಣ್ಣೆ (ಸ್ವಲ್ಪ ಪ್ರಮಾಣದಲ್ಲಿ)

ಮಾಡುವ ವಿಧಾನ:

 

 1. ಮೊದಲು ಒಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ಹಾಕಿ. ಇದಕ್ಕೆ ಕೊಂಚ ಉಪ್ಪು ಹಾಕಿ ಸ್ವಲ್ಪ ಅವಲ್ಪ ನೀರನ್ನು ಹಾಕುತ್ತ ಕಲಸಿ.ಕಲಸಿದ ಹಿಟ್ಟನ್ನು ಸುಮಾರು ಹತ್ತು ನಿಮಿಷ ನಾದಿ(ಚೆನ್ನಾಗಿ ನಾದಬೇಕು).
 2. ನಾದಿದ ಹಿಟ್ಟನ್ನು ೧೦ ನಿಮಿಷ ನೆನೆಯಲು ಬಿಡಿ. (ಒಂದು ಬಟ್ಟೆಯಿಂದ ಅಥವಾ ಪ್ಲಾಸ್ಟಿಕ್ ಕಾವೇರ್ನಿಂದ ಹಿಟ್ಟನ್ನು ಮುಚ್ಚಿಡಿ)
 3. ನಂತರ ಹಿಟ್ಟನ್ನು ಒಂದೇ ಪ್ರಮಾಣದಲ್ಲಿ ಉಂಡೆಯಾಗಿ ಮಾಡಿಕೊಳ್ಳಿ. ನಂತರ ಕೊಂಚ ಹಿಟ್ಟನ್ನು ಚಪಾತಿ ಮಣೆಯ ಮೇಲೆ ಹರಡಿ ಹಿಟ್ಟಿನ ಉಂಡೆಯನ್ನು ಲಟ್ಟಣಿಗೆ ಉಪಯೋಗಿಸಿ ವೃತ್ತಾಕಾರದಲ್ಲಿ ಲಟ್ಟಿಸಿ.
  ಸೂಚನೆ: ಮಣೆಯ ಮೇಲೆ ಹರಡಲು ಹೆಚ್ಚು ಹಿಟ್ಟು ಬಳಸಬಾರದು. ಇಲ್ಲಿ ಚಪಾತಿ ಮಣೆಗೆ ಅಂಟಿಕೊಳ್ಳದಿರುವಷ್ಟು ಮಾತ್ರ ಉಪಯೋಗಿಸಿದರೆ ಸಾಕು. ಹೆಚ್ಚಾದಷ್ಟೂ ಚಪಾತಿ ಗಟ್ಟಿಯಾಗುತ್ತಾ ಹೋಗುತ್ತದೆ.
 4. ದಪ್ಪತಳದ ಕಾವಲಿಯಲ್ಲಿ ಲಟ್ಟಿಸಿದ ಚಪಾತಿಯನ್ನು ಮಧ್ಯಮ ಉರಿಯಲ್ಲಿ ಬೇಯಿಸಿ. ಮೊದಲ ಭಾಗ ಕೊಂಚ ಬೇಯುತ್ತಿದ್ದಂತೆಯೇ (ಸ್ವಲ್ಪ ಪ್ರಮಾಣದಲ್ಲಿ ಉಬ್ಬುವ ಹಾಗೆ) ತಿರುವಿ ಇನ್ನೊಂದು ಬದಿಯನ್ನು ಬೇಯಲಿಡಿ. ಬಳಿಕ ಮೊದಲ ಭಾಗ ಮೇಲೆ ಬರುವಂತೆ ತಿರುವಿ ಕೊಂಚವೇ ಎಣ್ಣೆಯನ್ನು ಚಮಚದಿಂದ ಸವರಿ.
 5. ಈಗ ಮತ್ತೊಮ್ಮೆ ತಿರುವಿ ಇನ್ನೊಂದು ಬದಿಗೂ ಎಣ್ಣೆ ಸವರಿ. ಪೂರಿಯಂತೆ ಉಬ್ಬಲು ಮರದ ಚಮಚ ಅಥವಾ ಸಟ್ಟುಗದಿಂದ ನಡುಭಾಗದಲ್ಲಿ ಕೊಂಚವೇ ಒತ್ತಡ ನೀಡಿ.

ಈಗ ಮೃದುವಾದ ಚಪಾತಿಗಳು ಸಿದ್ಧ. ನಿಮ್ಮ ನೆಚ್ಚಿನ ಪಲ್ಯ, ಸಾಗು, ಮೊದಲಾದವುಗಳೊಂದಿಗೆ ಸೇವಿಸಿ.