ಹೆಣ್ಣು ಮಕ್ಕಳೇ, ಮುಟ್ಟಿನ ಸಮಯದಲ್ಲಿ ಹಿಂಸಿಸುವ ಹೊಟ್ಟೆನೋವಿಗೆ ಇಲ್ಲಿದೆ ಶಾಶ್ವತ ಪರಿಹಾರ…

0
6192

ಮಲಬದ್ಧತೆ, ಅಧಿಕ ಒತ್ತಡ, ಅಪೌಷ್ಟಿಕತೆ, ಹಾರ್ಮೋನ್ ಗಳ ಅಸಮತೋಲನ ಉಷ್ಣ ಪ್ರಕೃತಿಯ ದೇಹ, ಗರ್ಭಾಶಯದ ಸ್ಥಾನ ಚ್ಯುತಿ, ಕೆಲ ಹೊಟ್ಟೆಯಲ್ಲಿ ಉರಿಯೂತ, ಅಂಡಾಣು ಉತ್ಪತ್ತಿ ಯಾಗದೆ ಇರುವುದು ಮೊದಲಾದ ಕಾರಣಗಳಿಂದ ಋತುಶೂಲೆ ಉಂಟಾಗುತ್ತದೆ.

ಋತುಶೂಲೆಯು ಹಲವು ಬಗೆಯ ನೋವುಗಳಿಗೆ ಕಾರಣವಾಗುವುದು. ಹೊಟ್ಟೆನೋವು, ಕೈ-ಕಾಲ ನರಗಳ ಸೆಳೆತ, ಆತಂಕ, ಮೀನಖಂಡಗಳ ಸ್ನಾಯುಗಳ ನೋವು, ಸೊಂಟನೋವು, ಸ್ತನಗಳ ಬಿಗಿತ, ತಲೆ ಸುತ್ತು, ವಾಂತಿಯಂತಹ ಅನೇಕ ತೊಂದರೆಗಳನ್ನುಂಟು ಮಾಡುತ್ತದೆ.

ಋತುಶೂಲೆಗೆ ಇಲ್ಲಿದೆ ಆಯುರ್ವೇದ ಚಿಕಿತ್ಸೆ:

-ಬಲಿತ ಲೋಳೆಸರದ ಪಟ್ಟಿಯನ್ನು ಚೆನ್ನಾಗಿ ತೊಳೆದು ೨-೩ ಇಂಚು ತಿರುಳನ್ನು ಜೇನುತುಪ್ಪದೊಂದಿಗೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ೨೧ ದಿನ ಸೇವಿಸಬೇಕು.

-ತುಳಸಿ ಹಾಗು ಈಶ್ವರಿ ಬಳ್ಳಿಯ ಒಂದೊಂದು ಚಮಚ ರಸ ತೆಗೆದಿಟ್ಟುಕೊಳ್ಳಿ. ನಿಂಬೆ ಹಣ್ಣು ಕತ್ತರಿಸಿ ಅದರಲ್ಲಿ ಸ್ವಲ್ಪ ಜೀರಿಗೆಯನ್ನು ಹಾಕುವುದು. ಒಂದು ಹೋಳಿಗೆ ತುಳಸಿ ರಸ ಮತ್ತೊಂದು ಹೋಳಿಗೆ ಈಶ್ವರಿ ಬಳ್ಳಿ ರಸ ಸೇರಿಸಿ ಚೀಪಲು ಕೊಡುವುದು. ಈ ಚಿಕಿತ್ಸೆಯನ್ನು ೭ ದಿನ ಮಾಡ್ಬೇಕು.

-ಒಂದು ಚಮಚ ತ್ರಿಫಲಾ ಚೂರ್ಣವನ್ನು ಜೇನುತುಪ್ಪದಲ್ಲಿ ಕಲ್ಸಿ ರಾತ್ರಿ ಊಟದ ನಂತರ ಕೊಡಬೇಕು.

-ಒಂದು ಲೋಟ ಹಸುವಿನ ಹಾಲಿಗೆ ಮುಕ್ಕಾಲು ಚಮಚ ಅರಿಸಿನ ಪುಡಿ ಮತ್ತು ಕಲ್ಲುಸಕ್ಕರೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳುಗಳ ಕಾಲ ಸೇವಿಸಬೇಕು. ಇದರ ಜೊತೆ ಲೋಳೆಸರದ ತಿರುಳನ್ನು ದಿನದಲ್ಲಿ ಎರಡು ಬಾರಿ ಸೇವಿಸಬೇಕು.

-ಕಡಲೆಕಾಳು ಗಾತ್ರದ ಇಂಗನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಬಿಸಿನೀರಿನಲ್ಲಿ ನುಂಗುವುದು.

-ಬಿಸಿ ದಾಸವಾಳದ ಒಂದು ಹೂ, ೪ ಇಂಚು ಎಲೆಕಾಂಡ, ಒಂದು ಮುಷ್ಟಿ ಎಲೆ ಮತ್ತು ಎರಡು ಚಮಚ ಜೀರಿಗೆ ಕುಟ್ಟಿ ಪೇಸ್ಟ್ ತಯಾರಿಸುವುದು. ಇದನ್ನು ಮೂರು ಭಾಗ ಮಾಡಿ ಪ್ರತಿ ಭಾಗವನ್ನು ಒಂದು ಲೋಟ ಹಾಲಿನಲ್ಲಿ ಮಿಶ್ರಮಾಡಿ ಪ್ರತಿದಿನ ೩ ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು.ಇದನ್ನು ೩ ತಿಂಗಳು ಮುಟ್ಟಿನ ಸಮಯದಲ್ಲಿ ತೆಗೆದುಕೊಳ್ಳಬೇಕು.

ಮುಟ್ಟಿನ ದಿನಗಳಲ್ಲಿ ಚೆನ್ನಾಗಿ ಓಡಾಡಬೇಕು. ಕಿಬ್ಬೊಟ್ಟೆಯ ಮೇಲೆ ಬಿಸಿ ನೀರಿನ ಶಾಖವನ್ನು ಕೊಡಿ. ಪ್ರತಿನಿತ್ಯ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಬಿಸಿ ನೀರಿನ ಬಕೆಟ್ ನಲ್ಲಿ ೨೦ ನಿಮಿಷಗಳ ಕಾಲ ಕಾಲನ್ನು ಅದ್ದಿಡಿ. ಮುಟ್ಟಿನ ಸಮಯದಲ್ಲಿ ವ್ಯಯಕ್ತಿಕ ಸ್ವಚ್ಛತೆ ಅತಿ ಮುಖ್ಯ. ಪ್ರತಿನಿತ್ಯ ಪೌಷ್ಟಿಕ ಆಹಾರವನ್ನು ಸೇವಿಸಿ. ಹೀಗೆ ಮಾಡುವುದರಿಂದ ಋತುಶೂಲೆ ಇಲ್ಲವಾಗುವುದು.

 

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840