ನಕಲಿ ಔಷಧಿಗಳ ಹಾವಳಿ ಜಾಸ್ತಿಯಾಗಿವೆ, ಹೀಗೆ ಮಾಡೋದ್ರಿಂದ ನೀವು ಕೊಂಡುಕೊಂಡ ಔಷಧಿ ಅಸಲೀನಾ, ನಕಲೀನಾ ಅಂತ ತಿಳ್ಕೊಳ್ಳಬಹುದು….

1
2801
how_to_spot_real_and_fake_drugs

Kannada News | kannada Useful Tips

ಲಾಭದ ದುರಾಸೆಯಿಂದ ವ್ಯಾಪಾರಿಗಳು ಆಹಾರವನ್ನು ಕಲಬೆರಕೆ ಮಾಡುತ್ತಾರೆ ಎಂದು ನೀವು ಕೇಳಿದ್ದೀರಾ ಆದರೆ ನಮ್ಮ ರೋಗಗಳನ್ನು ಗುಣಪಡಿಸಬೇಕಿದ್ದ ಔಷಧಿಗಳು ಸಹ ಕಲಬೆರಕೆ ಆಗುತ್ತಿವೆ ಎಂದರೆ ಕಲಬೆರಕೆ ದಂಧೆ ಯಾವ ಪ್ರಮಾಣದಲ್ಲಿದೆ ಎಂದು ಊಹಿಸಬಹುದು. ಸಾಮಾನ್ಯವಾಗಿ ಜನರಿಗೆ ತಾವು ತರುವ ಮೆಡಿಸೆನ್ಸ್ ಎಷ್ಟರಮಟ್ಟಿಗೆ ಅಸಲಿ ಇದೆ ಯಾರು ನೋಡಲಿಕ್ಕೆ ಹೋಗುವುದಿಲ್ಲ ಕಾರಣ ಮೆಡಿಸೆನ್ಸ್ ಬಗ್ಗೆ ಅವರಲ್ಲಿ ಹೆಚ್ಚಿನ ಮಾಹಿತಿ ಇರುವುದಿಲ್ಲ ಇದನ್ನೇ ಬಂಡವಾಳವನ್ನಾಗಿಸಿಕೊಂಡು ಕೆಲವರು ಲಾಭದ ದುರಾಸೆ ಇಂದ ನಕಲಿ ಮೆಡಿಸೆನ್ಸ್ಗಳನ್ನು ಮಾರುತ್ತಾರೆ.

ಇತ್ತೀಚಿಗೆ ಈ ನಕಲಿ ಔಷಧಿಗಳ ಮಾರಾಟ ಹೆಚ್ಚುತ್ತಿದೆ. ಇಂತಹ ನಕಲಿ ಔಷಧಿಗಳಲ್ಲಿ ಮೂಲ ರಾಸಾಯನಿಕ ತೀರ ಕಡಿಮೆ ಇಲ್ಲವೇ ತೀರ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಹಲವು ಕಡೆ ಇಲಿ ಪಾಷಾಣವನ್ನು ಕೂಡ ಪತ್ತೆ ಹಚ್ಚಲಾಗಿದೆಯಂತೆ. ಹೃದ್ರೋಗ, ಆರ್ಥ್ರೈಟಿಸ್, ಆಸ್ತಮಾ, ಏಡ್ಸ್, ಕ್ಯಾನ್ಸರ್ ಮುಂತಾದ ದೊಡ್ಡ ರೋಗಗಳಿಗೂ ನಕಲಿ ಔಷಧಿಗಳು ಈಗಾಗಲೇ ಸಿಗುವುದು ಕಂಡುಬರುತ್ತಿದೆ. ಈ ನಕಲಿ ಔಷಧಿಗಳನ್ನು ನೋಡಿದರೆ ನಕಲಿ ಅಂತ ಹೇಳಕ್ಕಾಗಲ್ಲ.

ಇಂತಹ ನಕಲಿ ಔಷಧಿಗಳನ್ನು ಹೇಗೆ ಪತ್ತೆಹಚ್ಚಬೇಕು ಎಂಬುವುದನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ.

SMS ಮೂಲಕ ನೀವು ಕೊಂಡುಕೊಳ್ಳಬಹುದು:

ನೀವು ಔಷಧಿ ಅಂಗಡಿಯಲ್ಲಿ ಕೊಳ್ಳುವ ಪ್ರತಿ ಟ್ಯಾಬ್ಲೆಟ್ ಮೇಲೆ 9 ಅಂಕೆಗಳ ಯೂನೀಕ್ ಐಡಿ ನಂಬರ್ ಕಡ್ಡಾಯವಾಗಿ ಇರುತ್ತದೆ. ಈ ನಂಬರ್‌ನ್ನು ಎಸ್ಎಂಎಸ್ ರೂಪದಲ್ಲಿ ಟೈಪಿಸಿ 9901099010 ಎಂಬ ಫೋನ್ ನಂಬರ್‌ಗೆ ಕಳುಹಿಸಬೇಕು. ಕೂಡಲೆ ನಮಗೆ ಇನ್ನೊಂದು ಮೇಸೇಜ್ ಬರುತ್ತದೆ. ಅದರಲ್ಲಿನ ವಿವರಗಳನ್ನು ಹೋಲಿಸಿ ನಾವು ಕೊಂಡ ಮೆಡಿಸಿನ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿದುಕೊಳ್ಳಬಹುದು.

ಒಂದು ವೇಳೆ ಎಸ್ಎಂಎಸ್‌ನಲ್ಲಿನ ಮಾಹಿತಿ, ನಾವು ಕೊಂಡ ಮೆಡಿಸಿನ್ ವಿವರಗಳು ಮ್ಯಾಚ್ ಆಗದಿದ್ದರೆ ಆ ಮೆಡಿಸಿನ್ ನಕಲಿ ಎಂದರ್ಥ. ಇದರಿಂದ ನಮಗೆ ಬಂದ ಎಸ್ಎಂಎಸ್‌ನ್ನು ಮೇಲೆ ತಿಳಿಸಿದ ನಂಬರ್‌ಗೆ ರಿಪ್ಲೈ ಮಾಡಿದರೂ ಸಾಕು, ಕೂಡಲೆ ದೂರು ದಾಖಲಾಗುತ್ತದೆ. ನಮಗೆ ನ್ಯಾಯ ಸಿಗುತ್ತದೆ.

ವೆಬ್‌ಸೈಟ್‌ ಮೂಲಕ ಡಿಸಿನ್ ಅಸಲಿಯೇ, ನಕಲಿಯೇ ಎಂಬುದನ್ನು ಗುರು


ವೆಬ್ಸೈಟ್ ಮೂಲಕ ತಿಳಿಸಬಹುದು:

https://verify.pharmasecure.com/india/ ಎಂಬ ವೆಬ್‌ಸೈಟ್‌ಗೆ ಹೋಗಿ ನಮ್ಮ ಮೊಬೈಲ್ ನಂಬರ್, ಮೆಡಿಸಿನ್ ಪ್ಯಾಕ್ ಮೇಲಿರುವ 9 ಅಂಕೆಗಳ ಅಥೆಂಟಿಕೇಷನ್ ಕೋಡ್, ವರ್ಡ್ ವೆರಿಫಿಕೇಷನ್ ನಮೂದಿಸಬೇಕು. ಆ ಬಳಿಕ ನಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. ಅದನ್ನು ಸಬ್‌ಮಿಟ್ ಮಾಡಿದರೆ ಅದು ಅಸಲಿಯೇ ಅಥವಾ ನಕಲಿಯೇ ಎಂಬುದು ಗೊತ್ತಾಗುತ್ತದೆ.

ನಿಮ್ಮ ಔಷಧಿಯನ್ನು ಸ್ಕ್ಯಾನ್ ಮಾಡುವ ಆನ್ಲೈನ್ ಅಪ್ಲಿಕೇಶನ್ ಬಳಸಿ.

ಮೆಡಿಸೆನ್ಸ್ ಗಳನ್ನು ಪರೀಕ್ಷಿಸುವ ಒಂದು ಉತ್ತಮ ವಿಧಾನ ಯಾವುದೆಂದರೆ ಔಷಧವನ್ನು ಸ್ಕ್ಯಾನ್ ಮಾಡುವಂತಹ ಅಪ್ಲಿಕೇಶನ್ ಅನ್ನು ಬಳಸುವುದು ಇದರಿಂದ ಕೆಲವೇ ಸೆಕೆಂಡುಗಳಲ್ಲಿ ಮೆಡಿಸೆನ್ಸ್ಗಳ ಮಾಹಿತಿಯನ್ನು ನೀಡುತ್ತದೆ. ಈ ಅಪ್ಲಿಕೇಶನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ genuinemeds.launchrock.com ನಿಮ್ಮ ಔಷಧವು ನಿಜವಾಗಿದೆಯೇ ಎಂದು ಪರಿಶೀಲಿಸಿ.

ಈ ಎಲ್ಲ ವಿಧಾನಗಳನ್ನು ಬಳಸುವುದರಿಂದ ನಕಲಿ ಮೆಡಿಸೆನ್ಸ್ ಗಳಿಂದ ನಾವು ಎಚ್ಚರಿಕೆ ವಹಿಸಬಹುದು. ಬಹಳಷ್ಟು ಮಂದಿಗೆ ಉಪಯುಕ್ತವಾಗಿರುವ ಈ ಮಾಹಿತಿಯನ್ನು ನಾಲ್ಕು ಮಂದಿಗೆ ತಿಳಿಸಿ. ಇದರಿಂದ ನಕಲಿ ಫಾರ್ಮಾ ಕಂಪೆನಿಗಳು ಮಾಡುತ್ತಿರುವ ಮೋಸವನ್ನು ತಡೆಯಬಹುದು.

Also Read: ಮಗುವಿನ ಅಳುವನ್ನು ನಿಲ್ಲಿಸಲು ಅನುಸರಿಸಬಹುದಾದ ಸುಲಭ ಹಾಗೂ ಪರಿಣಾಮಕಾರಿ ಕ್ರಮ…