ಏಟಿಎಂ ಪಾಸ್ವರ್ಡ್ ನೆನಪಿಗೆ ಬರ್ತಿಲ್ವಾ? ಚಿಂತೆಬೇಡ ಕೆಲವೇ ನಿಮಿಷಗಳಲ್ಲಿ ಹೊಸ ಪಾಸ್ವರ್ಡ್ ಸೆಟ್ ಮಾಡ್ಕೋಬಹುದು….

0
1759

ಇಂದಿನ ಜಗತ್ತು ತುಂಬಾ ಸ್ಮಾರ್ಟ್ ಆಗಿದೆ, ಅದಿಕ್ಕೇನೆ ನಾವು ಸ್ಮಾರ್ಟ್ ವರ್ಲ್ಡ್ ಎಂದು ಕರೆಯುತ್ತೇವೆ. ಈ ಸ್ಮಾರ್ಟ್ ವರ್ಲ್ಡ್ನಲ್ಲಿ ಟೆಕ್ನಾಲಜಿ ಅಂತೂ ತುಂಬಾ ಬೆಳೆದಿದೆ ಹಾಗೆ ಅತೀ ಮುಂದುವರೆದಿದೆ. ಈಗಿನ ದಿನಮಾನಗಳಲ್ಲಿ ಕಳ್ಳರ ಕಾಟದಿಂದಾಗಿ ಜನರು ತಮ್ಮ ಹಣವನ್ನು ಹೆಚ್ಚಾಗಿ ಬ್ಯಾಂಕ್ ಅಕೌಂಟ್ನಲ್ಲೆಯೇ ಬಿಡುತ್ತಾರೆ. ಈಗ ಎಲ್ರು ಕ್ಯಾಶ್ ಲೆಸ್ ದುನಿಯಾ ಪದ್ದತಿನ ಪಾಲಿಸ್ತಾಇದರೆ. ಎಲ್ಲಿ ಹೋದ್ರು ಏಟಿಎಂ ಕಾರ್ಡ್ ಒಂದಿದ್ದರೆ ಸಾಕು ಎಲ್ಲ ಶಾಪಿಂಗ್ ಮಾಡೋಕೂ ಬಳಸಬಹುದು. ಆದರೆ ಕೆಲವೊಮ್ಮೆ ಕಾರ್ಡ್ನ ಪಾಸ್ವರ್ಡ್ನ ಮರೆತೇಬಿಟ್ಟಿರುತ್ತಾರೆ.

ಅಯ್ಯೋ ದೇವರೇ ಏಟಿಎಂ ಪಿನ್ ಮರ್ತುಬಿಟ್ನಲ್ಲಪ್ಪಾ ಏನು ಮಾಡೋದು ಈಗಾ ?? ಡೋಂಟ್ ವರಿ, ಚಿಂತೆ ಪಡೋ ಅವಶ್ಯಕತೆನೇ ಇಲ್ಲ. ನಮ್ಮ ಟೆಕ್ನಾಲಜಿ ಸೂಪರ್ ಫಾಸ್ಟ್ . ಈ ಕೆಳಗಿರುವ ಕೆಲವು ಸ್ಟೆಪ್ಸ್ ಫಾಲೋ ಮಾಡಿ. ಇದರಿಂದ ನೀವು ನಿಮ್ಮ ಎಟಿಎಂ ಕಾರ್ಡಗೆ ಹೊಸ ನಂಬರ್ ಸೆಟ್ ಮಾಡಿಕೊಳ್ಳಬಹುದು. ಮತ್ತೆ ಎಂದಿನಂತೆ ಕಾರ್ಡ್ ಬಳಸಬಹುದು.

• ಎಟಿಎಂ ಕಾರ್ಡ್
• ಬ್ಯಾಂಕ್ ಅಕೌಂಟ್ ನಂಬರ್
• ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್ (ಆ ನಂಬರ್ ನಿಮ್ಮ ಫೋನ್ನಲ್ಲಿ ಇರಬೇಕು)

ನೀವು ಗ್ರಹಿಸಿದ ಮಾಹಿತಿಯೊಂದಿಗೆ ಹತ್ತಿರದ ನಿಮ್ಮ ಬ್ಯಾಂಕ್ ATM ಕೇಂದ್ರಕ್ಕೆ ಹೋಗಿ ನಿಮ್ಮ ಕಾರ್ಡನ್ನು ಏಟಿಎಂ ಮಷೀನ್ಗೆ ಹಾಕಿ, ಬಳಿಕ ಈ ಕೆಳಗಿನ ಸಾಲಿನಲ್ಲಿ ಸೂಚಿಸಿದಂತೆ ಮಾಡಿ.

• Banking ಎಂಬ ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು.
• Pin Generate / ATM Pin reset ಎಂಬ ಆಪ್ಷನ್ ಆಯ್ಕೆ ಮಾಡಬೇಕು.
• ನಿಮ್ಮ Account Number ಎಂಟರ್ ಮಾಡಬೇಕು.
• ನಿಮ್ಮ Phone number ಎಂಟರ್ ಮಾಡಬೇಕು.
• ನಿಮ್ಮ ಫೋನ್ಗೆ OTP (One Time Password) ಬರುತ್ತದೆ.
• OTP ಯನ್ನು ಎಂಟರ್ ಮಾಡಿ ನಂತರ ನಿಮ್ಮ ನೆಚ್ಚಿನ ಸಂಖ್ಯೆಯನ್ನು ಪಾಸ್ವರ್ಡ್ ಆಗಿ ಬದಲಾಯಿಸಿಕೊಳ್ಳಿ.