ಮಕ್ಕಳಿಗೆ ಬಿಸಿಲು ಕಾಯಿಸುವುದರಿಂದ ಜಾಂಡೀಸ್ ಗುಣವಾಗುವುದೇ?? ಬಿಸಿಲಿನ ಉಪಯೋಗಗಳೇನು??

0
707

ಮಕ್ಕಳಿಗೆ ಬಿಸಿಲು ಕಾಯಿಸುವುದರಿಂದ ಜಾಂಡೀಸ್ ಗುಣವಾಗುವುದು ಎಂಬ ಮಾಹಿತಿ ಸಾಮಾನ್ಯವಾಗಿ ಹಲವರಲ್ಲಿ ಇದೆ.. ಇದೊಂದು ತಪ್ಪು ಮಾಹಿತಿ.. ಇದನ್ನು ನಂಬಿಕೊಂಡು ಹಲವಾರು ಮಂದಿ ಮಕ್ಕಳನ್ನು ಬಿಸಿಲಿನಲ್ಲಿ ಕಾಯಿಸುವುದು ಉಂಟು.. ನೀವೂ ಅದೇ ಕಾರಣದಿಂದ ಈ ಕೆಲಸ ಮಾಡುತ್ತಿದ್ದರೇ ಈಗಲೇ ಬಿಟ್ಟುಬಿಡಿ..

ಆದರೇ ಜಾಂಡೀಸ್ ಗುಣವಾಗದಿದ್ದರೂ.. ಬಿಸಿಲು ಕಾಯಿಸುವುದರಿಂದ ಅನೇಕ ಉಪಯೋಗಗಳಿವೆ.. ಅವುಗಳನ್ನು ತಿಳಿಯೋಣ ಬನ್ನಿ..

ಎಳೆ ಬಿಸಿಲು ಅಂದರೆ ಬೆಳಗ್ಗೆ 7 ರಿಂದ 9 ರವರೆಗೆ ಬರುವ ಬಿಸಿಲನ್ನು ಮಕ್ಕಳಿಗೆ ಹಾಗೂ ದೊಡ್ಡವರೂ ಕೂಡ ಬಿಸಿಲು ಕಾಯ್ದರೆ ಅರೋಗ್ಯಕರವಾದದ್ದು.. ಇದರಿಂದ ವಿಟಮಿನ್ ಡಿ ಪೋಷಕಾಂಶಗಳು ಸಿಗುತ್ತವೆ.. ನೈಸರ್ಗಿಕವಾಗಿ ಸಿಗುವ ಈ ವಿಟಮಿನ್ ಡಿ ಯನ್ನು ನಿರ್ಲಕ್ಷ ಮಾಡದೇ ಉಚಿತವಾಗಿ ಪಡೆದುಕೊಂಡರೆ ಒಳ್ಳೆಯದು.. ಹೀಗೆ ಮಾಡುವುದರಿಂದ ಅನೇಕ ಚರ್ಮರೋಗಗಳು ಬರುವುದಿಲ್ಲ..

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಹಾಗೂ ಇತರೆ ದೇಶದ ಜನರು ತಮ್ಮ ಚರ್ಮದ ಆರೋಗ್ಯಕ್ಕಾಗಿ ಈಗಲೂ ನಮ್ಮ ದೇಶಕ್ಕೆ ಬಂದು ಬೀಚ್ ಗಳಲ್ಲಿ ಅರೆಬೆತ್ತಲಾಗಿ ಮಲಗುವುದನ್ನು ನೋಡಿರುತ್ತೇವೆ.ಅಲ್ಲಿನ ಡಾಕ್ಟರ್ ಗಳು ಇದನ್ನು ಸಲಹೆ ಮಾಡುವುದೂ ಉಂಟು… ಆದರೇ ನಮ್ಮ ದೇಶದಲ್ಲೇ ನೈಸರ್ಗಿಕವಾಗಿ ಸಿಗುವ ಈ ವಿಟಮಿನ್ ಅನ್ನು ಪಡೆದುಕೊಳ್ಳದೇ ಸೋಮಾರಿಗಳಾಗಿ ಮಲಗುವ ಅಭ್ಯಾಸ ನಮ್ಮದು.. ಮತ್ಯಾವುದೋ ದೇಶದ ಜನರು ನಮ್ಮ ದೇಶಕ್ಕೆ ಬಿಸಿಲು ಕಾಯಲು ಬರುವಾಗ ನಾವು ಮಾಡಬಾರದೇ??

ಬೆಳಗಿನ ಬಿಸಿಲನ್ನು ಕಾಯ್ದರೆ ಮಕ್ಕಳಷ್ಟೇ ಅಲ್ಲದೇ ದೊಡ್ಡವರೂ ಕೂಡ ದಿನ ಪೂರ್ತಿ ಚೈತನ್ಯವಾಗಿರಬಹುದು.ಹಲವಾರೂ ಚರ್ಮರೋಗಗಳಿಂದ ಮುಕ್ತಿಯನ್ನು ಪಡೆಯಬಹುದು… ಯೋಚಿಸಿ ಈಗಲೂ ಕಾಲ ಮಿಂಚಿಲ್ಲ.. ಬೆಳಗ್ಗೆ ಬೇಗ ಎದ್ದು ಈ ಕೆಲಸವನ್ನು ಮಾಡಿ.. ಡಾಕ್ಟರ್ ಗಳಿಗೆ ದುಡ್ಡನ್ನು ದಂಡವಾಗಿ ಕಟ್ಟುವುದನ್ನು ಕಡಿಮೆ ಮಾಡಿ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ… ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಬೇರೇನಿದೆ??

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840