ಹುಚ್ಚ ವೆಂಕಟ್-ರಿಂದ ಹೊಸ ಗಿಮಿಕ್ ಈ ಸರ್ತಿ ಚುನಾವಣೆ ಸ್ಪರ್ಧಿಸುತ್ತಾರಂತೆ!! ಯಾವ ಪಕ್ಷ? ಯಾವ ಕ್ಷೇತ್ರ ಗೊತ್ತ??

0
523

ನನ್ನ ಮಗಂದ್​​.. ಸರಿಯಾಗಬೇಕ್​.. ಖಂಡಿಸ್ತೀನಿ ಈ ಪದಗಳು ನಿಮ್ಮ ಕಿವಿಯ ಮೇಲೆ ಬಿದ್ರೆ ಸಾಕು.. ಬಾಚದ ಕೂದಲು.. ದಾಡಿ ತುಂಬಿರುವ ಮುಖ.. ಬ್ಲ್ಯೂ ಶರ್ಟ್​​​ ಕಾಣದೆ ಇರದು.. ಏಕೆಂದ್ರೆ ಕರ್ನಾಟದಲ್ಲಿ ಭಾರಿ ಹವಾ ಮಾಡಿದ ವ್ಯಕ್ತಿ ಇವರು.. ಬಿಗ್​ ಬಾಸ್​ ಮನೆಯಿಂದ ಹಿಡಿದು.. ಚುನಾವಣಾ ಅಖಾಡದವರೆಗೂ ಇವರ ಹವಾ ಜೋರು.. ಈ ಬಾರಿ ಇವರು ತೊಡೆ ತಟ್ಟಿ ರಣ ರಂಗ ಪ್ರವೇಶಿಸಲಿದ್ದಾರೆ.

ಹೌದು ಫೈರಿಂಗ್ ಸ್ಟಾರ್​ ಖ್ಯಾತಿಯ ಹುಚ್ಚಾ ವೆಂಕಟ್​.. ಈ ಬಾರಿ ಚುನುವಾಣೆಗೆ ಸ್ಪರ್ಧಿಸ್ತಾರಂತೆ.. ಯಾವುದೇ ಪಕ್ಷದ ಪರ ನಿಲ್ಲದ ವೆಂಕಟ್​, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣ ಪ್ರವೇಶಿಸಲಿದ್ದಾರೆ. ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟೋಕೆ ವೆಂಕಟ್​ ಪ್ಲಾನ್ ಮಾಡಿಕೊಂಡಿದ್ದಾರೆ.
ರಾಜರಾಜೇಶ್ವರಿ ನಗರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಂತೆ. ಈ ಬಗ್ಗೆ ವೆಂಕಟ್ ಅವ್ರೇ ಹೇಳಿದ್ದಾರೆ.‌ ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವ್ರು, ಮತದಾರರ ಓಲೈಕೆಗಾಗಿ ಕೆಲವು ರಾಜಕಾರಣಿಗಳು ಕುಕ್ಕರ್, ಹಣ, ಮಧ್ಯವನ್ನು ಹಂಚುತ್ತಿದ್ದಾರೆ. ಆದ್ರೆ ನಾನು ಇದ್ಯಾವುದನ್ನ ಹಂಚೊದಿಲ್ಲ‌. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸುತ್ತೇನೆ.

ನಗರದ ಪ್ರೆಸ್​​ಕ್ಲಬ್​​ನಲ್ಲಿ ಮಾತನಾಡಿದ ವೆಂಕಟ್​​, ಮುನಿರತ್ನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ರು. ನಾನು ಪ್ರಚಾರವನ್ನು ವಿಭಿನ್ನವಾಗಿ ಮಾಡ್ತೀನಿ.. ನಾನು ಮಾಡಿದ ಹಾಗೆ ಪ್ರವಾರವನ್ನು ಬೇರೆ ಯಾರೂ ಮಾಡಿಲ್ಲ, ಬೇರೆ ಯಾರು ಮಾಡೋಲ್ಲ..

ನನಗೆ ಯಾವುದೇ ಪಕ್ಷ ಟಿಕೆಟ್ ನೀಡಲ್ಲ. ಹಾಗಾಗಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ರಾಜರಾಜೇಶ್ವರಿ ಕ್ಷೇತ್ರದಿಂದ ಗೆದ್ದು ಮುಂದೆ ಮೋದಿ ಅವರ ಹತ್ರ ಮಾತಾಡಿ ಐದು ದಿನ ಪ್ರಧಾನಿ ಆಗ್ತೀನಿ. ಆ ಐದು ದಿನದಲ್ಲಿ ಜನರನ್ನು ಉದ್ಧಾರ ಮಾಡ್ತಿನಿ. ಆ ಮೇಲೆ ದೇಶ ಉದ್ಧಾರ ಮಾಡ್ತಿನಿ ಎಂದರು. ನಾನು ಬರಕ್​ ಓಬಾಮ್​ ಹಾಗೂ ನರೇಂದ್ರ ಮೋದಿ ತರಹ ಪ್ರಚಾರ ಮಾಡ್ತೀನಿ. ಮೋದಿಜಿ ಒಂದು ಮಾತು ಕೇಳಿಸಿಕೊಳ್ಳಿ ನಾನು ಐದು ದಿನ ಪ್ರಧಾನಿ ಯಾಗ್ತೀನಿ. ಆಗ ಜನರ ಕುಂದು ಕೊರತೆಗಳಿಗೆ ಸ್ಪಂದಿಸುತ್ತೇನೆ ಎಂದ್ರು.

ಇನ್ನು ನಾನು ಬೇರೆಯವರ ಹಾಗೆ ಕುಕ್ಕರ್​ ಕೊಡಲ್ಲ. ಕೆಲಸ ಮಾಡ್ತೀನಿ. ಒಂದು ವೇಳೆ ನೀವು ಓಟ್​ ಕೊಟ್ಟು ನಾನು ಕೆಲಸ ಮಾಡದೆ ಇದ್ದಲ್ಲಿ ನನಗೆ ಕುಕ್ಕರ್​ನಿಂದ ಹೊಡೆಯಿರಿ ಎಂದ್ರು.