ಇಂಕ್ ಮಾರ್ಕ್ ಬಿದ್ದಿರುವ ಬಟ್ಟೆಗಳಲ್ಲಿ ಮಾರ್ಕ್ ಹೋಗಿಸುವುದು ಹೇಗೆ?? ಇಲ್ಲಿದೆ ನೋಡಿ 3 ಸಿಂಪಲ್ ವಿಧಾನ..

0
1790

ಇದೊಂದು ತಲೆನೋವಿನ ತೊಂದರೆ.. ಸಾವಿರಾರು ರೂಪಾಯಿಗಳನ್ನು ಕೊಟ್ಟು ಶರ್ಟ್ ಖರೀದಿಸಿರುತ್ತೇವೆ ಆದರೇ ನಮ್ಮ ಸಣ್ಣ ನಿರ್ಲಕ್ಷ್ಯ ದಿಂದ ಹೇಗೋ ಇಂಕ್ ಅದರ ಮೇಲೆ ಬಿದ್ದಿರುತ್ತದೆ.. ಮತ್ತೆ ಆ ಶರ್ಟ್ ಧರಿಸಬೇಕೆಂದರೆ ಮುಜಗರಕ್ಕೆ ಒಳಗಾಗಬೇಕಾಗುತ್ತದೆ.. ಆ ರೀತಿಯ ಮಾರ್ಕ್ ಗಳನ್ನು ಹೋಗಲಾಡಿಸಲು ಈ ರೀತಿಯ ವಿಧಾನವನ್ನು ಬಳಸಿ..

ಚಾಕ್ ಪೀಸ್

ಅತಿ ಕಡಿಮೆ ದರದಲ್ಲಿ ಇಂಕ್ ಮಾರ್ಕ್ ಹೋಗಲಾಡಿಸಲು ಇದೊಂದು ಸುಲಭ ವಿಧಾನ.. ಇಂಕ್ ಆಗಿರುವ ಜಾಗದಲ್ಲಿ ಚಾಕ್ ಪೀಸ್ ಪೌಡರ್ ಅನ್ನು ಹಾಕಿ ರಬ್ ಮಾಡಿ ನಂತರ ನಿಧಾನ ವಾಗಿ ಆ ಜಾಗ ವನ್ನು ಸೋಪಿನಿಂದ ತೊಳೆಯಿರಿ.. ಇಂಕ್ ಮಾರ್ಕ್ ಕ್ರಮೇಣ ಕಡಿಮೆ ಯಾಗಿ ಮತ್ತೆ ನಿಮ್ಮ ಉಡುಪು ಮೊದಲಿನ ಸ್ಥಿತಿಗೆ ಬರುವುದು..

ನಿಂಬೆ ಹಣ್ಣು

ಇಂಕ್ ಮಾರ್ಕ್ ಬಿದ್ದಿರುವ ಜಾಗಕ್ಕೆ ನಿಂಬೆ ಹಣ್ಣನ್ನು ಹಾಕಿ ಸ್ವಲ್ಪ ಹೊತ್ತು ಬಿಸಿನೀರಿನಲ್ಲಿ ನೆನೆಸಿಡಿ.. ಆನಂತರ ಸೋಪ್ ಹಾಕಿ ನಿಧಾನವಾಗಿ ಬ್ರಶ್ ಮಾಡಿ ತೊಳೆಯಿರಿ.. ನಿಮ್ಮ ಶರ್ಟ್ ಮಾರ್ಕ್ ಹೋಗಲಾಡಿಸಿ ಮರಳಿ ಧರಿಸುವ ಸ್ಥಿತಿಗೆ ಬರುವುದು..

ಟೂತ್ ಪೇಸ್ಟ್

ಇದೂ ಕೂಡ ಕಡಿಮೆ ದರದಲ್ಲಿ ಸುಲಭವಾಗಿ ಮಾರ್ಕ್ ಹೋಗಲಾಡಿಸಲು ಅತ್ಯುತ್ತಮ ಉಪಾಯ.. ಆದರೆ ನೆನಪಿಡಿ ಮಾರ್ಕ್ ಹೋಗಿಸಲು ಬಿಳಿಯ ಪೇಸ್ಟ್ ಅನ್ನು ಮಾಯ್ರ ಬಳಸಬೇಕು.. ಒಂದು ಬಿಳಿಯ ಟೂತ್ ಪೇಸ್ಟ್ ತೆಗೆದುಕೊಂಡು ಮಾರ್ಕ್ ಬಿದ್ದಿರುವ ಜಾಗಕ್ಕೆ ಹಾಕಿ ಕೈಯಿಂದ ರಬ್ ಮಾಡಿ ಸ್ವಲ್ಪ ಹೊತ್ತು ಬಿಸಿನೀರಿನಲ್ಲಿ ನೆನೆಸಿರಿ.. ಅರ್ಧ ಘಂಟೆಯ ಬಳಿಕ ಅದನ್ನು ಸೋಪಿನಿಂದ ಬ್ರಶ್ ಮಾಡಿ ತೊಳೆಯಿರಿ.. ಈ ವಿಧಾನವೂ ಕೂಡ ನಿಮಗೆ ಉಪಯೋಗಕ್ಕೆ ಬರುತ್ತದೆ..

ಮೇಲಿನಂತೆ ಮಾಡಿ ನಿಮ್ಮ ಅಟ್ಟೆಯನ್ನು ಇಂಕ್ ಮಾರ್ಕ್ ಗಳಿಂದ ಮತ್ತೆ ಮರಳಿ ಪಡೆಯಿರಿ..ಇಂಕ್ ಮಾರ್ಕ್ ಹೋಗಿಸಲು ಬಟ್ಟೆಯನ್ನು ತೊಳೆಯಲು ನೀರನ್ನು ಬಳಸುವಾಗ ಬೆಚ್ಚಗಿನ ನೀರನ್ನು ಬಳಸಿದರೆ ಸುಲಭವಾಗಿ ಕಲೆಯನ್ನು ಹೋಗಲಾಡಿಸಬಹುದು..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಮಾಹಿತಿ ತಿಳಿಯಲಿ.. ಧನ್ಯವಾದಗಳು..