ಕುಡಿದು ವಾಹನ ಚಲಾಯಿಸುವ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಮಾಸ್ಟರ್ ಮೈಂಡ್ ಪ್ಲಾನ್ ಫುಲ್ ಸಕ್ಸಸ್; ಏನಿದು ಪ್ಲಾನ್??

0
567

ಒಂದು ವೇಳೆ ವಾಹನದ ಪತ್ರಗಳು, ಹೆಲ್ಮಟ್, ಇಲ್ಲದೆ ಅಥವಾ ತ್ರಿಬಲ್ ರೈಡಿಂಗ್ ಮಾಡಿ ಪೊಲೀಸ್ ಕೈಯಲ್ಲಿ ಸಿಕ್ಕಿಕೊಂಡರು ಎಣ್ಣೆ ಹೊಡಿದು ಸಿಕ್ಕಿಕೊಂಡರೆ ಅದೋ ಗತಿಯಾಗುತ್ತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚಿಗೆ ಅಂತೂ ವಾಹನ ಸಂಚಾರಿ ನಿಯಮಗಳು ಕೂಡ ಬದಲಾಗಿದ್ದು, ಒಂದು ವೇಳೆ ಅಪ್ಪಿತಪ್ಪಿವೂ ಮಧ್ಯಪಾನ ಮಾಡಿ ವಾಹನ ಓಡಿಸಿದರೆ 10,000 ರಕ್ಕೂ ಕಡಿಮೆ ಇಲ್ಲದಂತೆ ದಂಡ ಕಟ್ಟಬೇಕಾಗುತ್ತೆ. ಜೊತೆಗೆ ಜೈಲು ಶಿಕ್ಷೆಗೆ ಕೂಡ ಅನುಭವಿಸಬೇಕಾಗುತ್ತೆ ಎನ್ನುವುದು ಇಡಿ ದೇಶದಲ್ಲಿ ಕುಡುಕರಿಗೆ ಭಯಹುಟ್ಟಿಸಿದೆ. ಅದರಂತೆ ಸರ್ಕಾರದ ಆದೇಶದಂತೆ ಪೊಲೀಸರು ಎಷ್ಟೇ ಸಂಚು ಮಾಡಿ ಮಧ್ಯರಾತ್ರಿ ರಸ್ತೆಯಲ್ಲಿ ನಿಂತರು ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುವ ಪ್ಲಾನ್ ಮಾಡೇಬಿಟ್ಟಿದ್ದಾರೆ.

Also read: ಹೆಲ್ಮೆಟ್ ಧರಿಸದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತ್ತು..

ಹೌದು ಪೊಲೀಸ್ ಅಧಿಕಾರಿಗಳು ಚಾಪೆ ಕೆಳಗೆ ನುಸುಕಿದರೆ ಕುಡುಕರು ನಾವು, ರಂಗೋಲಿ ಕೆಳಗೆ ನುಸುಕುತ್ತೇವೆ ಎನ್ನುವಂತೆ ಮಾಡಿದ ಪ್ಲಾನ್ಯೊಂದು ಸಕ್ಸಸ್ ಆಗಿದ್ದು ಹೈದರಾಬಾದ್-ನಲ್ಲಿ ಅದರದೇ ಹವಾ ಶುರುವಾಗಿದೆ. ಅದೇನ್ ಅಂದರೆ. ಮದ್ಯ ಸೇವಿಸಿ ರಾತ್ರಿ ಮನೆಗೆ ತೆರಳುವ ಜನರು ಮಹಾನಗರಗಳಲ್ಲಿ ಎದುರಿಸುವ ಬಹುದೊಡ್ಡ ಸಮಸ್ಯೆ ರಸ್ತೆ ಮಧ್ಯೆ ಅಡ್ಡಗಟ್ಟಿಪೊಲೀಸರು ನಡೆಸುವ ತಪಾಸಣೆ. ಇದರಿಂದ ಬೇಸತ್ತ ಹೈದರಾಬಾದ್‌ನ ಮದ್ಯಪ್ರಿಯರು ಇದಕ್ಕೂ ಪರಿಹಾರ ಹುಡುಕಿಕೊಂಡಿದ್ದಾರೆ. ಪೊಲೀಸರಿಂದ ಪಾರಾಗಲು ಹಲವು ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಮಾಡಿಕೊಂಡಿದ್ದಾರೆ. ಈ ಐಡಿಯಾ ಸೂಪರ್‌ಹಿಟ್‌ ಆಗಿದ್ದು ಈ ಗ್ರೂಪ್-ಗೆ ದಿನಕ್ಕೊಂದಕ್ಕೆ 100-200 ಜನ ಸೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Also read: ಕೇಂದ್ರ ಸರ್ಕಾರದಿಂದ ಮತ್ತೆ ಬಿಗ್ ಶಾಕ್; ವಾಹನಗಳ ನೋಂದಣಿ ಶುಲ್ಕ ಹೆಚ್ಚಿಸಲು ಮುಂದಾದ ಸರ್ಕಾರ, ಯಾವ ವಾಹನಗಳಿಗೆ ಎಷ್ಟು ಹೆಚ್ಚಳ??

ಏನಿದು ಮದ್ಯಪ್ರಿಯರ ಪ್ಲಾನ್?

ಹೈದರಾಬಾದ್‌ನಲ್ಲಿ ಮದ್ಯಪ್ರಿಯರು whatsapp ಗ್ರೂಪ್ ಮಾಡಿದ್ದು ಅದರಲ್ಲಿ ಸಾವಿರಾರು ಜನರು ಇದ್ದಾರೆ. ಈ ಗ್ರೂಪ್ ನಲ್ಲಿದವರು ದಂಡದಿಂದ ಪಾರಾಗುತ್ತಿದ್ದಾರೆ. ಅದೇಗೆ ಅಂದರೆ ಒಂದು ನಿರ್ದಿಷ್ಟಪ್ರದೇಶದಲ್ಲಿ ಪೊಲೀಸರ ತಪಾಸಣೆ ನಡೆಯುತ್ತಿರುವುದು ಕಣ್ಣಿಗೆ ಬೀಳುತ್ತಿದ್ದಂತೆ ಅದನ್ನು ಕಂಡ ವ್ಯಕ್ತಿ ಮದ್ಯಪ್ರಿಯರ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಆ ಮಾರ್ಗಕ್ಕೆ ಬರಬೇಡಿ ಎಂದು ಸಲಹೆ ಮಾಡುತ್ತಾನೆ. ಇದೇ ರೀತಿ ವಿವಿಧ ರಸ್ತೆಗಳಲ್ಲಿ ಸಂಚರಿಸುವವರು ಪೊಲೀಸರನ್ನು ಕಂಡ ಕೂಡಲೇ ಮಾಹಿತಿ ರವಾನಿಸುತ್ತಾರೆ. ಇದರಿಂದಾಗಿ ಮದ್ಯ ಸೇವನೆ ಮಾಡಿದವರು ಬದಲಿ ಮಾರ್ಗದಲ್ಲಿ ತೆರಳಲು ಅನುಕೂಲವಾಗಿದೆ. ಈ ರೀತಿಯ ಹಲವಾರು ವಾಟ್ಸ್‌ಗ್ರೂಪ್‌ಗಳು ಇದ್ದು, ಕ್ಷಣಕ್ಷಣಕ್ಕೂ ಮಾಹಿತಿ ಸಿಗುವಂತಾಗಿದೆ.

Also read: ಇನ್ಮುಂದೆ ಯಾವುದೇ ಸ್ಥಳದಲ್ಲಿ ಸಾರ್ವಜನಿಕರು ಶೌಚಾಲಯಕ್ಕೆ ಹೋಗಲು ಪರದಾಡಬೇಕಿಲ್ಲ; ಉಚಿತವಾಗಿ 5 Star Hotel ಗಳಲ್ಲಿವೂ ಶೌಚಾಲಯ ಬಳಕೆ ಮಾಡಬಹುದು!!

ಈ ಗ್ರೂಪ್-ನಲ್ಲಿ ಹೆಚ್ಚಾಗಿ ಮಾಹಿತಿ ಬರುವುದು ಸಂಜೆ 6 ಘಂಟೆಯಿಂದ ಶುರುವಾಗುತ್ತೇವೆ ಅಂತೆ. ಇದರ ಜತೆಗೆ ಪೊಲೀಸರಿಂದ ಪಾರಾಗಲು ಕೆಲವೊಂದು ಜಂಕ್ಷನ್‌ಗಳಲ್ಲಿ ಚಾಲಕರೂ ಸಿಗುತ್ತಿದ್ದಾರೆ! ಒಂದು ನಿರ್ದಿಷ್ಟದೂರದವರೆಗೆ ಮದ್ಯಪ್ರಿಯರನ್ನು ಸಾಗಿಸಿ, ಅವರು ಹಣ ಪಡೆದು ಕೆಳಗಿಳಿಯುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಇದು ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ಅಲ್ಲಿನ ಪೊಲೀಸರು ಹೈದರಾಬಾದ್-ನಲ್ಲಿ ಕುಡಿದು ವಾಹನ ಓಡಿಸುವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಹೆಮ್ಮೆಯಲ್ಲಿರು ಆದರೆ ಕುಡುಕರು ಮಾಡಿದ ಸತ್ಯವನ್ನು ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಮದ್ಯಪ್ರಿಯರು ಮಾಡಿಕೊಂಡಿರುವ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಬಗ್ಗೆ ಈಗ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪೊಲೀಸರನ್ನು ಒಟ್ಟುಗೂಡಿಸಿ ಒಂದೇ ಕಡೆ ತಪಾಸಣೆ ಮಾಡುವ ಬದಲು, ಹಲವು ಸ್ಥಳಗಳಲ್ಲಿ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಎಂದು ತಿಳಿಸಿದ್ದಾರೆ.