ನಿಮಗೆ ಗೊತ್ತಿಲ್ಲದೇ ಖದೀಮರು ನಿಮ್ಮ Accountನಿಂದ ಹಣ ವರ್ಗಾಯಿಸಿಕೊಂಡಿದ್ದರೆ, ಅದನ್ನು ಹಿಂಪಡೆಯುವುದು ಹೇಗೆ ಅಂತ ನೋಡಿ!!

0
627

ಬ್ಯಾಂಕಿಂಗ್ ಕ್ಷೆತ್ರದಲ್ಲಿ ಎಷ್ಟೊಂದು ಮುಂದುವರಿದ ತಂತ್ರಜ್ಞಾನಗಳು ಬಂದಿವೆ. ಇದೆಲ್ಲ ನೋಡಿದರೆ ಜನರ ಜೀವನ ಕ್ರಮ ಹೇಗೆ ಬದಲಾವಣೆಯಾಗುತ್ತೆ ಹಾಗೆಯೇ ಹಣಕಾಸಿನ ವ್ಯವಹಾರಗಳು ಕೂಡ ಹೊಸ ರೂಪತಾಳುತ್ತಿವೆ. ಇದೆ ಸಾಲಿನಲ್ಲಿ ಬರುವ ಇಂಟರ್ನೆಟ್ ಬ್ಯಾಂಕಿಂಗ್ (Net banking) ಹೆಚ್ಚು ಚಾಲ್ತಿಯಲ್ಲಿರುವುದು. ಇದರಿಂದ ನೀವು ಹಣವನ್ನು ಬೇರೊಂದು ಅಕೌಂಟ್ ಗೆ ವರ್ಗಾವಣೆ ಮಾಡಲು ಇಲ್ಲ ಬೇರೊಂದು ಬ್ಯಾಂಕಿನಿಂದ ಹಣ ಪಡೆಯಲು ಸದ್ಯ ಬ್ಯಾಂಕಿಗೆ ಹೋಗುವ ಪರಿಸ್ಥಿತಿ ಇಲ್ಲ, ಮತ್ತು ಅಷ್ಟೇ ವೇಗವಾಗಿ ಹಣ ವರ್ಗಾವಣೆ ಆಗುತ್ತೆ. ಈ ರೀತಿಯ ವರ್ಗಾವಣೆ ಮಾಡುವಾಗ ಕೆಲವೊಂದು ಸಾರಿ A/c ನಂಬರ್ ತಪ್ಪಾಗಿ ಬೇರೊಬ್ಬರ account ಗೆ ಹಣ ಹೋಗಿರುವ ಪಜೀತಿ ಅನುಭವಗಳು ಎಲ್ಲರಿಗೂ ಗೊತ್ತಿರುತ್ತದೆ. ಇಂತಹ ಹಣವನ್ನು ಹೇಗೆ ಹಿಪಡೆಯುವುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ಹಣ ವರ್ಗಾವಣೆಯಲ್ಲಿ ತಪ್ಪು ಹೇಗಾಗುತ್ತೆ?

Also read: ತಕ್ಷಣ ಹಣ ಹೊಂದಿಸಲು ಕಷ್ಟವಾಗುತ್ತಿದೆ ಅಂದ್ರೆ, ಈ App ಉಪಯೋಗಿಸಿ 5 ನಿಮಿಷದೊಳಗೆ 60 ಸಾವಿರದ ವರೆಗೆ ಸಾಲ ಸಿಗುತ್ತೆ!!

ಇದು ನೆಟ್ ಬ್ಯಾಂಕಿಂಗ್ ಯುಗ. ಕೆಲವೇ ಕ್ಷಣಗಳಲ್ಲಿ ನಾವಿದ್ದ ಸ್ಥಳದಿಂದ ಯಾರಿಗೇ ಆಗಲಿ ಹಣ ಕಳುಹಿಸಲು ಸಾಧ್ಯ. ಈ ಸೌಲಭ್ಯ ಅದೆಷ್ಟು ಸರಳ ಹಾಗೂ ಸುಲಭವೋ ಅಷ್ಟೇ ಅಪಾಯಕಾರಿ. ಯಾಕೆಂದರೆ ಎಷ್ಟೋ ಬಾರಿ ನಾವು ಕಳುಹಿಸಿದ ಹಣ ಸಣ್ಣ ಎಡವಟ್ಟಿನಿಂದ ಬೇರೆಯೇ ವ್ಯಕ್ತಿಯ ಅಕೌಂಟ್‌ಗೆ ತಲುಪುತ್ತದೆ. ಕೇವಲ ಒಂದೇ ಒಂದು ಸೊನ್ನೆ ಹೆಚ್ಚು ಹಾಕಿ ಅಥವಾ ಅಕೌಂಟ್ ನಂಬರ್‌ನ ಒಂದು ಸಂಖ್ಯೆ ತಪ್ಪಾಗಿ ನಮೂದಿಸಿದರೂ ನಾವು ವರ್ಗಾಯಿಸುವ ಮೊತ್ತ ಬೇರೆ ಖಾತೆಗೆ ತಲುಪುತ್ತದೆ. ಹಲವಾರು ಬಾರಿ ಖಾತೆ ಸಂಖ್ಯೆ ತಪ್ಪಾಗಿದ್ದರೆ ಬ್ಯಾಂಕ್ ನಿಮ್ಮ ಹಣವನ್ನು ನಿಮ್ಮ ಖಾತೆಗೆ ಹಾಕುತ್ತದೆ. ಒಂದು ವೇಳೆ ನೀವು ಹಾಕಿದ ಹಣ ಬೇರೆಯೇ ವ್ಯಕ್ತಿಯ ಖಾತೆಗೆ ಜಮಾ ಆಗಿದ್ದರೆ ಅಥವಾ ನಿಮ್ಮ ಅಕೌಂಟ್‌ಗೆ ಹಣ ಮರಳಿ ಬಂದಿಲ್ಲವಾದರೆ ಈ ವಿಧಾನಗಳನ್ನು ಬಳಸಿ ಹಿಂಪಡೆಯಬಹುದು

ಅಕೌಂಟ್ ಹೊಂದಿರುವ ಬ್ಯಾಂಕ್‌ಗೆ ಮಾಹಿತಿ ತಿಳಿಸಿ:

Also read: ಖದೀಮರು ಈಗ ಕೇವಲ ಒಂದೇ ಒಂದು ಎಸ್.ಎಂ.ಎಸ್. ಮೂಲಕ ಬ್ಯಾಂಕ್-ನಿಂದ ಹಣ ದೋಚುತ್ತಿದ್ದಾರೆ, ತಪ್ಪದೇ ಓದಿ!!

ನೆಟ್ ಬ್ಯಾಂಕಿಂಗ್-ನಲ್ಲಿ ಕೆಲವೊಂದು ಸಾರಿ ತಪ್ಪಾಗಿ ಬೇರೆ ಖಾತೆಗೆ ಹಣ ಟ್ರಾನ್ಸ್ ಫರ್ ಮಾಡಿದ್ದರೆ, ಮೊದಲು ಬ್ಯಾಂಕ್‌ಗೆ ಈ ಬಗ್ಗೆ ಮಾಹಿತಿ ನೀಡಿ. ಬ್ಯಾಂಕ್ ನ ಶಾಖೆಯ ಮ್ಯಾನೇಜರ್‌ನ್ನು ಭೇಟಿ ಮಾಡಿದರೆ ಇನ್ನೂ ಒಳಿತು. ಆದರೂ ಅಂತಿಮವಾಗಿ ನೀವು ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದೀರೋ ಆ ಬ್ಯಾಂಕ್ ಮಾತ್ರ ಈ ಸಮಸ್ಯೆ ಪರಿಹರಿಸಲು ಸಾಧ್ಯ ಎಂಬುವುದು ನಿಮ್ಮ ಗಮನದಲ್ಲಿರಲಿ. ಹೀಗಾಗಿ ನಿಮ್ಮ ಮ್ಯಾನೇಜರ್ ಬಳಿ ಮಾಹಿತಿ ನೀಡುವಾಗ ಯಾವ ದಿನಾಂಕ, ಸಮಯ ಹಾಗೂ ಯಾವ ಖಾತೆ ಸಂಖ್ಯೆಗೆ ಹಣ ವರ್ಗಾಯಿಸಿದ್ದೀರೆಂಬ ಮಾಹಿತಿಯನ್ನು ಸರಿಯಾಗಿ ನೀಡಬೇಕಾಗುತ್ತದೆ. ಇದರಿಂದ ನಿಮ್ಮ ಹಣ ಪಡೆಯಲು ಸಾಧ್ಯವಾಗುತ್ತೆ.
ದೂರು ದಾಖಲಿಸಿ

ಹಣ ವರ್ಗಾಯಿಸಿದ ಬ್ಯಾಂಕ್ ಖಾತೆ ಇರುವ ಶಾಖೆಗೆ ತೆರಳಿ ದೂರು ನೀಡಿ. ಯಾರೇ ಆಗಲಿ ಬ್ಯಾಂಕ್ ತನ್ನ ಗ್ರಾಹಕರ ಅನುಮತಿ ಇಲ್ಲದೆ ಅವರ ಅಕೌಂಟ್ ನಿಂದ ಹಣ ವರ್ಗಾಯಿಸುವುದಿಲ್ಲ. ಅಲ್ಲದೇ ತನ್ನ ಗ್ರಾಹಕರ ಮಾಹಿತಿಯನ್ನೂ ನೀಡುವುದಿಲ್ಲ. ಹೀಗಾಗಿ ದೂರು ದಾಖಲಿಸುವ ಸಂದರ್ಭದಲ್ಲಿ ನೀವು ಕಣ್ತಪ್ಪಿನಿಂದಾಗಿ ತಪ್ಪು ಖಾತೆಗೆ ಹಣ ವರ್ಗಾಯಿಸಿದ್ದು, ಹೀಗಾಗಿ ಮತ್ತೆ ಆ ಹಣವನ್ನು ನಿಮ್ಮ ಖಾತೆಗೆ ಮರು ವರ್ಗಾಯಿಸುವಂತೆ ಮನವಿ ಪತ್ರ ಕೊಡಬೇಕು.

ಆನ್ ಲೈನ್ ಬ್ಯಾಂಕಿಂಗ್ ಮಾಡುವುದು ಹೇಗೆ?

Also read: ಭಾರತೀಯ ಜೀವ ವಿಮಾ ನಿಗಮದ ಹೊಸ ಯೋಜನೆ; ತಿಂಗಳಿಗೆ 518 ರೂ. ಪಾವತಿಸಿದರೆ ಸಿಗಲಿವೆ ಹಲವಾರು ಲಾಭಗಳು..!

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್-ನಲ್ಲಿ ನೀವು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಆ್ಯಕ್ಟಿವೇಟ್ ಮಾಡಿಕೊಂಡಿದ್ದರೆ ಆನ್ ಲೈನ್ NEFT ಹಾಗೂ RGFT ಮೂಲಕ ಹಣ ವರ್ಗಾಯಿಸಬಹುದು. ಇದಕ್ಕಾಗಿ ಬ್ಯಾಂಕ್ ನೀಡುವ ಪಾಸ್‌ವರ್ಡ್ ಬಳಸಿ ನೆಟ್ ಬ್ಯಾಂಕಿಂಗ್ ಅಕೌಂಟ್‌ಗೆ ಲಾಗಿನ್ ಆಗಿ. ಇದಾದ ಬಳಿಕ ಥರ್ಡ್ ಪಾರ್ಟಿ ಟ್ರಾನ್ಸ್‌ಫರ್ ಆಯ್ಕೆಯನ್ನು ಕ್ಲಿಕ್ ಮಾಡಿ ನೀವು ಹಣ ಕಳುಹಿಸಬೇಕಾದ ವ್ಯಕ್ತಿಯ ವಿವರಗಳನ್ನು ನಮೂದಿಸಿ. ಸುಮಾರು 10 ರಿಂದ 12 ಗಂಟೆಗಳೊಳಗಾಗಿ ಬ್ಯಾಂಕ್ ನೀವು ನಮೂದಿಸಿದ ವಿವರಗಳನ್ನು ಪರಿಶೀಲಿಸಿ ನಿಮ್ಮ ಅಕೌಂಟ್ ಹಾಗೂ ಆ ವ್ಯಕ್ತಿಯ ಅಕೌಂಟ್ ಲಿಂಕ್ ಮಾಡುತ್ತದೆ. ಹಲವಾರು ಬಾರಿ ನಾವು ವಿವರಗಳನ್ನು ನೀಡುವಾಗ ಕಣ್ತಪ್ಪಿನಿಂದಾಗಿ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸುತ್ತೇವೆ. ಇದಕ್ಕಾಗೇ ಎರಡೆರಡು ಬಾರಿ ಸಂಖ್ಯೆ ನಮೂದಿಸಲು ತಿಳಿಸಲಾಗುತ್ತದೆ.

ಆನ್‌ಲೈನ್ ಬ್ಯಾಂಕಿಂಗ್ ಮಾಡುವಾಗ ಎಚ್ಚರವಿರಲಿ:

Also read: ಕಾರ್ ಬಳಕೆ ಮಾಡುವರು ತಪ್ಪದೆ ಈ ಮಾಹಿತಿ ನೋಡಿ; ಕಾರ್-ನಲ್ಲಿರುವ AC ಬಳಕೆಯಿಂದ ಹಲವಾರು ರೋಗಗಳು ಬರುತ್ತಿವೆ..

ನೀವು ಯಾವುದೋ ಕೆಲಸದ ಒತ್ತಡದಲ್ಲಿ ಹಣ ವರ್ಗಾಯಿಸುವಾಗ ಅಕೌಂಟ್ ನಂಬರ್-ನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಬಹುದೊಡ್ಡ ಎಡವಟ್ಟಾಗುವ ಸಾಧ್ಯತೆಗಳಿವೆ. ಹೀಗಾಗಿ ಹಣ ವರ್ಗಾಯಿಸುವ ವೇಳೆ ಖಾತೆ ವಿವರವನ್ನು ಪುನರ್ ಪರಿಶೀಲಿಸಬೇಕು. ದೊಡ್ಡ ಮೊತ್ತವನ್ನು ಟ್ರಾನ್ಸ್ಫರ್ ಮಾಡುವ ಸಂದರ್ಭದಲ್ಲಿ ಮೊದಲು 10 ಇಲ್ಲ 100 ರೂ ವರ್ಗಾಯಿಸಿ ಅವರ ಅಕೌಂಟ್ ಗೆ ವರ್ಗಾವಣೆಯಾದಾಗ ಕಳುಹಿಸಿಸುವ ಹಣ ಕಳುಹಿಸಿ. ಇನ್ನೊಂದು ವಿಷಯ ಅಂದರೆ ನೀವು ಗೊಂದಲದಲ್ಲಿ online banking ಉಪಯೋಗ ಮಾಡದೆ ಇರುವುದು ಒಳ್ಳೆಯದು.