ನಿಮ್ಮ ಫೋನಿನ ಪಾಸುವರ್ಡ್ ಅಥವಾ ಪಿನ್ ಮರೆತು ಹೋದರೆ ಪ್ರಪಂಚವೇ ಕಳೆದು ಹೋದಂತಾಗುತ್ತೆ ಅಲ್ವಾ, ಹೀಗೆ ಮಾಡಿ ಪಿನ್ ರಿಸೆಟ್ ಮಾಡಬಹುದು..

0
2734

ಇಂದಿನ ಕಾಲದಲ್ಲಿ ಎಲ್ಲರ ಹತ್ರ ಇರುವ ಒಂದು ಸಾಮಾನ್ಯ ವಸ್ತು ಅಂದ್ರೆ ಅದು ಸ್ಮಾರ್ಟ್-ಫೋನ್, ಇದಿಲ್ಲ ಅಂದ್ರೆ ಕೆಲವರಿಗೆ ಪ್ರಪಂಚನೇ ತಲೆಕೆಳಗಾದಂತೆ ಹಾಗುತ್ತದೆ. ಇನ್ನು ಸ್ಮಾರ್ಟ್-ಫೋನ್ ಕೆಲವರಿಗೆ ಕೆಲಸಕ್ಕೆ ಬೇಕಾಗಿರುವ ಉಪಯುಕ್ತ ಸಾಧನ, ಬಹಳಷ್ಟು ಜನ ತಮ್ಮ ಮೊಬೈಲ್-ನಲ್ಲಿ ಎಲ್ಲ ರೀತಿಯ ತಮ್ಮ ಮಾಹಿತಿಯನ್ನು ಸಂಗ್ರಹಿಸಿಡುತ್ತಾರೆ ಅದನ್ನು ಬೇರೆಯವರಿಗೆ ಗೊತ್ತಾಗದ ಹಾಗೆ ಕಾಪಾಡಿಕೊಳ್ಳಲು ಫೋನ್-ಗೆ ಪ್ಯಾಟರ್ನ್ ಲಾಕ್ ಒಂದನ್ನು ಇಡುವುದು ಸರ್ವೇ-ಸಾಮಾನ್ಯವಾಗಿಬಿಟ್ಟಿದೆ, ಆದರೆ ಒಂದು ವೇಳೆ ನೀವು ಇಟ್ಟ ಪ್ಯಾಟರ್ನ್-ನನ್ನು ಮರೆತರೆ?

ಅಯ್ಯೋ ಅದನ್ನ ಯಾಕೆ ನೆನೆಸ್ತೀರ, ತುಂಬಾನೆ ಕಷ್ಟ ಅಂತೀರ, ಆದರೆ ಈಗ ನಾವು ನೀಡುವ ಕೆಲವು ಸಲಹೆಗಳನ್ನು ಪಾಲಿಸಿದರೆ ನೀವು ಎಷ್ಟು ಸಾರಿ ಬೇಕಾದರು ಪ್ಯಾಟರ್ನ್ ಅನ್ನು ಅನ್ಲಾಕ್ ಮಾಡಬಹುದು, ಅದು ಹೇಗೆ ಸಾಧ್ಯ? ನೀವೇ ನೋಡಿ. ನಿಮ್ಮ ಸ್ಮಾರ್ಟ್-ಫೋನ್ ಪ್ಯಾಟರ್ನ್ ಅಥವಾ ಪಿನ್ ಲಾಕ್‌ಗಳನ್ನು ರೀಸೆಟ್ ಮಾಡಲು ವಂಡರ್‌ಷೇರ್ ಆಂಡ್ರಾಯ್ಡ್ ಪ್ಯಾಟರ್ನ್ ಲಾಕ್ ರಿಮೂವ್ ಎಂಬ ಒಂದು ಸಾಫ್ಟ್‌‍ವೇರ್ ಇದೆ. ಇದನ್ನು ನೀವು ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ನಿಮ್ಮ ಫೋನನ್ನು ಈ ಸಾಫ್ಟ್‌‍ವೇರ್ ಇನ್-ಸ್ಟಾಲ್ ಮಾಡಿದ ಕಂಪ್ಯೂಟರಿಗೆ ಕನೆಕ್ಟ್ ಮಾಡಿ ಮತ್ತು ಸ್ಕ್ರೀನ್ ಮೇಲೆ ಕಾಣಿಸುವ ಕಮಾಂಡ್-ಗಳನ್ನು ಅಳವಡಿಸುತ್ತ ಹೋದರೆ ನಿಮ್ಮ ಮೊಬೈಲಿನ ಪ್ಯಾಟರ್ನ್ ಅನ್ಲಾಕ್ ಆಗುತ್ತದೆ.

ಆದರೆ ಈ ಸಾಫ್ಟ್‌‍ವೇರ್ ನಿಮಗೆ ಉಚಿತವಾಗಿ ದೊರೆಯುವುದಿಲ್ಲ ಇದೊಂದು ಪೇಯ್ಡ್ ಸಾಫ್ಟ್‌ವೇರ್ ಆಗಿದೆ, ಸರ್ವಿಸ್ ಸೆಂಟರ್ ಗೆ ಹೋಗಿ ನೂರಾರು ರೂಪಾಯಿ ವೆಚ್ಚ ಮಾಡುವ ಬದಲು ಸಾಧ್ಯವಾದ್ರೆ ಇದನ್ನು ಖರೀದಿಸುವುದು ಉತ್ತಮ, ಅಲ್ಲದೆ ಇದರಿಂದ ನಿಮ್ಮ ಮೊಬೈಲ್ ಮಾತ್ರವಲ್ಲದೆ ನಿಮ್ಮ ಸ್ನೇಹಿತರ, ಮನೆಯವರ ಪ್ಯಾಟರ್ನ್ ಕೂಡ ಅನ್ಲಾಕ್ ಮಾಡಿಕೊಡಬಹುದಲ್ಲವೇ. ಒಂದು ವೇಳೆ ಈ ಸಾಫ್ಟ್‌‍ವೇರ್-ನಿಂದ ನಿಮ್ಮ ಪ್ಯಾಟರ್ನ್ ಅನ್ಲಾಕ್ ಆಗದಿದ್ದರೆ, ಮೊಬೈಲ್ ಅನ್ನು ರಿಸೆಟ್ ಮಾಡಿ ಸ್ಮಾರ್ಟ್-ಫೋನ್ ಅನ್ಲಾಕ್ ಮಾಡಬಹುದು, ಫೋನ್ ಮೇಲೆ ಇರುವ ವಾಲ್ಯೂಮ್, ಹೋಮ್, ಪವರ್ ಬಟನ್‌ಗಳನ್ನು ಒಟ್ಟಿಗೆ ಪ್ರೆಸ್ ಮಾಡುವ ಮೂಲಕ ರಿಕವರಿ ಮೋಡ್‌ಗೆ ಹೋಗಿ ಫ್ಯಾಕ್ಟರಿ ರೀಸೆಟ್ ಮಾಡಿಕೊಳ್ಳಲು ಕೇಳುತ್ತದೆ, ಅದನ್ನು ಮಾಡಿದರೆ ನಿಮ್ಮ ಮೊಬೈಲಿನ ಪ್ಯಾಟರ್ನ್ ಹೋಗುತ್ತದೆ.

ಆದರೆ ಫ್ಯಾಕ್ಟರಿ ರಿಸೆಟ್ ಮಾಡುವುದರಿಂದ ನಿಮ್ಮ ಮೊಬೈಲಿನ ಒಳಗಿರುವ ಅಂದರೆ ಇಂಟರ್ನಲ್ ಮೆಮೊರಿಯ ಎಲ್ಲ ಮಾಹಿತಿ ಅಥವಾ ಡೇಟಾ ಅಳಸಿ ಹೋಗುತ್ತದೆ, ನೀವು ಹೊಸ ಮೊಬೈಲ್ ಕೊಂಡಾಗ ಹೇಗೆ ಖಾಲಿ ಇರುತ್ತದೆಯೋ ಹಾಗೆ ಆಗುತ್ತದೆ. ಮೆಮೊರಿ ಕಾರ್ಡ್-ನಲ್ಲಿರುವ ಡೇಟಾ ಹಾಗೆ ಇರುತ್ತದೆ, ಇನ್ನು ಸೇಫ್ ಅನಿಸಬೇಕಾದರೆ ಈ ಸೆಟ್ಟಿಂಗ್ ಮಾಡುವ ಮೊದಲು ಮೆಮೊರಿ ಕಾರ್ಡನ್ನು ಹೊರಗೆ ತೆಗೆದು ಬಿಡಿ.

ಈ ಸಲಹೆಗಳನ್ನು ಪಾಲಿಸಿ ಮತ್ತು ಬಿಂದಾಸ್ ಆಗಿ ಪ್ಯಾಟರ್ನ್ ಲಾಕ್ ಅನ್ನು ಅನ್ಲಾಕ್ ಮಾಡಿ…!

ಸಾಫ್ಟ್‌‍ವೇರ್ ಡೌನ್ಲೋಡ್ ಮಾಡಲು www.wondershare.com ಕ್ಲಿಕ್ ಮಾಡಿ.