ಚಳಿಗಾಲ ಶುರುವಾಯಿತೆಂದರೆ ಆರೋಗ್ಯದಲ್ಲಿ ಏರುಪೇರು ಆಗುವುದು ಸಾಮಾನ್ಯ, ಈ ಮನೆಮದ್ದುಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ!!

0
1100

ಸಾಮಾನ್ಯವಾಗಿ ಚಳಿಗಾಲದಲ್ಲಿ ಅರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಉತ್ತಮವಾಗಿದ್ದು, ಸಿತದ ಗಾಳಿಗೆ ಚರ್ಮ ಒಣಗಿ ತೊಂದರೆ ಕಂಡು ಬರುತ್ತದೆ. ಅದಕ್ಕಾಗಿ ಹಲವು ರೀತಿಯ ಕ್ರೀಮ್, ಮತ್ತು ಮನೆ ಮದ್ದುಗಳನ್ನು ಬಳಸಿ ಹೇಗೆ ಚರ್ಮದ ಅರೋಗ್ಯ ಕಾಪಾಡಿಕೊಳ್ಳುತ್ತೇವೆ. ಹಾಗೆಯೇ ಆರೋಗ್ಯದ ದೃಷ್ಠಿಯಿಂದ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದು ಅತಿಮುಖ್ಯವಾಗಿದ್ದು. ಅದರಲ್ಲಿ ಕಡ್ಡಾಯವಾಗಿ ಸೇವಿಸಲೇಬೇಕಾದ ಹಣ್ಣುಗಳು ಮತ್ತು ತರಕಾರಿಗಳನ್ನು ತಿಳಿಸಿದ್ದು ಇವುಗಳನ್ನು ತಿನ್ನಲೇಬೇಕು.

Also read: ನೀವೂ ಪ್ರತಿನಿತ್ಯವೂ ಒಂದೇ ತರಹದ ಆಹಾರ ಸೇವಿಸುತ್ತಿರಾ? ಈ ಅಭ್ಯಾಸ ಒಳ್ಳೆಯದಲ್ಲ ಯಾಕೆ ಅಂತ ಈ ಮಾಹಿತಿ ನೋಡಿ.!

ಹೌದು ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಸೈನಸ್‌ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತಣ್ಣನೆಯ ವಾತಾವರಣ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದನ್ನು ತಡೆಗಟ್ಟಲು ದೇಹದಲ್ಲಿ ರೋಗನಿರೋಧಕ ಸಾಮರ್ಥ್ಯ ಹೆಚ್ಚಬೇಕು. ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಲು ವಿಟಮಿನ್ ಸಿ ಹಾಗೂ ಆ್ಯಂಟಿಅಕ್ಸಿಡೆಂಟ್ ಇರುವ ಆಹಾರಗಳನ್ನು ಸೇವಿಸಿ ಹಲವು ಅರೋಗ್ಯ ಸಮಸ್ಯೆಗಳಿಂದ ಅರೋಗ್ಯ ಕಾಪಾಡಿಕೊಳ್ಳಬಹುದು. ಅಂತಹ ಆಹಾರ ಪದಾರ್ಥಗಳೆಂದರೆ.

1. ಸೀತಾಫಲ

ಚಳಿಗಾಲದಲ್ಲಿ ದೊರೆಯುವ ಸೀಸನ್ ಹಣ್ಣು ಸೀತಾಪಲವಾಗಿದ್ದು, ಈ ಹಣ್ಣಿನಲ್ಲಿ ವಿಟಮಿನ್ ಸಿ, ಕಬ್ಬಿಣಂಶ, ಮೆಗ್ನಿಷ್ಯಿಯಂ, ವಿಟಮಿನ್ ಬಿ6 ಹೀಗೆ ಆನೇಕ ವಿಟಮಿನ್ ಹಾಗೂ ಪೋಷಕಾಂಶಗಳಿವೆ. ಈ ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಇನ್ನು ಚಳಿಗಾಲದಲ್ಲಿ ತ್ವಚೆ ಸಮಸ್ಯೆ ಹೆಚ್ಚಾಗಿ ಕಾಡುವುದು, ಇದನ್ನು ತಡೆಗಟ್ಟುವಲ್ಲಿ, ತ್ವಚೆ ಆರೋಗ್ಯ ಕಾಪಾಡುವಲ್ಲಿ ಸೀತಾಫಲ ಅತಿಮುಖ್ಯವಾಗಿದೆ.

2. ಕ್ಯಾರೆಟ್‌

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಯಾರೆಟ್-ನ್ನು ಚಳಿಗಾಲದಲ್ಲಿ ತಪ್ಪದೆ ತಿನ್ನಬೇಕು. ಕ್ಯಾರೆಟ್‌ ಹಸಿಯಾಗಿ ಬಳಸಿದರೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇದ್ದು ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಇನ್ನು ಕ್ಯಾರೆಟ್‌ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಚಳಿಗಾಲದ ಆರೋಗ್ಯ ಸಮಸ್ಯೆಯಿಂದ ದೂರವಿರಬಹುದು.

3. ದಾಳಿಂಬೆ

ಚಳಿಗಾಲದಲ್ಲಿ ತಿನ್ನಬೇಕಾದ ಮುಖ್ಯವಾದ ಹಣ್ಣು ದಾಳಿಂಬೆ. ಇದರಲ್ಲಿ ಪಾಲಿಪಿನೋಲ್ ಆ್ಯಂಟಿಅಕ್ಸಿಡೆಂಟ್ ಹಾಗೂ ಉರಿಯೂತವನ್ನು ಕಡಿಮೆ ಮಾಡುವ ಅಂಶವಿದ್ದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ. ದಾಳಿಂಬೆಯನ್ನು ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಅಧಿಕವಾಗುವುದು, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ತುಂಬಾ ಸಹಕಾರಿ. ದಾಳಿಂಬೆ ಚಳಿಗಾಲದಲ್ಲಿ ಕಾಡುವ ಶೀತವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ.

4. ಕೆಂಪು ಎಲೆಕೋಸು

ಎಲೆಕೋಸಿನಲ್ಲಿ ಮ್ಯಾಂಗನೀಸ್, ಪೊಟಾಷ್ಯಿಯಂ, ವಿಟಮಿನ್ ಇದ್ದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕ್ಯಾನ್ಸರ್ ಕಣಗಳನ್ನು ತಡೆಗಟ್ಟುವ ಸಾಮರ್ಥ್ಯ ಈ ತರಕಾರಿಗಿದೆ. ಆದ್ದರಿಂದ ಕ್ಯಾನ್ಸರ್ ರೋಗಿಗಳು ತಮ್ಮ ಆಹಾರಕ್ರಮದಲ್ಲಿ ಈ ತರಕಾರಿ ಬಳಸುವುದು ಒಳ್ಳೆಯದು.

5. ಸೀಬೆಕಾಯಿ (ಪೇರಲಕಾಯಿ)

source: timescaribbeanonline.com

ಸೇಬು ಹಣ್ಣಿಗಿಂತ ಕಡಿಮೆಯಿಲ್ಲದ ಮನೆಯ ತೋಟದ ಹಿತ್ತಲಿನಲ್ಲಿ ಬೆಳೆಯುವ ಸೀಬೆ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ6, ಮ್ಯಾಂಗನೀಸ್, ಪೊಟಾಷ್ಯಿಯಂ ಹಾಗೂ ಇತರ ವಿಟಮಿನ್ಸ್ ಹಾಗೂ ಖನಿಜಾಂಶಗಳಿದ್ದು ಚಳಿಗಾಲದಲ್ಲಿ ತಿನ್ನಲೇಬೇಕು.

6. ಬೆರ್ರಿ ಹಣ್ಣುಗಳು

ಸ್ಟ್ರಾಬೆರ್ರಿ, ರಾಸ್‌ಬೆರ್ರಿ, ಬ್ಲ್ಯಾಕ್‌ಬೆರ್ರಿ, ನೇರಳೆಹಣ್ಣು, ನೆಲ್ಲಿಕಾಯಿ ಇವುಗಳಲ್ಲಿ ವಿಟಮಿನ್ ಸಿ ಹಾಗೂ ಪಾಲಿಪಿನೋಲ್ ಆ್ಯಂಟಿಆಕ್ಸಿಡೆಂಟ್ ಅಧಿಕವಿದ್ದು ದೇಹದಲ್ಲಿ ರೋಗನಿರೊಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಇನ್ನು ಚಳಿಗಾಲದಲ್ಲಿ ಸಾಮಾನ್ಯವಾಗಿ ಅಲರ್ಜಿ ಸಮಸ್ಯೆ ಕಾಡುವುದು, ಅಲರ್ಜಿಯಿಂದಾಗಿ ಮೂಗು, ಕಣ್ಣುಗಳಲ್ಲಿ ನೀರು ಬರುವುದು, ಒಣಕೆಮ್ಮು ಈ ರೀತಿಯ ಸಮಸ್ಯೆಗಳು ಉಂಟಾಗುವುದು. ದಿನಾ ಬೆಳಗ್ಗೆ ಒಂದು ಬೌಲ್ ಬೆರ್ರಿ ಹಣ್ಣುಗಳನ್ನು ತಿನ್ನೋದ್ರಿಂದ ಅಲರ್ಜಿ ಸಮಸ್ಯೆ ದೂರವಾಗುತ್ತೆ.

7. ಮೂಲಂಗಿ

ಮೂಲಂಗಿ ರಕ್ತವನ್ನು ಶುದ್ಧೀಕರಿಸುವ ಅತ್ಯುತ್ತಮವಾದ ಆಹಾರ ಇದಾಗಿದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಕಾಮಲೆ ರೋಗ ಇರುವವರು ಇದನ್ನು ತಿಂದರೆ ತುಂಬಾ ಒಳ್ಳೆಯದು, ಮೂಲವ್ಯಾಧಿ ಸಮಸ್ಯೆ ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಶೀತ, ಕೆಮ್ಮು ಬಾರದಂತೆ ತಡೆಗಟ್ಟುವಲ್ಲಿ ಕೂಡ ಈ ತರಕಾರಿ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿ ಚಳಿಗಾಲದಲ್ಲಿ ಮೂಲಂಗಿ ಸೇವನೆ ಅತೀಮುಖ್ಯ.

Also read: ನಿಮ್ಮ ಚರ್ಮದಲ್ಲಿ Pigmentation ಉಂಟಾಗಿ ಸಮಸ್ಯೆ ಎದುರಿಸುತ್ತಿದ್ದರೆ, ದುಬಾರಿ ಕ್ರೀಮ್-ಗಳನ್ನು ಬಿಟ್ಟು ಈ ಸುಲಭ ಮನೆಮದ್ದನ್ನು ಪಾಲಿಸಿ, ಕೆಲವೇ ದಿನದಲ್ಲಿ ಪರಿಹಾರ ಸಿಗುತ್ತೆ!!