ಕೇಂದ್ರ ಸರ್ಕಾರದಿಂದ ಮತ್ತೆ ಬಿಗ್ ಶಾಕ್; ವಾಹನಗಳ ನೋಂದಣಿ ಶುಲ್ಕ ಹೆಚ್ಚಿಸಲು ಮುಂದಾದ ಸರ್ಕಾರ, ಯಾವ ವಾಹನಗಳಿಗೆ ಎಷ್ಟು ಹೆಚ್ಚಳ??

0
288

ಕೇಂದ್ರ ಸರ್ಕಾರ ರಸ್ತೆ ನಿಯಮ, ವಾಹನ ಖರೀದಿ ಸೇರಿದಂತೆ ಹಲವು ಬದಲಾವಣೆ ಮಾಡಿ ವಾಹನ ಮಾಲೀಕರಿಗೆ ಈಗಾಗಲೇ ಶಾಕ್ ಕೊಟ್ಟಿದ್ದು, ಈಗ ಮತ್ತೊಂದು ಬಿಗ್ ಶಾಕ್ ನೀಡಲು ಹೊರಟಿದೆ. ಮೊದಲೇ ಹಲವು ನಿಯಮಗಳಿಂದ ಬೇಸತ್ತು ಹೊಗಿದ ಜನರಿಗೆ ನೋಂದಣಿ ಶುಲ್ಕದ ಬರೆಯನ್ನು ನೀಡಿದೇ. ಇದರಿಂದ ವಾಹನ ಸವಾಸವೇ ಸಾಕು ಎನ್ನುವ ಮಟ್ಟಕ್ಕೆ ಜನರು ಬಂದಿದ್ದಾರೆ, ಈ ನಿರ್ಧಾರವನ್ನು ಕೂಡ ಸರ್ಕಾರ ಸ್ವಾಗತಿಸಿ ಪೆಟ್ರೋಲ್-ಡೀಸೆಲ್ ವಾಹನಗಳನ್ನು ಬಿಟ್ಟು, ಎಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆಗೆ ಜನರು ಮುಂದಾಗಲಿ ಎನ್ನುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ.

Also read: ಬರಿ ದಂಡ ಹಾಕೋದ್ರಿಂದ ಬುದ್ದಿ ಕಲಿಯೋದಿಲ್ಲ ಅಂತ ಒನ್ ವೇ-ಯಲ್ಲಿ ಬೈಕ್ ಸವಾರಿ ಮಾಡಿದ 6 ಜನರಿಗೆ 2 ದಿನ ಜೈಲು ಶಿಕ್ಷೆ ನೀಡಿದ ಪೋಲಿಸ್!!

ಹೊಸ ವಾಹನಗಳ ನೋಂದಣಿ ಶುಲ್ಕ ಹೆಚ್ಚಳ?

ಹೌದು ಬೈಕ್, ಕಾರು ಬಳಕೆದಾರರು ಮತ್ತು ಹೊಸ ವಾಹನ ಖರೀದಿ ಮಾಡುವವರಿಗೆ ಶಾಕಿಂಗ್ ನ್ಯೂಸ್ ಲಭಿಸಿದ್ದು, ಹೊಸ ವಾಹನಗಳ ನೋಂದಣಿ ಶುಲ್ಕವನ್ನ ಗಣನೀಯವಾಗಿ ಹೆಚ್ಚಿಸಲು ಪ್ರಧಾನಿ ಮೋದಿ ಸರ್ಕಾರ ಯೋಚಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪ್ರಸ್ತಾವಿತ ನೋಂದಣಿ ಶುಲ್ಕ ಹೆಚ್ಚಳದಿಂದ ವಿನಾಯಿತಿ ನೀಡಲಾಗಿದೆ. ಇದೇ ವೇಳೆ ಪೆಟ್ರೋಲ್, ಡೀಸೆಲ್ ಬಳಕೆಗೆ ಕಡಿವಾಣ ಹಾಕುವ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ಹೊಸ ವಾಹನಗಳಿಗೆ ನೋಂದಣಿ ಶುಲ್ಕ ಈ ರೀತಿ ಹೆಚ್ಚಿಸುವ ಯೋಚನೆಯನ್ನು ಮಾಡಿದ್ದು ಇಲ್ಲಿದೆ ನೋಡಿ.

1. ಹೊಸ ಕಾರುಗಳ ನೋಂದಣಿ ಶುಲ್ಕ ವನ್ನು 600 ರೂ. ನಿಂದ 5 ಸಾವಿರ ರೂ.ಗೆ ಹೆಚ್ಚಳ.
2. ಹಳೆ ಕಾರುಗಳ ನೋಂದಣಿ ಮರು ಪರಿಷ್ಕರಣೆಗೆ 600 ರೂ. ನಿಂದ 10 ಸಾವಿರ ರೂ.ಗೆ ಹೆಚ್ಚಳ.
3. ಹೊಸ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕ 60 ರೂ. ನಿಂದ 1 ಸಾವಿರ ರೂ.ಗೆ ಏರಿಕೆ ಹಾಗೂ ದ್ವಿಚಕ್ರ ವಾಹನಗಳ ನೋಂದಣಿ ಮರು ಪರಿಷ್ಕರಣೆ 50 ರೂ. ನಿಂದ 2 ಸಾವಿರ ರೂ.ಗೆ ಏರಿಕೆ ಆಗುವ ಸಾಧ್ಯತೆ ಇದೆ.
4. ಹೊಸ ಕ್ಯಾಬ್‍ಗಳ ನೋಂದಣಿ ಶುಲ್ಕ 1 ಸಾವಿರ ರೂ. ನಿಂದ 10 ಸಾವಿರ ರೂ.
5. ಹಳೆ ಕ್ಯಾಬ್‍ಗಳ ನೋಂದಣಿ ಮರು ಪರಿಷ್ಕರಣೆಗೆ 1 ಸಾವಿರ ರೂ. ನಿಂದ 20 ಸಾವಿರ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ.
6. ವಿದೇಶದಿಂದ ಆಮದು ಮಾಡಿಕೊಳ್ಳುವ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕ ಮೊತ್ತ 2,500 ರೂ.ನಿಂದ 20 ಸಾವಿರ ರೂ.ಗೆ ಹೆಚ್ಚಳ ಆಗಲಿದೆ.
7. ಆಮದು ಮಾಡಿಕೊಳ್ಳುವ ಇತರೆ ವಾಹನಗಳ ನೋಂದಣಿ ಶುಲ್ಕ 5 ಸಾವಿರ ರೂ. ನಿಂದ 40 ಸಾವಿರ ರೂ.ಗೆ ಏರಿಕೆ ಆಗುವ ನಿರೀಕ್ಷೆ ಇದೆ.

Also read: `ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ಮಾಹಿತಿ ನೀಡಿದರೆ ಸಿಗಲಿದೆ ಆಕರ್ಷಕ ಬಹುಮಾನ..

ಈ ರೀತಿಯಲ್ಲಿ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬಳಕೆಗೆ ಕಡಿವಾಣ ಹಾಕಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ತಂತ್ರ ರೂಪಿಸಿದೆ ಎನ್ನಲಾಗಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಪ್ರಸ್ತಾವಿತ ನೋಂದಣಿ ಶುಲ್ಕ ಹೆಚ್ಚಳದಿಂದ ವಿನಾಯತಿ ನೀಡಲಾಗಿದೆ. ಇದು ಒಂದು ಕಡೆ ಒಳ್ಳೆಯ ಉಪಾಯವಾದರೆ ಇನ್ನೊಂದು ಕಡೆ ಮಧ್ಯಮ ವರ್ಗದ ಜನರನ್ನು ಪಜೀತಿಗೆ ತಳ್ಳುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಪೆಟ್ರೋಲ್-ಡೀಸೆಲ್ ವಾಹನಗಳನ್ನು ನಿಲ್ಲಿಸಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಖರೀದಿಸಲು ಸಾಧ್ಯವಾಗದೆ ಇರುವ ವಾಹನಗಳಿಗೆ ನೋದಣಿ, ಮರು ನೋಂದಣಿ ಮಾಡಿಸುವ ಜನರು ಹೆಚ್ಚಿನ ಹಣವನ್ನು ಕಟ್ಟಲಾಗದೆ ಒದ್ದಾಡುವಂತೆ ಆಗಿದೆ.