ಕೂದಲು ಉದುರುವಿಕೆಯನ್ನು ತಡೆಯಲು ದಾಸವಾಳ ರಾಮಬಾಣ..!!

0
1427

ಈಗಿನ ಕಾಲದಲ್ಲಿ ಯಾರ ತಲೆಯನ್ನು ನೋಡಿದರೂ.. ತಲೆ ಎಂಬ ಯುದ್ಧ ಭೂಮಿಯಲ್ಲಿ ಕೂದಲು ಎಂಬ ಸೈನಿಕ ಸಾಯುತ್ತಲೇ ಬರುತ್ತಿದ್ದಾನೆ.. ಕೂದಲು ಹೆಚ್ಚಿಗೆ ಬೆಳೆಯುವುದಿರಲಿ, ಇರುವ ಕೂದಲನ್ನು ಕಾಪಾಡಿಕೊಂಡರೆ ಸಾಕಾಗಿದೆ..

ಕೂದಲು ಉದುರುವುದನ್ನು ತಡೆಯಲು ನಮ್ಮ ಮನೆಗಳಲ್ಲೇ ಬೆಳೆಯುವ ದಾಸವಾಳದ ಗಿಡ ಒಂದು ರಾಮಬಾಣವೇ ಸರಿ.. ಹೌದು ನಿಮ್ಮ ಮನೆಯಲ್ಲಿ ದಾಸವಾಳದ ಗಿಡ ಇದ್ದರೆ ಇನ್ನು ಕೂದಲು ಉದುರುವಿಕೆಗೆ ಗುಡ್ ಬೈ ಹೇಳಿ..

ದಾಸವಾಳದ ಹೂ ಮತ್ತು ಎಲೆಗಳನ್ನು ಚೆನ್ನಾಗಿ ಒಣಗಿಸಿಲು ಇಡಿ.. ಒಣಗಿದ ನಂತರ ಅದನ್ನು ಪುಡಿ ಮಾಡಿಟ್ಟುಕೊಂಡು ಮೆಂತ್ಯ ಪುಡಿಯೊಂದಿಗೆ 2 ಸ್ಪೂನ್ ದಾಸವಾಳದ ಹೂ ಮತ್ತು ಎಲೆಯ ಪುಡಿಯನ್ನು ಕಲಸಿಕೊಂಡು ತಲೆಗೆ ಹಚ್ಚಿಕೊಳ್ಳಿ.. ಹಚ್ಚುಕೊಂಡ ಒಂದು ಘಂಟೆಯ ನಂತರ ಸ್ನಾನ ಮಾಡಿ.. ಸ್ನಾನ ಮಾಡಿದಾಗ ಎಲೆಯ ಹಿಟ್ಟು ತಲೆಯಲ್ಲೇ ಇದ್ದರೇ ಯೋಚಿಸಬೇಡಿ.. ಕೂದಲನ್ನು ಒಣಗಿಸಿದ ನಂತರ ಅದು ಸ್ವಚ್ಛವಾಗುವುದು..

ಒಣಗಿಸಲು ಸಮಯವಿಲ್ಲ ಎನ್ನುವುದಾದರೆ, ಹಸಿ ಎಲೆ ಮತ್ತು ಹೂ ಗಳನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರಿನ ಜೊತೆ ರುಬ್ಬಿಕೊಂಡು ಅದನ್ನು ಮೆಂತ್ಯ ಪುಡಿಯೊಂದಿಗೆ ಕಲಸಿ ಬಳಸಿ.. ಕೂದಲು ಉದುರುವುದು ಕ್ರಮೇಣ ಕಡಿಮೆಯಾಗುತ್ತ ಬರುವುದು.. ಸಾಧ್ಯವಾದರೆ ಸೀಗೆ ಕಾಯಿ ಪುಡಿಯನ್ನು ಸ್ನಾನಕ್ಕೆ ಬಳಸಿ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840