UPSC ಫಲಿತಾಂಶ ಪ್ರಕಟ; 24 ಕನ್ನಡಿಗರು ತೇರ್ಗಡೆ, 17ನೇ ರ‍್ಯಾಂಕ್ ಪೆಡದ ಕನ್ನಡಿಗ ಹುಬ್ಬಳ್ಳಿಯ ರಾಹುಲ್ ಕನಿಷ್ಕ್ ಕಟಾರಿಯಾ..

0
433

UPSC (ಕೇಂದ್ರ ಲೋಕಸೇವಾ ಆಯೋಗ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಿಸಿದ್ದು, ರಾಜ್ಯದ ಒಟ್ಟು 24 ಜನ ಆಯ್ಕೆಯಾಗಿದ್ದಾರೆ. ರಾಹುಲ್ ಶರಣಪ್ಪ ದೆಶಕ್ಕೆ 17ನೇ ರ್‍ಯಾಂಕ್‌ ಗಳಿಸಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಐಐಟಿ ಬಾಂಬೆ ಇಂಜಿನಿಯರ್ ಕನಿಷ್ಕ್ ಕಟಾರಿಯಾ ಅವರು ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿರುವ ಕಟಾರಿಯಾ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಗಣಿತವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪ್ರಥಮ ರ್ಯಾಂಕ್ ಗಳಿಸಿದ್ದಾರೆ.

Also read: ತನ್ನ ಮದುವೆಯ ಉಡುಗೊರೆ ಹಣವೆಲ್ಲವನ್ನು ಹುತಾತ್ಮರಾದ ಯೋಧರಿಗೆ ನೀಡಲು ಸಿದ್ದರಾದ ನವಜೋಡಿ; ಇವರ ನಿರ್ಧಾರ ಇಡಿ ದೇಶಕ್ಕೆ ಮಾದರಿ ಅಲ್ವ??

ಈ ಬಾರಿ ದೇಶಾದ್ಯಂತ ಅಂದಾಜು 5 ಲಕ್ಷ ಅಭ್ಯರ್ಥಿಗಳು ಪ್ರಿಲಿಮಿನರಿ ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 10,648 ಅಭ್ಯರ್ಥಿಗಳು ಮೇನ್ಸ್ ಗೆ ಉತ್ತೀರ್ಣರಾಗಿದ್ದರು. ಇವರಲ್ಲಿ ಅಂತಿಮವಾಗಿ 759 ಜನ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ಈ ಪೈಕಿ ರಾಜ್ಯದ 24 ಅಭ್ಯರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿದ್ದು ಹುಬ್ಬಳ್ಳಿಯ ರಾಹುಲ್ ಶರಣಪ್ಪ ಸಂಕನೂರ್ 17ನೇ ರ‍್ಯಾಂಕ್​ ಪಡೆದಿದ್ದಾರೆ.

ಮೊದಲ ಸ್ಥಾನದಲ್ಲಿ ಕನಿಷ್ಕ್​ ಕಟಾರಿಯಾ ಮತ್ತು ಅಕ್ಷತ್​ ಜೈನ್​ ಎರಡನೇ ಸ್ಥಾನ ಗಳಿಸಿದ್ದಾರೆ. ಈ ಇಬ್ಬರೂ ರಾಜಸ್ಥಾನ ರಾಜ್ಯದವರಾಗಿದ್ದಾರೆ. ಐದನೇ ರ್ಯಾಂಕ್ ಪಡೆದಿರುವ ಸೃಷ್ಠಿ ಜಯಂತ್ ದೇಶಮುಖ್ ಅವರು ಮಹಿಳಾ ಅಭ್ಯರ್ಥಿಗಳಲ್ಲಿ ಪ್ರಥಮರಾಗಿದ್ದಾರೆ. ಬಿ.ಇ.(ಕೆಮಿಕಲ್​ ಇಂಜಿನಿಯರ್​) ಪದವೀಧರೆಯಾಗಿರುವ ದೇಶಮುಖ್, ಭೂಪಾಲ್​ನ ರಾಜೀವ್ ಗಾಂಧಿ ಪ್ರೌದ್ಯೋಗಿಕ ವಿಶ್ವವಿದ್ಯಾಲಯ ವಿದ್ಯಾರ್ಥಿಯಾಗಿದ್ದಾರೆ.

Also read: ಮೋದಿ ಸರ್ಕಾರದಿಂದ 50 ಸಾವಿರ ರೂ ಕೋಟಿ ವೆಚ್ಚದಲ್ಲಿ 500 ಕಿಮೀ ದೂರದವರೆಗೆ ಗುರಿ ಇಡುವ 6 ಘಾತಕ ಜಲಾಂತರ್ಗಾಮಿ ನಿರ್ಮಾಣಕ್ಕೆ ಸಜ್ಜು; ಪಾಕ್, ಚೀನಾ ಡವಡವ..

ಈ ಬಾರಿ ಒಟ್ಟು 759 ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ 577 ಪುರುಷರು ಹಾಗೂ 182 ಮಹಿಳಾ ಅಭ್ಯರ್ಥಿಗಳಿದ್ದಾರೆ. ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್​ ಸೇವೆ ಮತ್ತು ಕೇಂದ್ರ ಸೇವೆಯ ಗ್ರೂಪ್​ ಎ ಹಾಗೂ ಬಿ ಹುದ್ದೆಗಳಿಗೆ ಶಿಫಾರಸು ಮಾಡಲಾಗಿದೆ.

ರಾಜ್ಯದಿಂದ ಆಯ್ಕೆಯಾದ 24 ಕನ್ನಡಿಗರು:

ರಾಹುಲ್​​ ಶರಣಪ್ಪ ಶಂಕನೂರ -17ನೇ ರ‍್ಯಾಂಕ್, ಲಕ್ಷ್ಮೀ ಎನ್​​ -45ನೇ ರ‍್ಯಾಂಕ್, ಆಕಾಶ್​​​​ ಎಸ್​​ -78ನೇ ರ‍್ಯಾಂಕ್, ಕೃತುಕಕಾ -100ನೇ ರ‍್ಯಾಂಕ್, ಕೌಶಿಕ್​​​​ ಎಚ್​​​ಆರ್​​​ -240ನೇರ‍್ಯಾಂಕ್, ವಿವೇಕ್​​ ಎಚ್​​​​ಬಿ -257ನೇ ರ‍್ಯಾಂಕ್, ನಿವೇದಿತಾ -303ನೇ ರ‍್ಯಾಂಕ್, ಗಿರೀಶ್​​ ಧರ್ಮರಾಜ್​​​ ಕಲಗೊಂಡ್​​​ -307ನೇ ರ‍್ಯಾಂಕ್, ಮಿರ್ಜಾ ಖಾದರ್​​​ ಬೈಗಿ -336ನೇ ರ‍್ಯಾಂಕ್, ತೇಜಸ್​​​​ ಯುಪಿ -338ನೇ ರ‍್ಯಾಂಕ್, ಹರ್ಷವರ್ಧನ್​​ ಬಿಜೆ -352ನೇ ರ‍್ಯಾಂಕ್, ಪಕೀರೆಶ್​​​ ಕಲ್ಲಪ್ಪ ಬಾದಾಮಿ -372ನೇರ‍್ಯಾಂಕ್, ಡಾ. ನಾಗಾರ್ಜುನ ಗೌಡ -418ನೇ ರ‍್ಯಾಂಕ್, ಅಶ್ವಿಜಾ ಬಿವಿ -423ನೇ ರ‍್ಯಾಂಕ್, ಮಂಜುನಾಥ್​​ ಆರ್​ -495ನೇ ರ‍್ಯಾಂಕ್, ಬ್ರಿಂದಾ ಎಸ್​​ -496ನೇ ರ‍್ಯಾಂಕ್, ಹೇಮಂಥ್​​​ -612ನೇ ರ‍್ಯಾಂಕ್, ಶೃತಿ ಎಂಕೆ -637ನೇ ರ‍್ಯಾಂಕ್, ವೆಂಕಟ್​​​ರಾಮ್​​​ -694ನೇ ರ‍್ಯಾಂಕ್, ಸಂತೋಷ ಹೆಚ್​​​ -753ನೇ ರ‍್ಯಾಂಕ್, ಅಶೋಕ್​​ ಕುಮಾರ್​ ಎಸ್​​ -711ನೇ ರ‍್ಯಾಂಕ್, ರಾಘವೇಂದ್ರ ಎನ್​​ -739ನೇ ರ‍್ಯಾಂಕ್, ಶಶಿಕಿರಣ್​​​ -754ನೇ ರ‍್ಯಾಂಕ್. ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.