ಚೆನ್ನೈನ ಬೀದಿಯಲ್ಲಿ ‘ಕಾಲಿಗೆ ಚಪ್ಪಲಿಯೂ ಇಲ್ಲದೆ, ಕೊಳಕು ಬಟ್ಟೆಯಲ್ಲಿ ಹುಚ್ಚ ವೆಂಕಟ್‌ ಅಲೆದಾಟ! ನಿಜ ಜಿವನದಲ್ಲಿವೂ ಹುಚ್ಚರಾದ್ರ ವೆಂಕಟ್??

0
377

ತನ್ನದೇ ಒಂದು ರೀತಿಯ ಟ್ರೆಂಡ್ ಹುಟ್ಟಿಸಿಕೊಂಡು ಸದಾ ಒಂದು ಹವದಲ್ಲಿರುವ ನನ್ನಮಗಂದ್., ನನ್ನ ಎಕ್ಡ, ಡೈಲಾಗ್ ಹೀರೋ ಹುಚ್ಚ ವೆಂಕಟ್ ಯಾರು ಊಹಿಸದ ರೀತಿಯಲ್ಲಿ ಜೀವನ ಮಾಡುತ್ತಿದ್ದು, ನೋಡುಗರಿಗೆ ಹಲವು ಆತಂಕ ಹುಟ್ಟಿಸುವಂತಿದೆ. ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಹುಚ್ಚ ವೆಂಕಟ್‌ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ಕನ್ನಡ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ ವೆಂಕಟ್‌ ಅವರ ರಕ್ಷಣೆಗೆ ಅವರ ಸ್ನೇಹಿತರು ಕುಟುಂಬದವರು ಸಹಾಯ ಮಾಡಿ ಎಂದು ಹೇಳಿಕೊಂಡಿದ್ದಾರೆ.

ಹುಚ್ಚನಾದ ಹುಚ್ಚ ವೆಂಕಟ್?

ಹೌದು ಕನ್ನಡ ನಟ ಹುಚ್ಚ ವೆಂಕಟ್‌ ಕೊಳಕು ಬಟ್ಟೆ, ಕಾಲಲ್ಲಿ ಚಪ್ಪಲಿ ಇಲ್ಲ, ಹುಚ್ಚನಂತೆ ಚೆನ್ನೈನ ಬೀದಿಯಲ್ಲಿ ನಟ ಹುಚ್ಚ ವೆಂಕಟ್ ಅಲೆದಾಡುತ್ತಿರುವ ವಿಡಿಯೋ ಮತ್ತು ಫೋಟೋ ವೈರಲ್ ಆಗಿದೆ. ಯುಎಫ್ ಓ ಕ್ಯೂಬ್ ಅಪ್ ಲೌಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ ‘ರಾಂಧವ’ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಗೆ ವೆಂಕಟ್ ಕಾಣಿಸಿಕೊಂಡಿದ್ದಾರೆ. ವೆಂಕಟ್ ಅವರನ್ನ ಕಂಡು ಅಚ್ಚರಿಯಾದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸ್ನೇಹಿತರು, ಅವರನ್ನ ಮಾತನಾಡಿಸಲು ಮುಂದಾಗಿದ್ದಾರೆ. ಆದ್ರೆ, ವೆಂಕಟ್ ಅವರಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲವಂತೆ. ನಟ-ನಿರ್ದೇಶಕನಾಗಿದ್ದರೂ ಮಾಡಿದ ಸಿನಿಮಾಗಳಿಗಿಂತ, ಆಡಿದ ಹುಚ್ಚಾಟಗಳಿಂದಲೇ ಹೆಸರು ಮಾಡಿದ ನಟ ಹುಚ್ಚವೆಂಕಟ್​. ಇಂತಹ ಹುಚ್ಚ ವೆಂಕಟ್ ಕೆಲವು ವರ್ಷಗಳ ಹಿಂದೆ ಕುಂತ್ರು ನಿಂತ್ರೂ ಸುದ್ದಿಯಾಗುತ್ತಿದ್ದರು.

ಕೆಲವು ವರ್ಷಗಳ ಹಿಂದೆ ಟಾಕ್ ಆಫ್ ದಿ ಟೌನ್ ಆಗಿದ್ದವು ಪಾಕಿಸ್ತಾನದಲ್ಲೂ ನನಗೆ ಅಭಿಮಾನಿಗಳ ಬಳಗ ಇದೆ ಅಂತಿದ್ದವರು ಇಂತಹ ಫೈರಿಂಗ್​ ಸ್ಟಾರ್​ ಈಗ ಕಾಲಿಗೆ ಚಪ್ಪಲಿ ಇಲ್ಲದೆ, ಹರಿದ ಬಟ್ಟೆ ತೊಟ್ಟು ಚೆನ್ನೈನ ರಸ್ತೆಗಳಲ್ಲಿ ಅಲೆದಾಡುತ್ತಿದ್ದಾರೆ. ‘ರಾಂಧವ’ ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸಹ ನಿರ್ಮಾಪಕ ಮಂಜುನಾಥ್‌ ಅವರು ಚಿತ್ರದ ಯುಎಫ್‌ಒ ಅಪ್‌ಲೋಡ್‌ಗಾಗಿ ಚೆನ್ನೈಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಹುಚ್ಚ ವೆಂಕಟ್‌ ಬಂದು ರೂಮ್ ಕೇಳಿದ್ದಾರೆ. ಆದರೆ ಚಪ್ಪಲಿ ಇಲ್ಲದೇ, ಗಡ್ಡ ಬಿಟ್ಟು, ಕೊಳಕು ಬಟ್ಟೆಹಾಕಿದ್ದ ಅವರಿಗೆ ಹೋಟೆಲ್‌ನವರು ರೂಮ್ ಕೊಡಲು ನಿರಾಕರಿಸಿದ್ದಾರೆ.

ಇದನ್ನು ಕಂಡ ಚಿತ್ರ ತಂಡ ಬಳಿಗೆ ಹೋಗಿ ಮಾತನಾಡಿಸಿದಾಗ ವೆಂಕಟ್‌ ಅಸ್ವಸ್ಥನ ರೀತಿ ವರ್ತಿಸಿದ್ದಾರೆ. ಜೊತೆಗೆ ತಕ್ಷಣ ಅಲ್ಲಿಂದ ಹೊರಟಿದ್ದಾರೆ. ಇತ್ತ ತಮ್ಮ ಕೆಲಸ ಮುಗಿಸಿ ವಾಪಸ್‌ ಹೊರಡುವಾಗ ಒಡಪಳನಿಯ ಬೀದಿಗಳಲ್ಲಿ ಅವರು ಸುತ್ತುತ್ತಿದ್ದದ್ದನ್ನು ಚಿತ್ರತಂಡ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ ಲೋಡ್‌ ಮಾಡಿದೆ. ಭುವನ್​ ಅಭಿನಯದ’ ರಾಂಧವ’ ಚಿತ್ರತಂಡದ ಸದಸ್ಯರೊಬ್ಬರು ಕೆಲಸದ ನಿಮಿತ್ತ ಚೆನೈಗೆ ಹೋಗಿದ್ದಾಗ ಈ ದೃಶ್ಯವನ್ನ ಸೆರೆಹಿಡಿದಿದ್ದಾರಂತೆ.

ತಕ್ಷಣ ಆ ವಿಡಿಯೋವನ್ನ ನಟ ಭುವನ್ ಅವರಿಗೆ ಕಳುಹಿಸಿದ್ದಾರೆ. ಅವರು ತಮ್ಮ ಫೇಸ್ ಬುಕ್‍ನಲ್ಲಿ ಹಂಚಿಕೊಂಡಿದ್ದು, “ಗೆಳೆಯರೆ, ಹುಚ್ಚ ವೆಂಕಟ್ ಯೂಟ್ಯೂ ಸ್ಟಾರ್ ಅವರು
ವಿಡಿಯೋ ನೋಡಿ ನನಗೆ ಕರಳು ಚಿವುಟಿದ ಹಾಗೆ ಆಯಿತು, ಹಾಕೋದಕ್ಕೆ ಕಾಲಿಗೆ ಚಪ್ಲೀನು ಇಲ್ದೆ ಚೆನ್ನೈನ ವೊಡಾಪಳನಿಯಲ್ಲಿ ಈ ರೀತಿ ಓಡಾಡುತ್ತಿರುವ ವಿಡಿಯೋ ನಮ್ಮ ರಾಂಧವ ಚಿತ್ರದ ಸದಸ್ಯರು ಕಳುಹಿಸಿಕೊಟ್ಟರು. ನಿಮಗೆ ಅವರ ಕುಟುಂಬ ಅಥವಾ ಗೆಳೆಯರು ಪರಿಚಯವಿದ್ದಲ್ಲಿ ನನಗೆ ತಿಳಿಸಿ. ದಯವಿಟ್ಟು. ಸಹಾಯ ಮಾಡೋಣ. ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ಅವರು ಸಿಕ್ಕಿದ ತಕ್ಷಣ ನಮ್ಮ ತಂಡದಿಂದ ಆಗುವ ನೆರವನ್ನು ನಾವು ಅವರಿಗೆ ನೀಡುತ್ತೇವೆ. ಈಗಾಗಲೇ ನಾವು ಅವರ ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಎಂದು ಹೇಳಿದ್ದಾರೆ.