ಪೆಟ್ರೋಲ್ ಪಂಪ್-ನಲ್ಲಿ ಚಿಪ್ ಹಾಕಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಪಂಪ್-ಅನ್ನು ಸೀಜ್ ಮಾಡಿದ ಪೊಲೀಸರು, ಇನ್ನೆಷ್ಟು ಹೀಗೆ ಮೋಸ ಮಾಡುತ್ತಿವೆಯೋ??

0
890

ಮಹಾರಾಷ್ಟ್ರದ ಪುಣೆ ಜಿಲ್ಲೆಯ, ಹಡಪಸಾರ್ ನಲ್ಲಿ ಹಿಂದೂಸ್ತಾನ್ ಪೆಟ್ರೊಲಿಯಮ್ ಕಾರ್ಪರೇಷೆನ್ ಲಿಮಿಟೆಡ್ ಗೆ ಸೇರಿದ ಪೆಟ್ರೋಲ್ ಪಂಪ್ ಒಂದರಲ್ಲಿ ಪೆಟ್ರೋಲ್ ಕಳ್ಳತನವಾಗುತ್ತಿದೆ ಎಂಬ ದೂರು ಕೇಳಿಬಂದು ಹಿನ್ನೆಲೆಯಲ್ಲಿ HPCL ಅಧಿಕಾರಿಗಳು ತನಿಖೆ ನಡೆಸಿ, ಆರೋಪ ಸಾಬೀತಾದ ಹಿನ್ನಲೆಯಲ್ಲಿ ಪಂಪ್-ಗಳನ್ನು ಮುಚ್ಚಿ ಮುದ್ರೆ ಹಾಕಿ, ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಹಡಪಸಾರ್ ನ HPCL ಗೆ ಸೇರಿದ ಪೆಟ್ರೋಲ್ ಪಂಪ್-ನ,ಪೆಟ್ರೋಲ್ ಹಾಕುವ ಮಶೀನಿನಲ್ಲಿ ಯಂತ್ರ ಅಳವಡಿಸಿ (ELECTRONIC CHIP) ಪೆಟ್ರೋಲ್ ಅನ್ನು ಕದಿಯುತ್ತಿದ್ದರು. ಇಲ್ಲಿ ಪೆಟ್ರೋಲ್ ಹಾಕಿಸಿದ ಗ್ರಾಹಕರಿಗೆ ಕಡಿಮೆ ಮಾಪನದ ಪೆಟ್ರೋಲ್ ಬಂದಿದೆ, ಇದನ್ನು ಗುರುತಿಸಿ ದೂರು ನೀಡಿದ್ದಾರೆ.

ಈ ಪಂಪ್ ಸೀಲಿಂಗ್-ನಿಂದ ಮಾಲೀಕನ ಪರವಾನಗಿಯ ರದ್ದುಗೆ ಕಾರಣವಾಯಿತು ಎಂದು HPCL ಅಧಿಕಾರಿಗಳು ಹೇಳಿದರು. ಪಂಪ್ ಮಾಲೀಕರು, ಪಂಪ್ ಡೀಲರ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದು, ದಾಳಿ ನಡೆಸಿದ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ.

HPCL ಅಧಿಕಾರಿಗಳು “ಶುದ್ಧ ಇಂಧನ ಮತ್ತು ಪ್ರಾಮಾಣಿಕ ವ್ಯಾಪಾರಿ ಅಭ್ಯಾಸಗಳನ್ನು” ಖಚಿತಪಡಿಸಿಕೊಳ್ಳಲು ಪಂಪ್ ವಿರುದ್ಧದ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು. ಆದರೆ, ಮಾಹಿತಿ ಪ್ರಕಾರ ರಾಜ್ಯದಲ್ಲಿ ಇನ್ನು ಎರಡು ಈ ರೀತಿಯ ಪೆಟ್ರೋಲ್ ಪಂಪ್ ಗಳು ಇವೆ ಎಂದು ತಿಳಿದು ಬಂದಿದೆ.

ಇನ್ನು ಮಹಾರಾಷ್ಟ್ರದ ಥಾಣೆ ಪೊಲೀಸರ ಅಪರಾಧ ಶಾಖೆ ಪೆಟ್ರೋಲ್ ಪಂಪ್ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.